ಕ್ರಿಕೆಟರ್ : ಮೊಹಮ್ಮದ್ ಶಮಿ ವಿರುದ್ಧ ಎಫ್ ಐಆರ್

ಕೋಲ್ಕತಾ, ಮಾರ್ಚ್ 09: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಇಲ್ಲಿನ ಪೊಲೀಸರು ಕೌಟುಂಬಿಕ ಕಲಹ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ. ಆದರೆ ಶಮಿ ತಮ್ಮ ವಿರುದ್ಧ ಬಂದಿರುವ ವಿವಾಹೇತರ ಸಂಬಂಧ, ಪತ್ನಿ ಪೀಡನೆ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಮೊಹಮ್ಮದ್ ಶಮಿ ಅವರ ಪತ್ನಿ ಹಸೀನಾ ಅವರು ನೀಡಿದ ದೂರಿನ ಆಧಾರದ ಮೇಲೆ ಕೋಲ್ಕತಾದ ಜಾದವ್ ಪುರ್ ಪೊಲೀಸರು ಐಪಿಸಿ ಸೆಕ್ಷನ್ 498 (ಎ) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಜತೆಗೆ ಐಪಿಸಿ ಸೆಕ್ಷನ್ 307, 323, 376, 506, 328, ಸೆಕ್ಷನ್ 34ರಂತೆ ಪ್ರಕರಣ ದಾಖಲಿಸಲಾಗಿದೆ.
ಮೊಹಮ್ಮದ್ ಶಮಿ ಹಲವು ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಶಮಿ ಅವರದ್ದು ಎನ್ನಲಾದ ಹಲವು ವಾಟ್ಸಪ್ ಚಾಟ್, ಕೆಲವು ಹುಡುಗಿಯರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದರು.
ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು, ನನ್ನ ತೇಜೋವಧೆ ಮಾಡಲು ಮತ್ತು ನನ್ನ ವೃತ್ತಿ ಜೀವನಕ್ಕೆ ಧಕ್ಕೆ ಉಂಟು ಮಾಡಲು ಮಾಡಲಾಗುತ್ತಿರುವ ಪ್ರಯತ್ನಗಳು ಇವು ಎಂದು ಹೇಳಿದ್ದಾರೆ.
ಮೊಹಮ್ಮದ್ ಶಮಿ ಅವರ ವಿರುದ್ಧ ಆರೋಪ ಬಂದಿರುವ ಕಾರಣ ಅವರನ್ನು ಬಿಸಿಸಿಐ ತನ್ನ ಆಟಗಾರರ ಕೇಂದ್ರೀಯ ಗುತ್ತಿಗೆಯಿಂದ ಹೊರಗಿಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications