ಸುಳ್ಳಾಯಿತು ಚೆನ್ನೈನ ಮೀನು ಚಾಣಕ್ಯ ಹೇಳಿದ ಭವಿಷ್ಯ
ಚೆನ್ನೈ, ಮಾ. 26 : ಆಸ್ಟ್ರೇಲಿಯಾ ನೀಡಿರುವ 329 ರನ್ ಬೆನ್ನತ್ತಿರುವ ಭಾರತ ಬೆನ್ನತ್ತಿದೆ. ಈ ಸೆಮಿ ಫೈನಲ್ ಯಾರು ಗೆಲ್ಲಲಿದ್ದಾರೆ? ಫೈನಲ್ಲಿನಲ್ಲಿ ನ್ಯೂಜಿಲೆಂಡನ್ನು ಯಾರು ಎದುರಿಸಲಿದ್ದಾರೆ? ಐವತ್ತು ಓವರ್ ಮುಗಿಯುವವರೆಗೆ ಏನೂ ಹೇಳಲಾಗದು. ಆದರೆ, ಚೆನ್ನೈನಲ್ಲಿ ಭವಿಷ್ಯ ನುಡಿಯುವ 'ಚಾಣಕ್ಯ II' ಏನು ಶಕುನ ನುಡಿದಿದೆ ಗೊತ್ತಾ?
ಭಾರತ ಸೆಮಿ ಫೈನಲ್ ಗೆದ್ದು ಫೈನಲ್ ಪ್ರವೇಶಿಸಲಿದೆ! ಆದರೆ, ದುರಾದೃಷ್ಟವಶಾತ್ ಚಾಣಕ್ಯ ಹೇಳಿದ ಭವಿಷ್ಯ ಸುಳ್ಳಾಗಿದೆ. ಸೆಮಿ ಫೈನಲ್ ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 95 ರನ್ ಗಳಿಂದ ಸೋತಿದೆ. ಆಸ್ಟ್ರೇಲಿಯಾಗೆ ಅಭಿನಂದನೆ. ಪಾಪ, ಮೀನಿಗೆ ಏನು ಗೊತ್ತಾಗುತ್ತದೆ? ಸದ್ಯಕ್ಕೆ, ಅದಕ್ಕೇನೂ ಹುಚ್ಚು ಕ್ರಿಕೆಟ್ ಪ್ರೇಮಿಗಳು ಮಾಡದಿದ್ದರೆ ಸಾಕು! [ಭಾರತ Vs ಆಸ್ಟ್ರೇಲಿಯಾ ಮ್ಯಾಚ್ ವರದಿ]

ನಂಬುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು. ನಮ್ಮ ಭಾರತದಲ್ಲಿ ಇಲಿ, ಗಿಣಿ ಭವಿಷ್ಯ ನುಡಿಯುವುದು ಹೊಸದೇನಲ್ಲ. ಕೆಲ ವರ್ಷಗಳ ಹಿಂದೆ ಫಿಫಾ ವಿಶ್ವಕಪ್ ನಡೆದಿದ್ದಾಗ ಅಕ್ಟೋಪರ್ ಪಾಲ್ ಕೂಡ ಭವಿಷ್ಯ ನುಡಿದಿತ್ತು. ಇಲಿ, ಗಿಣಿ, ಅಕ್ಟೋಪಸ್ ಭವಿಷ್ಯ ನುಡಿಯುತ್ತಿರುವಾಗ ನಾನೇಕೆ ಹೇಳಬಾರದು ಎಂದು ಚಾಣಕ್ಯನೂ ಭವಿಷ್ಯ ಹೇಳಿದ್ದಾನೆ.
ಅಕ್ವೇರಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಬಾವುಟವಿರುವ ದೋಣಿಯನ್ನು ಚಾಣಕ್ಯನಿಗೆ ಮುಟ್ಟಲು ಬಿಟ್ಟಾಗ, ಎರಡು ಬಾರಿ ಭಾರತದ ಬಾವುಟವನ್ನು ಚಾಣಕ್ಯ ಮುಟ್ಟಿದೆ. ಇದನ್ನು ನೋಡುತ್ತಿದ್ದಂತೆ ಭಾರತವನ್ನು ಬೆಂಬಲಿಸುವ ಕ್ರಿಕೆಟ್ ಪ್ರೇಮಿಗಳು ಕುಣಿದು ನಲಿದಾಡಿದ್ದಾರೆ. ಭಾರತವೇ ಗೆದ್ದುಬಿದ್ದಷ್ಟು ಜಿಗಿದಾಡಿದ್ದಾರೆ.
ಸ್ಕೋರ್ ಕಾರ್ಡ್ | ವಿಶ್ವಕಪ್ ವಿಶೇಷ ಪುಟ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications