Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

5000 ರನ್‌ಗಳಿಸಿದ್ದು ಖುಷಿ ನೀಡಿದೆ, ಆದರೆ ಗೆಲುವು ಅದಕ್ಕಿಂತಲೂ ಮುಖ್ಯ: ರೋಹಿತ್ ಶರ್ಮಾ

Feels Good To Have 5,000 Ipl Runs But Winning The Game Was Important - Rohit Sharma

ಐಪಿಎಲ್ ಇತಿಹಾಸದಲ್ಲಿ ರೋಹಿತ್ ಶರ್ಮಾ 5000 ರನ್ ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಈ ಸಾಧನೆಯನ್ನು ಮಾಡಿದ ಕೇವಲ 3ನೇ ಆಟಗಾರ ಎಂಬ ಕೀರ್ತಿಗೆ ಮುಂಬೈ ಇಂಡಿಯನ್ಸ್ ನಾಯಕ ಪಾತ್ರರಾಗಿದ್ದಾರೆ. ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 2 ರನ್‌ಗಳಿಸಿದ ಸಂದರ್ಭದಲ್ಲಿ ಈ ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ.

ಈ ಮಹತ್ವದ ಮೈಲಿಗಲ್ಲನ್ನು ತಲುಪಿದ ವಿಚಾರವಾಗಿ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. 5000 ರನ್ ಗಳಿಸಿದ ಆಟಗಾರರ ಪಟ್ಟಿಗೆ ಸೇರಿದ ಬಗ್ಗೆ ಖುಷಿಯಿದೆ. ಆದರೆ ಆ ಖುಷಿಗಿಂತಲೂ ಇಂದಿನ ಪಂದ್ಯದ ಗೆಲುವು ನಮಗೆ ಅದಕ್ಕಿಂತಲೂ ಮುಖ್ಯವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 48 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ನಾಯಕನ ಆಟವಾಡಿದ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಕೊಡುಗೆಯನ್ನು ನೀಡಿದರು. 45 ಎಸೆತಗಳಲ್ಲಿ ಭರ್ಜರಿ 70 ರನ್ ದಾಖಲಿಸಿದರು. ಇದರಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿ ಸೇರಿತ್ತು.

"5000 ರನ್‌ಗಳನ್ನು ಹೊಂದುವುದು ತುಂಬಾ ಸಂತಸದ ಸಂಗತಿ. ಆದರೆ ನಾನು ಅದರತ್ತ ಹೆಚ್ಚು ಗಮನ ನೀಡುವುದಿಲ್ಲ. ತಂಡದ ಗೆಲುವು ನಮಗೆ ತುಂಬಾ ಮುಖ್ಯವಾದದ್ದು ಎಂದು ರೋಹಿತ್ ಶರ್ಮಾ ಪಂದ್ಯದ ಗೆಲುವಿನ ಬಳಿಕ ಮಾತನಾಡುತ್ತಾ ಪ್ರತಿಕ್ರಿಯೆಯನ್ನು ನೀಡಿದರು.

ಇದೊಂದು ಶ್ರೇಷ್ಠ ಗೆಲುವು. ನಾವು ಉತ್ತಮ ಆರಂಭವನ್ನು ಪಡೆಯಲಿಲ್ಲ. ಪಂಜಾಬ್ ತಂಡದಲ್ಲಿ ಉತ್ತಮ ದಾಳಿ ನಡೆಸುವ ಬ್ಯಾಟಿಂಗ್ ಪಡೆಯಿದೆ ಎಂದು ನಮಗೆ ತಿಳಿದಿತ್ತು. ಹೀಗಾಗಿ ಅಂತಿಮ ಹಂತದಲ್ಲಿ ನಮ್ಮ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿ ಯಶಸ್ವಿಯಾದೆವು. ಹಿಂದೆ ಹಲವು ಬಾರಿ ಮಾಡಿದಂತೆ ಹಾರ್ದಿಕ್ ಪಾಂಡ್ಯ ಮತ್ತು ಕಿರಾನ್ ಪೊಲಾರ್ಡ್ ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಕೊಡುಗೆಯನ್ನು ನೀಡಿದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Story first published: Tuesday, October 6, 2020, 16:11 [IST]
Other articles published on Oct 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+