'ಟಿ20 ವಿಶ್ವಕಪ್ ಲೈವ್ ವೀಕ್ಷಿಸಲು ಅಭಿಮಾನಿಗಳಿಗೆ ಅನುಮತಿಯಿದೆ, ಆದರೆ..!'

ಸಿಡ್ನಿ, ಜೂನ್ 20: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಪ್ರವೇಶಕ್ಕೆ ಒಂದು ವೇಳೆ 15 ತಂಡಗಳಿಗೆ ಅನುಮತಿ ನೀಡಿದರೆ ಮತ್ತೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ಲೈವ್ ಪಂದ್ಯ ವೀಕ್ಷಿಸುವುದನ್ನು ಯಾರಿಂದಲೂ ತಪ್ಪಿಸಲಾಗೋಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮಧ್ಯಂತರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ನಿಕ್ ಹಾಕ್ಲೆ ಹೇಳಿದ್ದಾರೆ.
ಅಧಿಕಾರಿಗಳು, ಬೆಂಬಲ ಸಿಬ್ಬಂದಿಯೊಂದಿಗೆ 15 ತಂಡಗಳಿಗೆ ಟೂರ್ನಿಗೆ ಆತಿಥ್ಯವಹಿಸಿ ವೀಕ್ಷಕರಿಗೆ ಅವಕಾಶ ಮಾಡಿಕೊಡುವುದು ಈಗಿನ ಪರಿಸ್ಥಿತಿಯಲ್ಲಿ ಸುಲಭದ ಮಾತಲ್ಲ ಎಂದೂ ಕೂಡ ಹಾಕ್ಲೆ ಹೇಳಿದ್ದಾರೆ. ಅಂದರೆ ವಿಶ್ವಕಪ್ ಟೂರ್ನಿ ಮುಂದೂಡಲ್ಪಡುವ ಸಾಧ್ಯತೆಯ ಸುಳಿವನ್ನು ಹಾಕ್ಲೆ ನೀಡಿದ್ದಾರೆ.
'ಇತ್ತೀಚಿನ ವಾರಗಳಲ್ಲಿ ನಾವು ಅರ್ಥ ಮಾಡಿಕೊಂಡಿರುವ ವಿಚಾರವೇನೆಂದರೆ, ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಜನಸಂದಣಿ ಬರುವ ಸಾಧ್ಯತೆಯಿದೆ. ಆದರೆ ನಮ್ಮ ಮುಂದಿರುವ ಪ್ರಮುಖ ಸವಾಲೆಂದರೆ ಒಂದು ದೇಶದಲ್ಲಿ 15 ವಿವಿಧ ತಂಡಗಳು ಒಟ್ಟು ಸೇರುವಂತೆ ಮಾಡುವುದು,' ಎಂದು ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಜೊತೆ ಮಾತನಾಡಿದ ನಿಕ್ ಹೇಳಿದ್ದಾರೆ.
'ದ್ವಿಪಕ್ಷೀಯ ಸರಣಿಯ ವಿಚಾರದಲ್ಲಿ ನೋಡಿದರೆ, ಒಂದು ತಂಡ ಕರೆಸಿ ಅದರ ಜೊತೆ ಪಂದ್ಯ ಆಡುತ್ತೇವಷ್ಟೆ. ಆದರೆ ಒಂದು ದೇಶಕ್ಕೆ 15 ತಂಡಗಳನ್ನು ಕರೆಸಿಕೊಳ್ಳೋದು, ಒಂದು ನಗರದಲ್ಲಿ ಒಂದೇ ಸಮಯಕ್ಕೆ 6-7 ತಂಗಳನ್ನು ನಿರೀಕ್ಷಿಸೋದು ಇನ್ನೂ ತುಂಬ ಕಠಿಣ ಕೆಲಸ,' ಹಾಕ್ಲೆ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications