For Quick Alerts
ALLOW NOTIFICATIONS  
For Daily Alerts
 

ನಮೀಬಿಯಾ ವಿರುದ್ಧ 102 ರನ್‌ ಜಯ ಸಾದಿಸಿದ ಪಾಕ್‌ ಸೂಪರ್‌ 8ಗೆ ಅರ್ಹತೆ

ಕೊಲಂಬೊ: ಆರಂಭಿಕ ಆಟಗಾರ ಸಾಹಿಬ್‌ಜಾದ ಫರ್ಹಾನ್ ಅವರು ಸಿಡಿಸಿದ ಭರ್ಜರಿ ಶತಕ ಹಾಗೂ ಸ್ಪಿನ್ ಬೌಲರ್‌ ಉಸ್ಮಾನ್ ತಾರೀಕ್‌ ಅವರು ಸೊಗಸಾದ ದಾಳಿಯ ನೆರವಿನಿಂದ ಪಾಕಿಸ್ತಾನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 102 ರನ್‌ಗಳಿಂದ ನಮೀಬಿಯಾ ತಂಡವನ್ನು ಮಣಿಸಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಸಾಹಿಬ್‌ಜಾದ ಫರ್ಹಾನ್ ಹಾಗೂ ಸೈಮ್‌ ಅಯೂಬ್‌ (14) ಜೋಡಿ ಮೊದಲ ವಿಕೆಟ್‌ಗೆ 40 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಎರಡನೇ ವಿಕೆಟ್‌ಗೆ ಸಲ್ಮಾನ್‌ ಅಲಿ ಆಘಾ, ಆರಂಭಿಕ ಸಾಹಿಬ್‌ಜಾದ ಫರ್ಹಾನ್ ಅವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಪವರ್‌ಪ್ಲೇನಲ್ಲಿ ವಿಕೆಟ್‌ ಬೀಳದಂತೆ ನೋಡಿಕೊಂಡರು. ಎರಡನೇ ವಿಕೆಟ್‌ಗ ಫರ್ಹಾನ್‌ ಹಾಗೂ ಆಘಾ 42 ಎಸೆತಗಳಲ್ಲಿ 67 ರನ್‌ ಸೇರಿಸಿದರು. ನಾಯಕ ಸಲ್ಮಾನ್‌ ಅಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 38 ರನ್‌ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಖವಾಜಾ ನಫೇ ರನ್‌ ಕಲೆ ಹಾಕುವಲ್ಲಿ ಎಡವಿದರು.

Farhan s ton

ಫರ್ಹಾನ್‌ ಶತಕ

4ನೇ ವಿಕೆಟ್‌ಗೆ ಫರ್ಹಾನ್‌ ಹಾಗೂ ಶಾದಾಬ್ ಖಾನ್‌ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾದರು. ಈ ಜೋಡಿ 40 ಎಸೆತಗಳಲ್ಲಿ 81 ರನ್‌ ಸೇರಿಸಿತು. ಶಾಬಾದ್ ಅಜೇಯ 38 ರನ್ ಬಾರಿಸಿದರು. ಆರಂಭಿಕ ಫರ್ಹಾನ್‌ 58 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 100 ರನ್‌ ಸಿಡಿಸಿದರು. ಅಂತಿಮವಾಗಿ ಪಾಕಿಸ್ತಾನ 3 ವಿಕೆಟ್‌ಗೆ 199 ರನ್‌ ಕಲೆ ಹಾಕಿತು.

ನಮೀಬಿಯಾ ತಂಡದ ಪರ ಬ್ಯಾಟರ್‌ಗಳು ಪಾಕಿಸ್ತಾನದ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ವಿಫಲವಾದರು. ನಮೀಬಿಯಾ ಪರ ಲೌರೆನ್ ಸ್ಟೀನ್‌ಕ್ಯಾಂಪ್ 23, ಅಲೆಕ್ಸಾಂಡರ್ ಬುಸಿಂಗ್-ವೋಲ್ಶೆಂಕ್ 20 ರನ್‌ ಸಿಡಿಸಿದರು. ಉಳಿದ ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಅಂತಿಮವಾಗಿ ನಮೀಬಿಯಾ 17.3 ಓವರ್‌ಗಳಲ್ಲಿ 97 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನದ ಪರ ಉಸ್ಮಾನ್ ತಾರೀಕ್‌ 4, ಶಾಬಾದ್ ಖಾನ್ 3 ವಿಕೆಟ್‌ ಉರುಳಿಸಿದರು. ಈ ಗೆಲುವಿನ ಮೂಲಕ ಪಾಕಿಸ್ತಾನ ಎ ಗುಂಪಿನಿಂದ ಎರಡನೇ ತಂಡವಾಗಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ.

ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ

ನವದೆಹಲಿಯಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 122 ರನ್‌ ಸೇರಿಸಿತು. ಯುಎಇ ಪರ ಆರ್ಯನ್ ಶರ್ಮಾ (13), ಮುಹಮ್ಮದ್ ವಸೀಂ (22), ಅಲಿಶನ್ ಶರಾಫು 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 45 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ದಕ್ಷಿಣ ಆಫ್ರಿಕಾ ಪರ ಕಾರ್ಬಿನ್ ಬಾಷ್ 3 ವಿಕೆಟ್‌ ಪಡೆದರು.

Farhan s ton

ದಕ್ಷಿಣ ಆಫ್ರಿಕಾ ಪರ 13.2 ಓವರ್‌ಗಳಲ್ಲಿ 4 ವಿಕೆಟ್‌ಗೆ 123 ರನ್‌ ಸಿಡಿಸಿ ಜಯ ಸಾಧಿಸಿತು. ಅಲ್ಲದೆ ಟೂರ್ನಿಯಲ್ಲಿ ಅಜೇಯ ಓಟದ ಯಾತ್ರೆಯನ್ನು ಮುಂದುವರೆಸಿತು. ಅಲ್ಲದೆ ಡಿ ಗುಂಪಿನಲ್ಲಿ ಅಗ್ರ ಸ್ಥಾನದೊಂದಿಗೆ ಸೂಪರ್ 8 ಹಂತ ತಲುಪಿತು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಏಡನ್ ಮಾರ್ಕ್ರಾಮ್‌ 28, ಕ್ವಿಂಟನ್‌ ಡಿಕಾಕ್ 14, ರಯಾನ್‌ ರಿಕಲ್ಟನ್‌ 30, ಡೆವಾಲ್ಡ್ ಬ್ರೇವಿಸ್‌ 36 ರನ್‌ ಸಿಡಿಸಿ ತಂಡಕ್ಕೆ ನೆರವಾದರು.

Story first published: Wednesday, February 18, 2026, 19:50 [IST]
Other articles published on Feb 18, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+