Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Flashback: 70-80ರ ದಶಕದ ವೆಸ್ಟ್ ಇಂಡೀಸ್ ತಂಡದಲ್ಲಿದ್ದ ದೈತ್ಯ ಕ್ರಿಕೆಟಿಗರು

ಹದಿಮೂರನೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ದಿನಾಂಕ ಘೋಷಣೆಯಾಗಿದೆ. ಇದೇ ಬರುವ ಅಕ್ಟೋಬರ್ ತಿಂಗಳಲ್ಲಿ ಭಾರತದ ವಿವಿಧ ನಗರಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಇದಕ್ಕೂ ಮುನ್ನ ನಡೆದ ಕ್ವಾಲಿಫೈಯರ್ ಹಂತದ ಪಂದ್ಯದಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗದೇ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದೆ.

70-80ರ ದಶಕದಲ್ಲಿ ಎದುರಾಳಿ ಆಟಗಾರರಿಗೆ ದುಃಸ್ವಪ್ನದಂತೆ ಕಾಡುತ್ತಿದ್ದ ವೆಸ್ಟ್ ಇಂಡೀಸ್ ತಂಡ ಈಗ ಕ್ವಾಲಿಫೈ ಆಗದೇ ಸರಣಿಯಿಂದ ಔಟ್ ಆಗಿರುವುದು ವಿಪರ್ಯಾಸ. ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್ಲೆಂಡ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆಮೂಲಕ, ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಕೆರಿಬಿಯನ್ ತಂಡ ವಿಫಲವಾಗಿದೆ.

First Three World Cup Cricket Final Squad Of West Indies Team Match Played In England

1975, 1979 ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡ, 1983ರಲ್ಲಿ ಅಂಡರ್ ಡಾಗ್ ಎಂದು ಗುರುತಿಸಲ್ಪಟ್ಟಿದ್ದ ಕಪಿಲ್ ದೇವ್ ನೇತೃತ್ವದ ಭಾರತದ ವಿರುದ್ದ ಸೋಲುವ ಮೂಲಕ ರನ್ನರ್ ಅಪ್ ಆಗಿತ್ತು. ಇದಾದ ನಂತರ ವೆಸ್ಟ್ ಇಂಡೀಸ್ ತಂಡ ನಿರ್ಣಾಯಕ ಘಟ್ಟಕ್ಕೆ ತಲುಪಲೇ ಇಲ್ಲ.

ಮೊದಲ ವಿಶ್ವಕಪ್ ನಲ್ಲಿ ಕೆರೆಬಿಯನ್ ತಂಡ ಆಸ್ಟ್ರೇಲಿಯಾ ವಿರುದ್ದ ಗೆದ್ದಿತ್ತು, ಆ ಪಂದ್ಯಾವಳಿಗಳು ಇಂಗ್ಲೆಂಡ್ ನಲ್ಲಿ ಆಡಲಾಗಿತ್ತು. ಎರಡನೇ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ದ ಗೆಲುವು ಸಾಧಿಸಿತ್ತು. ಮೂರನೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ದ ಗೆಲುವು ಸಾಧಿಸಿತ್ತು. ಎಲ್ಲಾ ಮೂರು ಪಂದ್ಯಾವಳಿಗಳು ಇಂಗ್ಲೆಂಡ್ ನಲ್ಲಿ ಆಡಲಾಗಿತ್ತು.

1975, 1979 ಮತ್ತು 1983ರಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಯಾರ್ಯಾರು ಆಟಗಾರರು ಇದ್ದರು (ಫೈನಲ್ ಪಂದ್ಯದಲ್ಲಿ), ಪಟ್ಟಿ ಇಲ್ಲಿದೆ:

1975: ಕ್ಲೈವ್ ಲಾಯ್ಡ್ (ನಾಯಕ), ಗಾರ್ಡನ್ ಗ್ರೀನಿಚ್, ವಿವಿಎನ್ ರಿಚರ್ಡ್ಸ್, ಆಂಡಿ ರಾಬರ್ಟ್ಸ್, ಆಲ್ವಿನ್ ಕಾಳಿಚರಣ್, ಡೆರಿಕ್ ಮರ್ರೇ (ವಿಕೆಟ್ ಕೀಪರ್), ಕೀಥ್ ಬೊಯ್ಸ್, ಲ್ಯಾನ್ಸ್ ಗಿಬ್ಸ್, ವ್ಯಾನ್ ಬರ್ನ್ ಹೋಲ್ಡರ್, ಬರ್ನಾರ್ಡ್ ಜ್ಯೂಲಿಯನ್, ರೋಹನ್ ಕನ್ನಯ್ಯ, ರಾಯ್ ಫೆಡ್ರಿಕ್ಸ್.

First Three World Cup Cricket Final Squad Of West Indies Team Match Played In England

1979: ಕ್ಲೈವ್ ಲಾಯ್ಡ್ (ನಾಯಕ), ಕೊಲಿನ್ ಕ್ರಾಫ್ಟ್, ಜೋಲ್ ಗಾರ್ನರ್, ಗಾರ್ಡನ್ ಗ್ರೀನಿಚ್, ಡೆಸ್ಮಂಡ್ ಹೇಯನ್ಸ್, ಮೈಕಲ್ ಹೋಲ್ಡಿಂಗ್, ಆಲ್ವಿನ್ ಕಾಳಿಚರಣ್, ಕೊಲಿಸ್ ಕಿಂಗ್, ಡೆರಿಕ್ ಮರ್ರೇ (ವಿಕೆಟ್ ಕೀಪರ್), ವಿವಿಎನ್ ರಿಚರ್ಡ್ಸ್, ಆಂಡಿ ರಾಬರ್ಟ್ಸ್, ಮಾಲ್ಕಂ ಮಾರ್ಷಲ್.

1983: ಕ್ಲೈವ್ ಲಾಯ್ಡ್ (ನಾಯಕ), ಗಾರ್ಡನ್ ಗ್ರೀನಿಚ್, ಡೆಸ್ಮಂಡ್ ಹೇಯನ್ಸ್, ವಿವಿಎನ್ ರಿಚರ್ಡ್ಸ್, ಲ್ಯಾರಿ ಗೋಮ್ಸ್, ಫೌದ್ ಬಚೂಸ್, ಜೆಎಫ್ ಡ್ಯುಜಾನ್ (ವಿಕೆಟ್ ಕೀಪರ್), ಮಾಲ್ಕಂ ಮಾರ್ಷಲ್, ಆಂಡಿ ರಾಬರ್ಟ್ಸ್, ಜೋಲ್ ಗಾರ್ನರ್, ಮೈಕಲ್ ಹೋಲ್ಡಿಂಗ್, ಗಸ್ ಲೋಗಿ.

Story first published: Tuesday, July 4, 2023, 17:17 [IST]
Other articles published on Jul 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+