Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIH Pro League: ಪಾಕ್‌ ವಿರುದ್ಧ ಭಾರತಕ್ಕೆ 7-1 ಗೋಲು ಭರ್ಜರಿ ಜಯ

ಎಫ್‌ಐಎಚ್‌ ಪ್ರೋ ಹಾಕಿ ಲೀಗ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿದೆ. ಲಂಡನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 7-1 ಗೋಲುಗಳ ಅಂತರದಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಅಬ್ಬರಿಸಿತು. ಇದಕ್ಕೂ ಮೊದಲು ಜೂನ್‌ 23 ರಂದು ಪಾಕಿಸ್ತಾನವನ್ನು ಎದುರಿಸಿತ್ತು, ಪಂದ್ಯವನ್ನು 4-3 ಅಂತರದಿಂದ ಗೆದ್ದಿತ್ತು.

ಭಾರತ ವಿರುದ್ಧ ಪಾಕಿಸ್ತಾನ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಮೊದಲ ಕ್ವಾರ್ಟರ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಪಾಕ್‌ 1-0 ಮುನ್ನಡೆ ಸಾಧಿಸಿತು. 13ನೇ ನಿಮಿಷದಲ್ಲಿ ಪಾಕ್‌ನ ಅಬು ಮೊಹಮ್ಮದ್ ಸೊಗಸಾದ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಎರಡನೇ ಕ್ವಾರ್ಟರ್‌ನಿಂದ, ಟೀಮ್ ಇಂಡಿಯಾ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿತು ಮತ್ತು ಕೊನೆಯವರೆಗೂ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿತು, ಏಕಪಕ್ಷೀಯ ಗೆಲುವು ಸಾಧಿಸಿತು.

FIH Pro League

ಎರಡನೇ ಕ್ವಾರ್ಟರ್‌ನ ಆಟದಿಂದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಅಬ್ಬರಿಸಿತು. ಭಾರತ ತಂಡದ ಪರ ಸುಖಜೀತ್ ಸಿಂಗ್‌ 20ನೇ ನಿಮಿಷದಲ್ಲಿ ಸೊಗಸಾದ ಗೋಲು ಬಾರಿಸಿ ತಂಡಕ್ಕೆ ಮೊದಲ ಗೋಲಿನ ಮಾಲೆ ತೊಡಿಸಿದರು. ಇನ್ನು ಇದೇ ಕ್ವಾರ್ಟರ್‌ನಲ್ಲಿ ಹರ್ಮನ್‌ ಪ್ರೀತ್ ಸಿಂಗ್ ಸಹ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸಿದರು. ಭಾರತ ಎರಡನೇ ಕ್ವಾರ್ಟರ್ ಅಂತ್ಯಕ್ಕೆ 2-1 ಮುನ್ನಡೆ ಪಡೆದುಕೊಂಡಿತು.

ಮೂರು ಕ್ವಾರ್ಟರ್‌ನಲ್ಲಿ 4 ಗೋಲು

ಮೂರನೇ ಕ್ವಾರ್ಟರ್‌ನಲ್ಲಿ ಪಾಕ್‌ ತಂಡದ ರಕ್ಷಣಾ ವಿಭಾಗಕ್ಕೆ ಪೆಟ್ಟು ನೀಡುತ್ತಾ ಸಾಗಿದ ಭಾರತ ತಂಡ ಆರ್ಭಟಿಸಿತು. ಈ ಅವಧಿಯಲ್ಲಿ ಹಾರ್ದಿಕ್‌ ಸಿಂಗ್, ಜುಗ್ರಾಜ್ ಸಿಂಗ್, ಅಭಿಷೇಕ್‌, ರಾಜ್ ಕುಮಾರ್ ಪಾಲ್ ತಲಾ ಒಂದು ಗೋಲು ದಾಖಲಿಸಿ ಅಂತರವನ್ನು ಹಿಗ್ಗಿಸುವಲ್ಲಿ ಸಫಲರಾದರು. ಪರಿಣಾಮ ಭಾರತ 6-1 ಭರ್ಜರಿ ಮುನ್ನಡೆಯೊಂದಿಗೆ ಕೊನೆಯ ಕ್ವಾರ್ಟರ್‌ ಪ್ರವೇಶಿಸಿತು. ಭಾರತ ತಂಡ ಮೂರನೇ ಕ್ವಾರ್ಟರ್‌ನಲ್ಲಿ 4 ಗೋಲು ದಾಖಲಿಸಿ ಪಾಕ್‌ ತಂಡಕ್ಕೆ ಶಾಕ್ ನೀಡಿತು.

FIH Pro League

ಇನ್ನು ಕೊನೆಯ ಕ್ವಾರ್ಟರ್‌ನಲ್ಲಿ ಗೋಲುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕೆ ಇಳಿದ ಪಾಕ್‌ ತಂಡದ ಕನಸು ಫಲಿಸಲಿಲ್ಲ. ಈ ಹಂತದಲ್ಲೂ ಭಾರತದ ಸ್ಟಾರ್ ಆಟಗಾರರು ಮನಮೋಹಕ ಪ್ರದರ್ಶನ ನೀಡಿದರು. ಪಂದ್ಯದ 54ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಆಕರ್ಷಕ ಗೋಲು ಬಾರಿಸಿ ಮಿಂಚಿದರು. ಭಾರತದ ಗೋಲಿನ ಅಂತರವೂ ಹೆಚ್ಚಾಯಿತು. ಅಲ್ಲದೆ ಕೊನೆಯ ಕ್ಷಣದ ವರೆಗೂ ಗೋಲು ಬಾರಿಸುವ ಪಾಕ್‌ ಆಸೆ ನುಚ್ಚುನೂರಾಯಿತು.

ಟೀಮ್ ಇಂಡಿಯಾ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯ ಜೂನ್‌ 28 ರಂದು ನಡೆಯಲಿದೆ.

Story first published: Saturday, June 27, 2026, 13:07 [IST]
Other articles published on Jun 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+