For Quick Alerts
ALLOW NOTIFICATIONS  
For Daily Alerts
 

ಫೆರ್ನಾಂಡೊ-ಮೆಂಡಿಸ್ ಶತಕದಾಟ, ಶ್ರೀಲಂಕಾ ಮಡಿಲಿಗೆ ಏಕದಿನ ಸರಣಿ

Fernando, Mendis tons help Sri Lanka clinch ODI series with Windies rout

ಹಂಬಂಟೋಟ, ಫೆಬ್ರವರಿ 27: ಹಂಬಂಟೋಟದ ಮಹೀಂದ್ರ ರಾಜಪಕ್ಷ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ (ಫೆಬ್ರವರಿ 26) ನಡೆದ ಶ್ರೀಲಂಕಾ vs ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಭರ್ಜರಿ 161 ರನ್ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿ 2-0ಯಿಂದ ಲಂಕಾ ವಶವಾಗಿದೆ.

ಆತಿಥೇಯ ಶ್ರೀಲಂಕಾ ಪರ ಅವಿಷ್ಕಾ ಮೆಂಡಿಸ್ ಮತ್ತು ಕುಸಾಲ್ ಮೆಂಡಿಸ್ ಶತಕದಾಟವಾಡಿದ್ದು ತಂಡದ ಗೆಲುವಿಗೆ ಕಾರಣವಾಯ್ತು. ಇನ್ನು ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಲಂಕಾ ಬೌಲರ್‌ಗಳಾದ ನುವಾನ್ ಪ್ರದೀಪ್ 2, ವನಿಂದು ಹಸರಂಗ 3, ಲಕ್ಷನ್ ಸಂದಕನ್ 3 ವಿಕೆಟ್‌ ಪಡೆದಿದ್ದೂ ತಂಡವನ್ನು ಜಯದ ದಡ ಮುಟ್ಟಿಸಲು ನೆರವಾಯ್ತು. ಅತ್ತ ವಿಂಡೀಸ್ ಕಳಪೆ ಬ್ಯಾಟಿಂಗ್‌ನಿಂದಾಗಿ ಸೋಲಿನ ಬೆಲೆ ತೆತ್ತಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ, ಅವಿಷ್ಕಾ ಫೆರ್ನಾಂಡೋ 127, ಕುಸಾಲ್ ಮೆಂಡಿಸ್ 119, ತಿಸರ ಪೆರೆರಾ 36, ಧನಂಜಯ ಡಿ ಸಿಲ್ವಾ 12, ವನಿಂದು ಹಸರಂಗ 17, ಇಸುರು ಇದಾನ 17 ಗಣನೀಯ ರನ್‌ನೊಂದಿಗೆ 50 ಓವರ್‌ಗೆ 8 ವಿಕೆಟ್‌ ನಷ್ಟದಲ್ಲಿ 345 ರನ್ ಕಲೆ ಹಾಕಿತು.

ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್, ಶಾಯ್ ಹೋಪ್ 51, ಸುನಿಲ್ ಆ್ಯಂಬ್ರಿಸ್ 17, ಡ್ಯಾರೆನ್ ಬ್ರಾವೋ 16, ರೋಸ್ಟನ್ ಚೇಸ್ 20, ನಿಕೋಲಸ್ ಪೂರನ್ 31, ಕೀಮೋ ಪೌಲ್ 21, ಫ್ಯಾಬಿಯನ್ ಅಲೆನ್ 17 ರನ್ ಸೇರ್ಪಡೆಯೊಂದಿಗೆ 39.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 184 ರನ್ ಬಾರಿಸಿ ಶರಣಾಯಿತು. ಅವಿಷ್ಕಾ ಫೆರ್ನಾಂಡೋ ಪಂದ್ಯಶ್ರೇಷ್ಠರೆನಿಸಿದರು.

Story first published: Thursday, February 27, 2020, 10:30 [IST]
Other articles published on Feb 27, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+