ವಿರಾಟ್ ಕೊಹ್ಲಿ ಬರ್ತ್‌ಡೇ: ವಿಶ್ ಮಾಡಲು ಫೋನ್ ನಂಬರ್‌ಗಾಗಿ ಅಭಿಮಾನಿಗಳ ಹುಡುಕಾಟ

ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್‌ಸ್ಟಾರ್, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಗುರುವಾರ (ನ.5) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜರು, ಸೆಲೆಬ್ರೆಟಿಗಳು, ಗೆಳೆಯರು ಸೇರಿದಂತೆ ಕೋಟ್ಯಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ದಿಗ್ಗಜ ಬ್ಯಾಟ್ಸ್‌ಮನ್ ಆಗಿರುವ ವಿರಾಟ್ ಕೊಹ್ಲಿಗೆ ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ವೇದಿಕೆಯಿಂದ ಬರುತ್ತಿರುವ ಶುಭಾಶಯಗಳನ್ನು ಗಮನಿಸಿದರೆ ಅವರ ಜನಪ್ರಿಯತೆ ಎಷ್ಟಿದೆ ಎಂಬುದು ಮನದಟ್ಟಾಗುತ್ತದೆ.
ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಹೇಗಾದರೂ ಮಾಡಿ ಖಾಸಗಿಯಾಗಿ ಶುಭಾಶಯ ತಿಳಿಸಲು ಸಾಧ್ಯವಾಗದೆ ಅನೇಕರು ಹತಾಶರಾಗಿದ್ದಾರೆ. ಹೇಗಾದರೂ ಮಾಡಿ ವಿರಾಟ್ ಕೊಹ್ಲಿಗೆ ಶುಭಾಶಯ ತಿಳಿಸಲೆಂದು ಗೂಗಲ್‌ನಲ್ಲಿ ಅವರ ಫೋನ್ ನಂಬರ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ಭಾರತದಲ್ಲಿನ ಗೂಗಲ್ ಹುಡುಕಾಟಗಳ ಪ್ರಕಾರ, ಅಭಿಮಾನಿಗಳು "ವಿರಾಟ್ ಕೊಹ್ಲಿಯ ಫೋನ್ ನಂಬರ್ ಏನು?" ಎಂಬ ಸರಳ ಪ್ರಶ್ನೆಯೊಂದಿಗೆ ಸರ್ಚ್ ಎಂಜಿನ್ ದೈತ್ಯ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.. ಅದು ಆಶ್ಚರ್ಯವೇನಿಲ್ಲ ಎಂಬಂತೆ, ಗೂಗಲ್‌ನಲ್ಲಿನ ಮತ್ತೊಂದು ಪ್ರಶ್ನೆಯು "ವಿರಾಟ್ ಕೊಹ್ಲಿ ವಾಟ್ಸಾಪ್ ಸ್ಟೇಟಸ್ ವಿಡಿಯೋ ಡೌನ್‌ಲೋಡ್" ಅನ್ನು ಕೂಡ ಅಭಿಮಾನಿಗಳು ಹುಡುಕಾಡಿದ್ದಾರೆ.
ಈ ಆಶ್ಚರ್ಯಕರ ಪ್ರಶ್ನೆಗಳು ವಿರಾಟ್ ಕೊಹ್ಲಿ ಕುರಿತು ಅಭಿಮಾನಿಗಳ ಕ್ರೇಜ್ ಎಷ್ಟಿದೆ ಎಂಬುದನ್ನು ಸಾಭೀತುಪಡಿಸುತ್ತದೆ. ಗೂಗಲ್‌ನಲ್ಲಿ ಇಂದು ಅತಿಹೆಚ್ಚು ಹುಡುಕಾಟ ನಡೆಸಿರುವುದು ಡೊನಾಲ್ಡ್ ಟ್ರಂಪ್ ಜ್ಯೂನಿಯರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಟ್ಟರೆ ನಂತರದಲ್ಲಿ ವಿರಾಟ್ ಕೊಹ್ಲಿ ಫೋನ್ ನಂಬರ್ ಹುಡುಕಾಟ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications