Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ಪೋರ್ಚುಗಲ್‌, ಸ್ಪೇನ್‌ಗೆ ಭರ್ಜರಿ ಜಯ

ಟೊರೊಂಟೊ: ಭರವಸೆಯ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಗೊನ್ಕಾಲೊ ರಾಮೋಸ್ ಬಾರಿಸಿದ ಗೋಲುಗಳ ನೆರವಿನಿಂದ ಪೋರ್ಚುಗಲ್‌ ಫಿಫಾ ವಿಶ್ವಕಪ್ ರೌಂಡ್ ಆಫ್‌ 32ರಲ್ಲಿ ಕ್ರೊಯೇಷಿಯಾ ತಂಡವನ್ನು ಮಣಿಸಿತು. ಈ ಮೂಲಕ ಪೋರ್ಚುಗಲ್‌ ರೌಂಡ್ ಆಫ್‌ 16ಗೆ ಪ್ರವೇಶ ಪಡೆದಿದೆ. ಮುಂದಿನ ಹಂತದ ಪಂದ್ಯದಲ್ಲಿ ಪೋರ್ಚುಗಲ್‌, ಸ್ಪೇನ್‌ ತಂಡದ ವಿರುದ್ಧ ಕಾದಾಟ ನಡೆಸಲಿದೆ.

ಶುಕ್ರವಾರ ಟೊರೊಂಟೊ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಅಲ್ಲದೆ ಎದುರಾಳಿ ತಂಡಕ್ಕೆ ಸುಲಭವಾಗಿ ಗೋಲುಗಳನ್ನು ನೀಡಲಿಲ್ಲ. ಈ ಹಂತದಲ್ಲಿ ಕ್ರೊಯೇಷಿಯಾ ಹಾಗೂ ಪೋರ್ಚುಗಲ್ ತಂಡಗಳು ಗೋಲು ಪೆಟ್ಟಿಗೆಯ ಹತ್ತಿರ ಚೆಂಡನ್ನು ಒಯ್ದರು ಸಹ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದವು. ಪರಿಣಾಮ ಮೊದಲ ಅರ್ಧದ ಪಂದ್ಯದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ಹೆಣಗಾಟ ನಡೆಸಿದವು.

FIFA World Cup 2026

ದ್ವಿತೀಯ ಅರ್ಧದಲ್ಲಿ ಕ್ರೊಯೇಷಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿ 53ನೇ ನಿಮಿಷದಲ್ಲಿ ಫಲ ಕಂಡಿತು. ಈ ಅವಧಿಯಲ್ಲಿ ಇವಾನ್ ಪೆರಿಸಿಕ್ ಅಮೋಘ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಕ್ರೊಯೇಷಿಯಾ 1-0 ಮುನ್ನಡೆ ಸಾಧಿಸಿತು.

ರೋನಾಲ್ಡೊ ಯುಗಾಂತ್ಯ? ಅಂದು ಪೋರ್ಚುಗಲ್‌ ತಂಡಕ್ಕೆ ಶಕ್ತಿಯಾಗಿದ್ದ ಆಟಗಾರ ಇಂದು ಸಮಸ್ಯೆಯೇ?

ರೋನಾಲ್ಡೊ ಯುಗಾಂತ್ಯ? ಅಂದು ಪೋರ್ಚುಗಲ್‌ ತಂಡಕ್ಕೆ ಶಕ್ತಿಯಾಗಿದ್ದ ಆಟಗಾರ ಇಂದು ಸಮಸ್ಯೆಯೇ?

68ನೇ ನಿಮಿಷದಲ್ಲಿ ಪೋರ್ಚುಗಲ್ ತಂಡಕ್ಕೆ ಪೆನಾಲ್ಟಿ ಅವಕಾಶ ಲಭಿಸಿತು. ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಫಲರಾದರು. ಪರಿಣಾಮ ಉಭಯ ತಂಡಗಳು ತಲಾ ಒಂದೊಂದು ಗೋಲು ಬಾರಿಸಿದವು. ಕ್ರಿಸ್ಟಿಯಾನೊ ರೊನಾಲ್ಡೊ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನ ನಾಕೌಟ್‌ ಹಂತದ ಪಂದ್ಯಗಳಲ್ಲಿ ಮೊದಲ ಗೋಲು ಬಾರಿಸಿದರು.

ಹೆಚ್ಚುವರಿ ಸಮಯದಲ್ಲಿ ಪೋರ್ಚುಗಲ್ ತಂಡ ಅಬ್ಬರಿಸಿತು. ಸಹ ಆಟಗಾರ ಗೋಲು ಪೆಟ್ಟಿಗೆಯ ಬಲಭಾಗದಿಂದ ನೀಡಿದ್ದ ಪಾಸ್‌ನ ಸಂಪೂರ್ಣ ಲಾಭ ಪಡೆದ ಗೊನ್ಕಾಲೊ ರಾಮೋಸ್ ಹೆಡ್‌ ಮೂಲಕ ಚೆಂಡಿಗೆ ಗೋಲು ಪೆಟ್ಟಿಗೆಯ ದರ್ಶನ ಮಾಡಿಸಿದರು. ಪೋರ್ಚುಗಲ್‌ 2-1 ಮುನ್ನಡೆ ಸಾಧಿಸಿತು.

ಮೆಸ್ಸಿ ಜೆರ್ಸಿ ತೊಟ್ಟು ಫುಟ್ಬಾಲ್ ವಿಶ್ವಕಪ್ ಪಂದ್ಯ ನೋಡಿದ ಯಶಸ್ವಿ ಜೈಸ್ವಾಲ್‌: ವಿಡಿಯೋ ವೈರಲ್‌

ಮೆಸ್ಸಿ ಜೆರ್ಸಿ ತೊಟ್ಟು ಫುಟ್ಬಾಲ್ ವಿಶ್ವಕಪ್ ಪಂದ್ಯ ನೋಡಿದ ಯಶಸ್ವಿ ಜೈಸ್ವಾಲ್‌: ವಿಡಿಯೋ ವೈರಲ್‌

ವಿಎಆರ್‌ ವಿವಾದ

ಕ್ರೊಯೇಷಿಯಾ ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಪಂದ್ಯ ಮುಕ್ತಾಯಕ್ಕೆ ಕೆಲವೇ ಕ್ಷಣಗಳ ಮೊದಲು ಕ್ರೊಯೇಷಿಯಾ ಸಹ ಕಮಾಲ್‌ ಮಾಡಿತು. ಜೆ. ಗ್ವಾರ್ಡಿಯೋಲ್ ಹೆಚ್ಚುವರಿ ಸಮಯದಲ್ಲಿ ಸಹ ಆಟಗಾರ ನೀಡಿದ ಪಾಸ್‌ನ್ನು ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳಿದರು. ಕ್ರೊಯೇಷಿಯಾ ಪಾಳಯದಲ್ಲಿ ಸಂತಸ ಮನೆ ಮಾಡಿತ್ತು. ಆದರೆ ರೆಫ್ರಿ ಪಂದ್ಯವನ್ನು ನಿಲ್ಲಿಸಿದರು. ಅಲ್ಲದೆ ವಿಎಆರ್‌ ಪರಿಶೀಲನೆ ನಡೆಸಿದರು. ಬಳಿಕ ಕ್ರೊಯೇಷಿಯಾ ಆಟಗಾರ ಬಾರಿಸಿದ ಗೋಲನ್ನು ಆಫ್‌ ಸೈಡ್‌ ಎಂದು ಘೋಷಿಸಲಾಯಿತು. ಕ್ರೊಯೇಷಿಯಾ ಆಟಗಾರರಿಗೆ ಆಘಾತ ಕಾದಿತ್ತು.

ಸ್ಪೇನ್‌ಗೆ ಭರ್ಜರಿ ಜಯ

ಲಾಸ್‌ ಏಂಜಲೀಸ್‌ನಲ್ಲಿ ನಡೆದ ರೌಂಡ್ ಆಫ್‌ 32ರ ಪಂದ್ಯದಲ್ಲಿ ಸ್ಪೇನ್‌ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸ್ಪೇನ್‌ 3-0 ಗೋಲುಗಳಿಂದ ಆಸ್ಟ್ರಿಯಾ ತಂಡವನ್ನು ಮಣಿಸಿ ಆರ್ಭಟಿಸಿದೆ. ಈ ಪಂದ್ಯದ ಮೊದಲ ಅರ್ಧದಲ್ಲಿ ಸ್ಪೇನ್ ಆರಂಭದಲ್ಲಿ ಒಂದು ಗೋಲು ಬಾರಿಸಿತು. ಆದರೆ ರೆಫ್ರಿ ಇದನ್ನು ಫೌಲ್‌ ಎಂದು ಹೇಳಿದರು. ಸ್ಟಾರ್ ಆಟಗಾರ ಮೈಕೆಲ್ ಒಯರ್ಜಾಬಲ್ ಗೋಲು ಪೆಟ್ಟಿಗೆಯ ಬಲಭಾಗದಿಂದ ಬಂದ ಚೆಂಡಿಗೆ ತಮ್ಮ ಕಾಲ್ಚಳಕ ಪ್ರದರ್ಶಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಸ್ಪೇನ್‌ ಮೊದಲ ಅರ್ಧದಲ್ಲಿ 1-0 ಮುನ್ನಡೆ ಸಾಧಿಸಿತು.

FIFA World Cup 2026

ಎರಡನೇ ಅರ್ಧದಲ್ಲಿ ಸ್ಪೇನ್‌ ತಂಡದ ಪೆಡ್ರೊ ಪೊರೊ ಸಮಯೋಚಿತ ಪ್ರದರ್ಶನ ನೀಡಿ ಆರ್ಭಟಿಸಿದರು. ಇದೇ ಅವಧಿಯಲ್ಲಿ ಮೈಕೆಲ್ ಒಯರ್ಜಾಬಲ್ ಮತ್ತೊಂದು ಗೋಲು ಬಾರಿಸಿ ಮಿಂಚಿದರು. ಸ್ಪೇನ್‌ 3-0 ಯಿಂದ ಜಯ ಸಾಧಿಸಿತು.

ರೌಂಡ್ ಆಫ್‌ 16ನಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ತಂಡಗಳು ಜುಲೈ 7 ರಂದು ಡಲ್ಲಾಸ್ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ.

Story first published: Friday, July 3, 2026, 8:10 [IST]
Other articles published on Jul 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+