ಪಠಾಣ್ ಪತ್ನಿ 'ಪೋಸ್' ಕಂಡು ಮಂದಿ ಕೆಂಗಣ್ಣು ಬೀರಿದ್ದೇಕೆ?
ಬೆಂಗಳೂರು, ಜುಲೈ 18: ಭಾರತ ಕ್ರಿಕೆಟ್ ತಂಡದ ಹಿರಿಯ ಆಲ್ ರೌಂಡರ್ ಇರ್ಫಾನ್ ಪಠಾಣ್ ಹಾಗೂ ಅವರ ಪತ್ನಿ ಫೋಟೋ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಇರ್ಫಾನ್ ಅವರ ಪತ್ನಿ ಸಫಾ ಬೇಗ್ ಅವರು ಇಸ್ಲಾಮ್ ಧರ್ಮ ವಿರೋಧಿ ಚಿತ್ರವನ್ನು ಹಾಕಿದ್ದಾರೆ ಎಂದು ಹಲವಾರು ಮಂದಿ ಆಕ್ಷೇಪಿಸಿದ್ದಾರೆ. ಈ ಹಿಂದೆ ಕೂಡಾ ಇರ್ಫಾನ್ ಅವರನ್ನು ಗುರಿಯನ್ನಾಗಿಸಿಕೊಂಡು ಇಸ್ಲಾಮ್ ಮೂಲಭೂತವಾದಿಗಳು ಟೀಕಿಸಿದ್ದರು.
ಕಾರಿನಲ್ಲಿ ಇರ್ಫಾನ್ ಹಾಗೂ ಅವರ ಪತ್ನಿ ಕುಳಿತಿರುವ ಚಿತ್ರದಲ್ಲಿ ಆಕ್ಷೇಪಾರ್ಹ ಸಂಗತಿ ಏನು ಕಾಣಿಸುವುದಿಲ್ಲ.
ಸಫಾ ಅವರು ತಮ್ಮ ಎರಡು ಕೈಗಳಿಂದ ಕಣ್ಣುಗಳನ್ನು ಹೊರತು ಪಡಿಸಿ ಸಂಪೂರ್ಣ ಮುಖ ಮುಚ್ಚಿಕೊಂಡಿದ್ದಾರೆ. ಫೋಟೋಗೆ ಬಂದಿರುವ ಕಾಮೆಂಟ್ ಗಳನ್ನು ಫೇಸ್ ಬುಕ್ ನಲ್ಲಿ ಓದಬಹುದು.

ಇರ್ಫಾನ್ ಪತ್ನಿ ಬಗ್ಗೆ ಆಕ್ಷೇಪ
ಇರ್ಫಾನ್ ಪಠಾಣ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ "This girl is trouble #love #wifey" ಮೆಸೇಜ್‌ನೊಂದಿಗೆ ಪತ್ನಿ ಜೊತೆಗಿನ ಫೋಟೊ ಹಾಕಿದ್ದರು. ಅದೀಗ ಚರ್ಚೆಯ ವಿಷಯವಾಗಿದೆ.

ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು
ಇರ್ಫಾನ್ ಪಠಾಣ್ ಅವರ ಪತ್ನಿ ಸಫಾ ಅವರು ಕೈ ಬೆರಳುಗಳಿಂದ ಮುಖ ಮುಚ್ಚಿಕೊಂಡು ಬರೀ ಕಣ್ಣು ಮಾತ್ರ ಕಾಣಿಸುವಂತೆ ಇರುವ ಚಿತ್ರದ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೆಕ್ಕಾದಲ್ಲಿ ಮದುವೆಯಾಗಿದ್ದರು
ಪಠಾಣ್ ಮೊದಲ ಬಾರಿಗೆ ದುಬೈನಲ್ಲಿ ಭೇಟಿ ಮಾಡಿದ್ದರು. ನಂತರ ಇಬ್ಬರಲ್ಲಿ ಆತ್ಮೀಯತೆ ಬೆಳೆದು, ಪ್ರೀತಿಸಲು ಆರಂಭಿಸಿದ್ದರು. ವಿವಾಹ ನಿಶ್ಚಯವಾದ ಮೂರು ತಿಂಗಳ ಬಳಿಕ, ಫೆಬ್ರವರಿ 04, 2016ರಂದು ಮೆಕ್ಕಾದಲ್ಲಿ ಮದುವೆಯಾಗಿದ್ದರು.

ಸಫಾ ಉಗುರಿನ ಬಣ್ಣ
ಇರ್ಫಾನ್ ಪತ್ನಿ ಸಫಾ ಅವರು ಹಾಕಿರುವ ಉಗುರಿನ ಬಣ್ಣದ ಬಗ್ಗೆ ಅಕ್ಷೇಪ ಕೇಳಿ ಬಂದಿದೆ. ಉಗುರಿಗೆ ಬಣ್ಣ ಹಾಕಬಾರದಿತ್ತು ಎಂದು ಹೇಳಿದ್ದಾರೆ.

ಕೆಲವರು ಬೆಂಬಲಿಸಿದ್ದಾರೆ
ಇರ್ಫಾನ್ ಪಠಾಣ್ ಹಾಗೂ ಅವರ ಪತ್ನಿ ಇರುವ ಚಿತ್ರದ ಬಗ್ಗೆ ಆಕ್ಷೇಪಗಳು ಕೇಳಿ ಬಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅನೇಕರು, ಇರ್ಫಾನ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications