For Quick Alerts
ALLOW NOTIFICATIONS  
For Daily Alerts
 

76ನೇ ಶತಕ ಗಳಿಸಿದ ನಂತರ ವಿರಾಟ್ ಕೊಹ್ಲಿ ಸಂಭ್ರಮಾಚರಣೆ ಹೀಗಿರುತ್ತೆ: ವೈರಲ್ ಆಯ್ತು ವಿಡಿಯೋ

Fans Hail Virat Kohli After Seeing His Dance, Calling It A Celebration After He Hits 76th Century

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ಶತಕ ಗಳಿಸಿದ ವಿರಾಟ್ ಕೊಹ್ಲಿ, ಮೂರು ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕದ ಬರ ನೀಗಿಸಿಕೊಂಡರು. ಕೊಹ್ಲಿ ಅಮೋಘ ಶತಕದ ನೆರವಿನಿಂದ ಭಾರತ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡು, 4ನೇ ಟೆಸ್ಟ್ ಡ್ರಾ ಮಾಡಿಕೊಂಡಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ನಲ್ಲಿ ಕೊಹ್ಲಿ ತಾಳ್ಮೆಯ ಬ್ಯಾಟಿಂಗ್ ಮಾಡಿದರು. 64 ಎಸೆತಗಳಲ್ಲಿ 186 ರನ್ ಗಳಿಸಿದರು, ಇದರಲ್ಲಿ 15 ಬೌಂಡರಿಗಳು ಸೇರಿದ್ದವು.

ನಾಲ್ಕನೇ ಟೆಸ್ಟ್ ಮುಗಿದ ನಂತರ ವಿರಾಟ್ ಕೊಹ್ಲಿ ನಾರ್ವೇಜಿಯನ್ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಜೊತೆ ಮಾಡಿರುವ ಡ್ಯಾನ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಹಮದಾಬಾದ್‌ ಟೆಸ್ಟ್ ಮುಗಿದ ನಂತರ ಕೊಹ್ಲಿ ಈ ಡ್ಯಾನ್‌ ತಂಡದ ಸದಸ್ಯರನ್ನು ಭೇಟಿ ಮಾಡಿದ್ದರು.

ಮಂಗಳವಾರ ವಿರಾಟ್ ಕೊಹ್ಲಿ 'ಸ್ಟಿರಿಯೊ ನೇಷನ್' ಹಾಡು 'ಇಷ್ಕ್' ನಲ್ಲಿ ತಮ್ಮದೇ ಸ್ಟೈಲ್‌ನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡ್ಯಾನ್ಸ್ ತಂಡದ ಸದಸ್ಯರೊಬ್ಬರು ಕ್ರಿಕೆಟ್ ಬ್ಯಾಟ್ ಎತ್ತಿಕೊಂಡು ಕುತೂಹಲದಿಂದ ನೋಡುವ ದೃಶ್ಯದೊಂದಿಗೆ ವಿಡಿಯೋ ಆರಂಭವಾಗುತ್ತದೆ.

ಬಿಳಿ ಬಣ್ಣದ ಟೀ-ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ತೊಟ್ಟಿರುವ ಕೊಹ್ಲಿ ಅಲ್ಲಿಗೆ ಬರುತ್ತಾರೆ. ಡ್ಯಾನ್ಸ್ ತಂಡದ ಸದಸ್ಯನ ಕೈನಿಂದ ಬ್ಯಾಟ್ ಪಡೆದುಕೊಂಡು ನೃತ್ಯ ಮಾಡಲು ಶುರು ಮಾಡುತ್ತಾರೆ. ಕ್ವಿಕ್ ಸ್ಟೈಲ್‌ನ ಸದಸ್ಯರು ಸಹ ಕೊಹ್ಲಿ ಹೆಜ್ಜೆಗೆ ಜೊತೆಯಾಗುತ್ತಾರೆ.

Fans Hail Virat Kohli After Seeing His Dance, Calling It A Celebration After He Hits 76th Century

76ನೇ ಶತಕದ ಸಂಭ್ರಮಾಚರಣೆ ಎಂದ ಫ್ಯಾನ್ಸ್

ವಿರಾಟ್ ಕೊಹ್ಲಿ ಡ್ಯಾನ್ಸ್ ನೋಡಿ ಪತ್ನಿ ಅನುಷ್ಕಾ ಕೂಡ ಮೆಚ್ಚಿಕೊಂಡಿದ್ದಾರೆ. ಬೆಂಕಿಯ ಇಮೋಜಿಯೊಂದಿಗೆ ಅವರು ಕೊಹ್ಲಿ ಡ್ಯಾನ್ಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗೆ ಹರ್ಭಜನ್ ಸಿಂಗ್ ಕೂಡ ಕೊಹ್ಲಿ ಡ್ಯಾನ್ಸ್ ಅನ್ನು ಅದ್ಭುತ ಎಂದು ಕರೆದಿದ್ದಾರೆ.

ಕೊಹ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳ ಬಗೆ ಬಗೆಯ ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರಂತೂ ಇದು ವಿರಾಟ್ ಕೊಹ್ಲಿ 76ನೇ ಶತಕದ ಸಂಭ್ರಮಾಚರಣೆ ವಿಡಿಯೋ ಎಂದು ಹೇಳಿದ್ದಾರೆ.

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 75 ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ 76ನೇ ಶತಕ ಸಿಡಿಸುವ ಉತ್ಸಾಹದಲ್ಲಿದ್ದಾರೆ. 76ನೇ ಶತಕ ಗಳಿಸಿದ ನಂತರ ವಿರಾಟ್ ಕೊಹ್ಲಿ ಸಂಭ್ರಮಾಚರಣೆ ಮಾಡುವ ವಿಡಿಯೋ ಸೋರಿಕೆಯಾಗಿದೆ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.

ಜನಪ್ರಿಯ ನೃತ್ಯ ತಂಡ

ಡ್ಯಾನ್ಸ್ ವಿಡಿಯೋ ಹಂಚಿಕೊಳ್ಳುವ ಮುನ್ನ ಕೊಹ್ಲಿ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್‌ನೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದು, 'ನಾನು ಮುಂಬೈನಲ್ಲಿ ಯಾರನ್ನು ಭೇಟಿ ಮಾಡಿದ್ದೇನೆ ಎಂದು ಊಹಿಸಿ' ಎಂದು ತಲೆಬರಹ ನೀಡಿದ್ದರು.

ಕ್ವಿಕ್ ಸ್ಟೈಲ್‌ ಎನ್ನುವ ನೃತ್ಯ ಗುಂಪು ಅಂತರ್ಜಾಲದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಅವರ 'ಕಾಲಾ ಚಷ್ಮಾ' ಮತ್ತು 'ಸಾಡಿ ಗಲ್ಲಿ' ಹಾಡುಗಳು ಸಾಕಷ್ಟು ವೈರಲ್ ಆಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದರು.

Story first published: Wednesday, March 15, 2023, 14:05 [IST]
Other articles published on Mar 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+