
ಚೆಕ್ ಬೌನ್ಸ್ ಪ್ರಕರಣದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಇತರ ಏಳು ಮಂದಿಯ ವಿರುದ್ಧ ಬಿಹಾರದ ಬೇಗುಸರಾಯ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಎಸ್‌ಕೆ ಎಂಟರ್‌ಪ್ರೈಸಸ್ ಹೆಸರಿನ ಕಂಪನಿಯು ಸೋಮವಾರ ಬೇಗುಸರಾಯ್‌ನ ಸಿಜೆಎಂ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದೆ. ಅವರು 'ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್' ನಿಂದ ಪಡೆದ 30 ಲಕ್ಷ ರೂಪಾಯಿ ಮೌಲ್ಯದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿದ್ದಾರೆ. ಧೋನಿ ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್ ಅನ್ನು ಪ್ರಚಾರ ಮಾಡಿದ್ದರು ಮತ್ತು ಆದ್ದರಿಂದ ಅವರನ್ನೂ ಕೂಡ ಈ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.
ಈ ವಿಚಾರ ನ್ಯಾಯಾಲದ ಮೆಟ್ಟಿಲೇರಿದ್ದು, ಸೋಮವಾರ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯವು ಪ್ರಕರಣವನ್ನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಜಯ್ ಕುಮಾರ್ ಮಿಶ್ರಾ ಅವರಿಗೆ ವರ್ಗಾಯಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 28ರಂದು ನಡೆಯಲಿದೆ.
ಏನಿದು ಪ್ರಕರಣ?
ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್‌ನಿಂದ ಎಸ್‌ಕೆ ಎಂಟರ್‌ಪ್ರೈಸ್‌ಗೆ 30 ಲಕ್ಷ ರೂಪಾಯಿ ಮೌಲ್ಯದ ರಸಗೊಬ್ಬರಗಳನ್ನು ಆರ್ಡರ್ ಪಡೆದಿತ್ತು. ಎಸ್‌ಕೆ ಎಂಟರ್‌ಪ್ರೈಸ್ ಕಂಪನಿಯು ಉತ್ಪನ್ನವನ್ನು ವಿತರಿಸಿತು, ಆದರೆ ಡೀಲರ್ಗೆ ಆರ್ಡರ್ ಒದಗಿಸುವಾಗ ಒಪ್ಪಂದವನ್ನು ಅನುಸರಿಸಲಾಗಿಲ್ಲ ಎಂದು ಆರೋಪಿಸಲಾಯಿತು, ಹೀಗಾಗಿ ಹೆಚ್ಚಿನ ಪ್ರಮಾಣದ ಉತ್ಪನ್ನವು ಮಾರಾಟವಾಗದೆ ಉಳಿದಿದೆ.
ನಂತರ ಕಂಪನಿಯು ಉಳಿದ ರಸಗೊಬ್ಬರವನ್ನು ಹಿಂತೆಗೆದುಕೊಂಡಿತು ಮತ್ತು ಅದರ ಬದಲಾಗಿ ಅವರು ಏಜೆನ್ಸಿಗೆ 30 ಲಕ್ಷ ರೂ. ಚೆಕ್ ಬ್ಯಾಂಕಿನಲ್ಲಿ ಠೇವಣಿ ಇಟ್ಟರೂ ಬೌನ್ಸ್ ಆಗಿತ್ತು. ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದ್ದು, ಉತ್ತರಿಸದೆ ಉಳಿದಿದೆ. ಅದರ ನಂತರ ಎಸ್‌ಕೆ ಎಂಟರ್‌ಪ್ರೈಸಸ್ ನೀರಜ್ ಕುಮಾರ್ ನಿರಾಲಾ ಅವರು ಸಂಬಂಧಪಟ್ಟ ಉತ್ಪನ್ನವನ್ನು ಪ್ರಚಾರ ಮಾಡಿದ ಧೋನಿ ಮತ್ತು ಇತರ 7 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.