Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಆಟಗಾರರು ಅನ್‌ಫಿಟ್ ಆಗಿರುವುದನ್ನು ನೋಡಿ ಆಘಾತವಾಗಿದೆ!

Fitness of Players in IPL: Former India Hockey Captain Viren Rasquinha Shocked About Players Looking So Unfit

ಐಪಿಎಲ್ 2020ಯ ಮೊದಲ ಪಂದ್ಯ ಹಲವು ರೋಮಾಂಚನಕಾರಿ ಕ್ಷಣಗಳಿಗೆ ಸಾಕ್ಷಿಯಾಯಿತು. ಮೊದಲ ಪಂದ್ಯದಲ್ಲೇ ಪ್ರೇಕ್ಷಕರು ಟಿ20 ಪಂದ್ಯದ ಸವಿಯನ್ನು ಸಂಪೂರ್ಣವಾಗಿ ಸವಿಯುವಲ್ಲಿ ಯಶಸ್ವಿಯಾದರು. ಪ್ರೇಕ್ಷಕರಿಲ್ಲದೆ ನಡೆದ ಈ ಪಂದ್ಯ ದೊಡ್ಡ ಪ್ರಮಾಣದಲ್ಲಿ ಟಿವಿ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಬಾರಿಯ ಐಪಿಎಲ್‌ಗೆ ಲಾಕ್‌ಡೌನ್ ವ್ಯತಿರಿಕ್ತ ರೀತಿಯಲ್ಲಿ ಆಟಗಾರರ ಮೇಲೆ ಪರಿಣಾಮ ಬೀರಿರುವುದು ಮೊದಲ ಪಂದ್ಯದಲ್ಲೇ ಗೋಚರವಾಗಿದೆ.

ಮೊದಲ ಪಂದ್ಯದಲ್ಲಿ ಪಾಲ್ಗೊಂಡಿದ್ದ ಎರಡೂ ತಂಡಗಳ ಹಲವು ಆಟಗಾರು ಬೊಜ್ಜು ಬರಿಸಿಕೊಂಡಿರುವುದು ಕಾಣಿಸಿದೆ. ಲಾಕ್‌ಡೌನ್ ಸಮಯದಲ್ಲಿ ಹಾಗೂ ಆದ ನಂತರ ಸೂಕ್ತ ದೈಹಿಕ ದಂಡನ ಮಾಡದೆ ಆಟಗಾರರು ಬೊಜ್ಜು ತುಂಬಿಕೊಂಡಿರುವುದು ಮೈದಾನದ ದೃಶ್ಯಗಳಲ್ಲಿ ಸಾಬೀತಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಆಟಗಾರರನ್ನು ಟ್ರೋಲ್ ಮಾಡ ತೊಡಗಿದ್ದಾರೆ ಅಭಿಮಾನಿಗಳು.

ಇದೇ ವಿಚಾರವಾಗಿ ಭಾರತೀಯ ಹಾಕಿ ತಂಡದ ಮಾಜಿ ಆಟಗಾರ ವಿರೇನ್ ರಸ್ಕ್ವೈನ್ಹ ಆಘಾತ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಫಿಟ್‌ನೆಸ್ ಇಟ್ಟುಕೊಂಡು ಉತ್ಕೃಷ್ಟ ಮಟ್ಟದಲ್ಲಿ ಕ್ರೀಡೆಯಲ್ಲಿ ಪಾಳ್ಗೊಳ್ಳುವುದನ್ನು ಬೇರೆಲ್ಲೂ ನೋಡಲು ಸಾಧ್ಯವಿದೆ ಎಂದು ಅನಿಸುತ್ತಿಲ್ಲ ಎಂದು ವಿರೇನ್ ರಸ್ಕ್ವೈನ್ಹ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ವಿರೇನ್ ರಸ್ಕ್ವೈನ್ಹ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ "ನಾನು ಗಲ್ಲಿ ಕ್ರಿಕೆಟ್‌ಗಿಂತ ಹೆಚ್ಚಿನ ಮಟ್ಟದಲ್ಲಿ ಕ್ರಿಕೆಟನ್ನು ಆಡಿದವನಲ್ಲ. ಆದರೆ ಐಪಿಎಲ್ 2020ಯಲ್ಲಿ ಕೆಲ ಕ್ರಿಕೆಟ್ ಆಟಗಾರರು ಅಸಮರ್ಥರಾಗಿರುವುದನ್ನು ನೋಡಿ ನಾನು ಆಘಾತಗೊಂಡಿದ್ದೇನೆ. ಇನ್ನೊಂದು ದೈಹಿಕ ಕ್ರೀಡೆಯಲ್ಲಿ ಉನ್ನತ ಮಟ್ಟದ ಆಟದಲ್ಲಿ ಈ ರೀತಿಯ ಫಿಟ್‌ನೆಸ್ ಇಟ್ಟುಕೊಂಡು ಆಡುವುದನ್ನು ಆಡಬಹುದು ಎಂದು ನನಗೆ ಅನಿಸುತ್ತಿಲ್ಲ ಎಂದು ವಿರೇನ್ ರಸ್ಕ್ವೈನ್ಹ ಟ್ವೀಟ್ ಮಾಡಿದ್ದಾರೆ.

ಅಬುಧಾಬಿಯ ಶೇಕ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಹಾಗೂ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ಚೆನ್ನೈ ತಂಡ 5 ವಿಕೆಟ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Story first published: Sunday, September 20, 2020, 12:32 [IST]
Other articles published on Sep 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+