Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈನಲ್ಲಿ ಕೊನೆಯುಸಿರೆಳೆದಿದ್ದ ಡೀನ್‌ ಜೋನ್ಸ್‌ಗೆ ಕುಟುಂಬದ ಸದಸ್ಯರಿಂದ ಅಂತಿಮ ವಿದಾಯ

Family Bid Farewell To Dean Jones With A Lap Of The Iconic MCG

ಇತ್ತೀಚೆಗಷ್ಟೇ ಮುಂಬೈ ಹೋಟೆಲ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್‌ಗೆ ಅವರ ಕುಟುಂಬ ಆಸ್ಟ್ರೇಲಿಯಾದಲ್ಲಿ ಅಂತಿಮ ವಿದಾಯ ಹೇಳಿದೆ

ಪ್ರಖ್ಯಾತ ಎಂಸಿಜಿಯ ಖಾಲಿ ಮೈದಾನದಲಲ್ಇ ಜೋನ್ಸ್‌ರ ಹತ್ತಿರದ ಕುಟುಂಬದ ಸದಸ್ಯರು ಅವರಿಗೆ ಕೊನೆಯ ಗೌರವವನ್ನು ನೀಡಿದರು. ಎಲ್ಟನ್ ಜಾನ್ ಮತ್ತು ಐಎನ್‌ಎಕ್ಸ್‌ಎಸ್ ರಾಗಗಳನ್ನು ನುಡಿಸುತ್ತಾ ಎಂಸಿಜಿ ಮೈದಾನದ ಒಂದು ಸುತ್ತು ಬರಲಾಯಿತು.

ಕೋವಿಡ್-19 ನಿಬಂಧನೆಗಳ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಕೇವಲ 10 ಜನರು ಮಾತ್ರ ಇದ್ದರು. ಡೀನ್ ಜೋನ್ಸ್ ಶವಪೆಟ್ಟಿಗೆಯನ್ನು ಎಂಸಿಜಿ ಮೈದಾನದ ಒಂದು ಸುತ್ತು ತಂದು ಹೃತ್ಪೂರ್ವಕ ಗೌರವ ಸಲ್ಲಿಸಲಾಯಿತು.

ತಮ್ಮ ವೃತ್ತಿಜೀವನದಲ್ಲಿ ಆಡಿದ ಒಟ್ಟು 52 ಟೆಸ್ಟ್ ಪಂದ್ಯಗಳನ್ನ ಆಡಿದ್ದ ಡೀನ್ ಜೋನ್ಸ್‌ ಐಪಿಎಲ್ 13ನೇ ಆವೃತ್ತಿಯ ವೀಕ್ಷಕ ವಿವರಣೆಗಾರರಾಗಿ ಮುಂಬೈನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ದುರದೃಷ್ಟಕರ ಘಟನೆಯ ಸಮಯದಲ್ಲಿ ಅವರ ಸಹೋದ್ಯೋಗಿ ಮತ್ತು ಸ್ನೇಹಿತ ಬ್ರೆಟ್ ಲೀ ಅವರೊಂದಿಗೆ ಹಾಜರಿದ್ದರು ಮತ್ತು ಅವನನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರು, ಆದರೆ ಎಲ್ಲವೂ ವ್ಯರ್ಥವಾಯಿತು.

ಮುಂಬೈ ಹೋಟೆಲ್‌ನ ಲಾಬಿಯಲ್ಲಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಡೀನ್ ಜೋನ್ಸ್ ಜತೆಗಿದ್ದ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಹರಸಾಹಸಪಟ್ಟಿದ್ದರು.

Story first published: Thursday, October 8, 2020, 9:57 [IST]
Other articles published on Oct 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+