ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಪಾಕ್: ದಾಖಲೆ ಬರೆದ ನಾಯಕಿ ಫಾತಿಮಾ ಸನಾ
ಬರ್ಮಿಂಗ್‌ಹ್ಯಾಮ್: ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸತತ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 2 ವಿಕೆಟ್‌ಗಳ ಆಘಾತ ಅನುಭವಿಸಿದೆ. ಆದರೆ ಪಾಕ್ ತಂಡ ನಾಯಕಿ 23 ವರ್ಷದ ನಾಯಕಿ ಫಾತಿಮಾ ಸನಾ ಬ್ಯಾಟಿಂಗ್ ಮತ್ತು ಬಾಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿ ವಿಶ್ವದ ಗಮನ ಸೆಳೆದಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ನಾಯಕಿ ಮಾಡಲಾಗದ ಸಾಧನೆಯನ್ನು ಮಾಡಿದ್ದಾರೆ.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ತಂಡದ ಯಾವೊಬ್ಬ ಆಟಗಾರ್ತಿ ನೆಲಕಚ್ಚಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದಾಗ, ನಾಯಕಿ ಫಾತಿಮಾ ಸನಾ ಕೇವಲ 38 ಎಸೆತಗಳಲ್ಲಿ ಔಟಾಗದೆ 55 ರನ್ ಗಳಿಸಿದರು. ಪರಿಣಾಮ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 126 ರನ್ ಸೇರಿಸಿತು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕಿ ಫಾತಿಮಾ ಸನಾ ಹಾಗೂ ಟುಬಾ ಹಸನ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. 50 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಫಾತಿಮಾ ಸನಾ ಹಾಗೂ ಟುಬಾ ಹಸನ್ ಆಧಾರವಾಯಿತು. ಈ ಜೋಡಿ ಒಂಬತ್ತನೇ ವಿಕೆಟ್‌ಗೆ ಐತಿಹಾಸಿಕ 71 ರನ್ ಸೇರಿಸಿತು. ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂಬತ್ತನೇ ವಿಕೆಟ್‌ಗೆ ಇದು ಅತ್ಯಧಿಕ ಜೊತೆಯಾಟವಾಗಿದೆ.

ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16.5 ಓವರ್‌ಗಳಲ್ಲಿ 8 ವಿಕೆಟ್‌ಗೆ 127 ರನ್ ಸೇರಿಸಿ ಜಯ ಸಾಧಿಸಿತು. ಈ ವೇಳೆ ಫಾತಿಮಾ ಸಾನಾ ಬೌಲಿಂಗ್‌ನಲ್ಲೂ ಕಮಾಲ್ ಪ್ರದರ್ಶನ ನೀಡಿದರು. ಇವರು ಎರಡನೇ ಪಂದ್ಯದಲ್ಲಿ 16 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಇದರೊಂದಿಗೆ, ಅವರು ಒಂದೇ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ 50 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಮತ್ತು ಮೂರು ಅಥವಾ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ಆಟಗಾರ್ತಿಯರ ಪಟ್ಟಿಗೆ ಇವರು ಸ್ಥಾನ ಪಡೆದರು.
ನಾಯಕಿಯಾಗಿ ಅರ್ಧಶತಕ ಹಾಗೂ 3 ವಿಕೆಟ್ ಪಡೆದ ಆಟಗಾರ್ತಿಯರ ಪಟ್ಟಿ
ಹೇಲಿ ಮ್ಯಾಥ್ಯೂಸ್ (62 ರನ್ ಮತ್ತು 3 ವಿಕೆಟ್‌ಗಳು) ಶ್ರೀಲಂಕಾ ವಿರುದ್ಧ, ಗ್ರಾಸ್ ಐಲೆಟ್, 2018
ಸುನೆ ಲೂಸ್ (61 ರನ್ ಮತ್ತು 3 ವಿಕೆಟ್‌ಗಳು) ಥೈಲ್ಯಾಂಡ್ ವಿರುದ್ಧ, ಕ್ಯಾನ್‌ಬೆರಾ, 2020
ಶಫಾಲಿ ವರ್ಮಾ (55 ರನ್ ಮತ್ತು 3 ವಿಕೆಟ್‌ಗಳು) ನೆದರ್‌ಲ್ಯಾಂಡ್ಸ್ ವಿರುದ್ಧ, ಲೀಡ್ಸ್, 2026
ಫಾತಿಮಾ ಸನಾ (55 ರನ್ ಮತ್ತು 3 ವಿಕೆಟ್‌ಗಳು) ದಕ್ಷಿಣ ಆಫ್ರಿಕಾ ವಿರುದ್ಧ, ಬರ್ಮಿಂಗ್ಹ್ಯಾಮ್, 2026
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications