T20 World Cup 2024: ವಿಶ್ವ ಟಿ20 ಚಾಂಪಿಯನ್ ಪಟ್ಟಕ್ಕೆ ನಾಲ್ಕು ತಂಡಗಳ ನಡುವೆ ಹೋರಾಟ; ಭಾರತ-ಅಫ್ಘಾನಿಸ್ತಾನದ ಎದುರಾಳಿಗಳು ಯಾರು
ಜೂನ್ 25 ಮಂಗಳವಾರ, ಅಫ್ಘಾನಿಸ್ತಾನ ತಂಡ ತನ್ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ರನ್‌ಗಳಿಂದ ಸೋಲಿಸುವ ಮೂಲಕ 2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಅಫ್ಘಾನಸ್ತಾನ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ.
ಅಫ್ಘಾನಿಸ್ತಾನ ಸೆಮಿಫೈನಲ್ ತಲುಪುತ್ತಿದ್ದಂತೆ, ಟೂರ್ನಿಯ ಅಗ್ರ-4 ತಂಡಗಳು ಫೈನಲ್ ಆಗಿವೆ. ಭಾರತ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದವು.

ಎರಡೂ ಸೆಮಿಫೈನಲ್ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಜೂನ್ 27 ರಂದು ನಡೆಯಲಿದೆ. ಸೆಮಿಫೈನಲ್‌ನಲ್ಲಿ ಯಾವ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ ಮತ್ತು ಫೈನಲ್‌ಗೆ ತಲುಪಲು ಪೈಪೋಟಿ ನಡೆಸಲಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಮೊದಲನೇ ಸೆಮಿಸ್
ಟಿ20 ವಿಶ್ವಕಪ್ 2024ರ ಮೊದಲ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದೆ. ಈ ಪಂದ್ಯವು ಜೂನ್ 27 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ಟ್ರಿನಿಡಾಡ್‌ನ ತರೋಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಈ ಮೆಗಾ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಹಲವು ಪ್ರಮುಖ ಸೋಲುಗಳನ್ನು ಸಾಧಿಸಿ ಸೆಮಿಫೈನಲ್ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿ ಹಾಕುವ ಯೋಚನೆಯಲ್ಲಿ ರಶೀದ್ ಖಾನ್ ಇದ್ಧಾರೆ. ಆದಾಗ್ಯೂ, ದಕ್ಷಿಣ ಆಫ್ರಿಕಾ ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದುವರೆಗೆ ಸೋಲು ಕಂಡಿಲ್ಲ.
ಎರಡನೇ ಸೆಮಿಫೈನಲ್
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಈ ಪಂದ್ಯ ಕೂಡ ಜೂನ್ 27 ರಂದು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಟೂರ್ನಿಯಲ್ಲಿ ಕಳಪೆ ಆರಂಭದ ನಂತರ ಇಂಗ್ಲೆಂಡ್ ತಂಡ ಅದ್ಭುತ ಪುನರಾಗಮನವನ್ನು ಮಾಡಿದ್ದು, ಸೆಮಿಫೈನಲ್‌ಗೆ ಪ್ರವೇಶಿಸಿತು. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ಇಲ್ಲಿಯವರೆಗೆ ಆಡಿರುವ ಎಲ್ಲ ಪಂದಯಗಳನ್ನು ಗೆದ್ದಿದೆ.
ತನ್ನ ಕೊನೆಯ ಸೂಪರ್-8 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಅಗ್ರ-4 ರೊಳಗೆ ಟೀಮ್ ಇಂಡಿಯಾ ಪ್ರವೇಶಿಸಿದೆ. ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಿಂದ ಹೊರ ಹಾಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಈ ಬಾರಿ ಸೇಡಿನ ಇತ್ಯರ್ಥಪಡಿಸುವ ಸುವರ್ಣಾವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications