Fazal Haq Farooqi: ಅಂಪೈರ್ ಮಾತಿಗೆ ಬೆಲೆ ಇಲ್ಲ; ಅಫ್ಘಾನಿಸ್ತಾನ ವೇಗಿಗೆ ಐಸಿಸಿ ದಂಡ
ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಫಜಲ್ ಹಕ್ ಫಾರೂಕಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ಶಿಕ್ಷೆಯನ್ನು ವಿಧಿಸಿದೆ. ಐಸಿಸಿ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಫಾರೂಕಿ ತಪ್ಪಿತಸ್ಥರೆಂದು ಕಂಡುಬಂದಿದೆ. ಈ ನಿಯಮದ ಅಡಿಯಲ್ಲಿ ಅವರ ಪಂದ್ಯದ ಶುಲ್ಕದ 15 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ. ಈ ಬಗ್ಗೆ ಶುಕ್ರವಾರ ಐಸಿಸಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಜಿಂಬಾಬ್ವೆ ವಿರುದ್ಧ ಎರಡನೇ ಏಕದಿನ ಪಂದ್ಯದ ವೇಳೆ ಅಂಪೈರ್ ನಿರ್ಧಾರದ ವಿರುದ್ಧ ಫಜಲ್ ಹಕ್ ಫಾರೂಕಿ ವಿರೋಧ ವ್ಯಕ್ತಪಡಿಸಿದ್ದು, ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಹೀಗಾಗಿ ಐಸಿಸಿ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿರುವುದು ಕಂಡು ಬಂದಿದ್ದು, ಫಜಲ್ ಹಕ್ ಫಾರೂಕಿ ಅವರಿಗೆ ದಂಡ ವಿಧಿಸಲಾಗಿದೆ.

ಹರಾರೆಯಲ್ಲಿ ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಅದ್ಭುತ ಪ್ರದರ್ಶನ ನೀಡಿತ್ತು. ಸಿದ್ದಿಕುಲ್ಲಾ ಅಟಲ್ (104) ಮತ್ತು ಅಬ್ದುಲ್ ಮಲಿಕ್ (84) 191 ರನ್‌ಗಳ ಅದ್ಭುತ ಆರಂಭಿಕ ಜೊತೆಯಾಟ ಆಡಿದರು. ಸಿದ್ದಿಕುಲ್ಲಾ ಅಟಲ್ ಅವರ ಶತಕದ ನೆರವನಿಂದ ಅಫ್ಘಾನಿಸ್ತಾನ ತಂಡವು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 286 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಅಫ್ಘಾನಿಸ್ತಾನ ನೀಡಿದ 286 ರನ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಕೇವಲ 54 ರನ್‌ಗಳಿಗೆ ಸರ್ವಪತನವಾಯಿತು. ಜಿಂಬಾಬ್ವೆ ಆಟಗಾರರು ಯಾರು ಹೋರಾಟದ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅಫ್ಘಾನಿಸ್ತಾನ ಪರ ಎಎಮ್ ಗಜನ್ಫರ್ ಮತ್ತು ನಾವಿದ್ ಝದ್ರಾನ್ ತಲಾ 3 ವಿಕೆಟ್ ಕಬಳಿಸುವ ಮೂಲಕ ಅಫ್ಘಾನಿಸ್ತಾನವನ್ನು 232 ರನ್‌ಗಳಿಂದ ಗೆಲ್ಲಲು ಕಾರಣರಾದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನದ ಅತಿದೊಡ್ಡ ಗೆಲುವಾಗಿದೆ.
ಇದಕ್ಕೂ ಮುನ್ನ ಜಿಂಬಾಬ್ವೆ ಇನಿಂಗ್ಸ್‌ನ 5ನೇ ಓವರ್‌ನಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಫಾರೂಕಿ ಮಾತನಾಡಿದರು. ಜಿಂಬಾಬ್ವೆ ತಂಡದ ಕ್ರೇಗ್ ಇರ್ವಿನ್ ವಿರುದ್ಧ ಫಾರೂಕಿ ಮಾಡಿದ ಎಲ್‌ಬಿಡಬ್ಲ್ಯೂ ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ಇದಕ್ಕೆ ಫಾರೂಕಿ ವಿರೋಧ ವ್ಯಕ್ತಪಡಿಸಿದರು. ಪಂದ್ಯದ ವೇಳೆ ಡಿಆರ್‌ಎಸ್ ಲಭ್ಯವಿಲ್ಲದಿದ್ದರೂ, ಫಾರೂಕಿ ಮರುಪರಿಶೀಲನೆಗೆ ವಿನಂತಿಸಿದರು. ಇದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ 15 ಪ್ರತಿಶತ ದಂಡವನ್ನು ಐಸಿಸಿ ವಿಧಿಸಿದೆ.
ಟೆಸ್ಟ್ ಸರಣಿ
ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ನಂತರ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದೆ. ಎರಡೂ ಟೆಸ್ಟ್ ಪಂದ್ಯಗಳು ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಆರಂಭವಾದರೆ, ಎರಡನೇ ಟೆಸ್ಟ್ ಜನವರಿ 2 ರಿಂದ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಪ್ರಕಟಗೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications