ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡಕ್ಕೆ ಫಿಂಚ್ ನಾಯಕ

ಅಬು ಧಾಬಿ, ಅಕ್ಟೋಬರ್ 05: ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಆಡಲಿರುವ ಆಸ್ಟ್ರೇಲಿಯಾ ತಂಡಕ್ಕೆ ಆರೋನ್ ಫಿಂಚ್ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ.
ದುಬೈನಲ್ಲಿ ಭಾನುವಾರದಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಫಿಂಚ್ ಆಡಲಿದ್ದಾರೆ. .2016ರ ವಿಶ್ವ ಟಿ20ಗೂ ಮುನ್ನ ತಂಡವನ್ನು ಮುನ್ನಡೆಸಿದ್ದ ಫಿಂಚ್ ಅವರಿಗೆ ಈಗ ಟಿ20 ತಂಡದ ನಾಯಕನಾಗುವ ಅವಕಾಶ ಸಿಕ್ಕಿದೆ.
ಮಿಚ್ ಮಾರ್ಷ್ ಹಾಗೂ ಅಲೆಕ್ಸ್ ಕ್ಯಾರೆ ಅವರನ್ನು ಉಪ ನಾಯಕರಾಗಿ ನೇಮಿಸಲಾಗಿದ್ದು, ಜಸ್ಟೀನ್ ಲ್ಯಾಂಗರ್ ಮುಖ್ಯ ಕೋಚ್ ಆಗಿದ್ದಾರೆ. ಬೆನ್ ಮೆಕ್ ಡೆರ್ಮಟ್ ಅವರು ಚೊಚ್ಚಲ ಪಂದ್ಯವನ್ನಾಡಲಿದ್ದಾರೆ. ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಲಿನ್ ತಂಡಕ್ಕೆ ಮರಳಿದ್ದರೆ, ಗ್ಲೆನ್ ಮ್ಯಾಕ್ಸ್ ವೆಲ್ ತಂಡವನ್ನು ಸೇರಿಕೊಂಡಿದ್ದಾರೆ.
ಅಬು ಧಾಬಿಯಲ್ಲಿ ಅಕ್ಟೋಬರ್ 24ರಂದು ದುಬೈಯಲ್ಲಿ 26 ಹಾಗೂ 28ರಂದು ಮೂರು ಟಿ20ಐ ಪಂದ್ಯಗಳು ನಿಗದಿಯಾಗಿವೆ.
ಆಸ್ಟ್ರೇಲಿಯಾ ತಂಡ ಇಂತಿದೆ: ಅರೋನ್ ಫಿಂಚ್ (ನಾಯಕ), ಅಸ್ಟಾನ್ ಅಗರ್, ಅಲೆಕ್ಸ್ ಕ್ಯಾರೆ, ನಾಥನ್ ಕೌಲ್ಟರ್ ನೈಲ್, ಕ್ರಿಸ್ ಲಿನ್, ನಾಥನ್ ಲಿಯಾನ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್ ವೆಲ್, ಬೆನ್ ಮೆಕ್ ಡರ್ಮಟ್, ಡಾರ್ಸಿ ಶಾರ್ಟ್, ಬಿಲ್ಲಿ ಸ್ಟಾನ್ಲೇಕ್, ಮಿಚೆಕ್ ಸ್ಟಾಕ್,ಆಂಡ್ರ್ಯೂ ಟೈ, ಆಡಂ ಝಂಪಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications