ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ 20 ಮಂದಿಯ ಪಾಕಿಸ್ತಾನ ತಂಡ ಪ್ರಕಟ

ಕರಾಚಿ, ಜುಲೈ 28: ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. 20 ಜನರಿರುವ ತಂಡದಲ್ಲಿ ಬ್ಯಾಟ್ಸ್‌ಮನ್ ಫವಾದ್ ಆಲಮ್ ಕೂಡ ಹೆಸರಿಸಲ್ಪಟ್ಟಿದ್ದಾರೆ. ಸುಮಾರು 11 ವರ್ಷಗಳ ಬಳಿಕ ಪಾಕ್ ರಾಷ್ಟ್ರೀಯ ತಂಡಕ್ಕೆ ಆಲಮ್ ಕಮ್ ಬ್ಯಾಕ್ ಮಾಡುವ ಸಾಧ್ಯತೆಯಿದೆ.
ಪಾಕಿಸ್ತಾನ ಕ್ರಿಕೆಟ್‌ನ ಮುಖ್ಯ ಆಯ್ಕೆದಾರ ಮತ್ತು ಹೆಡ್ ಕೋಚ್ ಆಗಿರುವ ಮಿಸ್ಬಾ ಉಲ್ ಹಕ್ ಅವರು ಬ್ಯಾಟ್ಸ್‌ಮನ್‌ಗಳಾದ ಇಫ್ತಿಕರ್ ಅಹ್ಮದ್, ಖುಷ್ದಿಲ್ ಷಾ, ಫಖರ್ ಜಮಾನ್ ಮತ್ತು ಅನ್ ಕ್ಯಾಪ್ಡ್ ಆಟಗಾರ ಹೈದರ್ ಅಲಿ ಅವರಿಗೆ ಈ ಬಾರಿ ಸ್ಥಾನ ನೀಡಿಲ್ಲ. ಹೀಗಾಗಿ ಆಲಮ್ ಕಮ್‌ಬ್ಯಾಕ್ ಸಾಧ್ಯತೆ ಹೆಚ್ಚಿದೆ. ಇಂಗ್ಲೆಂಡ್ ಪಾಕ್ ಟೆಸ್ಟ್ ಸರಣಿ ಆಗಸ್ಟ್ 5ರಿಂದ ಆರಂಭಗೊಳ್ಳಲಿದೆ.
ಎಡಗೈ ಬ್ಯಾಟ್ಸ್‌ಮನ್ ಫವಾದ್ ಆಲಮ್ 2009ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ನಲ್ಲಿ ಆಡಿದ್ದರು. ಅದಾಗಿ ಮತ್ತೆ ಆಲಮ್ ತಂಡದಲ್ಲಿ ಕಾಣಸಿಕೊಂಡಿರಲಿಲ್ಲ. ಈ ಬಾರಿ ಪ್ರಕಟವಾಗಿರುವ ತಂಡದಲ್ಲಿ ಸ್ಪಿನ್ ಸ್ಪೆಶಾಲಿಷ್ಟ್‌ಗಳಾದ ಕಾಶಿಫ್ ಭಟ್ಟಿ ಮತ್ತು ಯಾಸಿರ್ ಶಾ ಇದ್ದಾರೆ. ಆಲ್ ರೌಂಡರ್‌ಗಳಾದ ಫಹೀಮ್ ಅಶ್ರಫ್ ಮತ್ತು ಶಾದಾಬ್ ಖಾನ್ ಕೂಡ ಹೆಸರಿಸಲ್ಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಪಾಕಿಸ್ತಾನ ತಂಡ
ಅಜರ್ ಅಲಿ (ಸಿ), ಬಾಬರ್ ಅಝಾಮ್ (ಉಪನಾಯಕ), ಅಬಿದ್ ಅಲಿ, ಅಸಾದ್ ಶಫೀಕ್, ಫಹೀಮ್ ಅಶ್ರಫ್, ಫವಾದ್ ಆಲಮ್, ಇಮಾಮ್ ಉಲ್ ಹಕ್, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸರ್ಫರಾಜ್ ಅಹ್ಮದ್ , ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಸೊಹೈಲ್ ಖಾನ್, ಉಸ್ಮಾನ್ ಶಿನ್ವಾರಿ, ವಹಾಬ್ ರಿಯಾಜ್ ಮತ್ತು ಯಾಸಿರ್ ಶಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications