For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನಲ್ಲಿ ಇದುವರೆಗೂ ಒಂದೇ ಒಂದು ಬಾರಿಯೂ 'ನೋ ಬಾಲ್' ಹಾಕದ 5 ಬೌಲರ್‌ಗಳಿವರು

Five bowlers who never bowled a no-ball in international cricket

'ನೋಬಾಲ್' ಪ್ರತಿಯೊಬ್ಬ ಬೌಲರ್ ಕೂಡ ದ್ವೇಷಿಸುವ ಪದವಿದು. ಹೌದು, ಬೌಲರ್ ಓರ್ವ ಹಾಕುವ ಒಂದು ನೋ ಬಾಲ್ ಎಷ್ಟೋ ಪಂದ್ಯಗಳ ದಿಕ್ಕನ್ನೇ ಬದಲಾಯಿಸಿಬಿಟ್ಟಿದೆ. ಅದರಲ್ಲಿಯೂ ಈ ನೋ ಬಾಲ್ ಟೆಸ್ಟ್ ಕ್ರಿಕೆಟ್‌ಗಿಂತ ಹೆಚ್ಚಾಗಿ ಸೀಮಿತ ಓವರ್ ಪಂದ್ಯಗಳಲ್ಲಿ ಫೀಲ್ಡಿಂಗ್ ವಿಭಾಗಕ್ಕೆ ದೊಡ್ಡ ಮಟ್ಟದ ಹಿನ್ನಡೆಯನ್ನುಂಟು ಮಾಡುತ್ತದೆ ಎಂದೇ ಹೇಳಬಹುದು. ಬೌಲರ್ ಓರ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ನೋ ಬಾಲ್ ಹಾಕಿದರೆ ಬ್ಯಾಟಿಂಗ್ ವಿಭಾಗಕ್ಕೆ ಒಂದು ಉಚಿತ ರನ್ ಹಾಗೂ ವಿಕೆಟ್ ಆದರೂ ಜೀವದಾನ ಸಿಗಲಿದೆ ಮತ್ತು ಇದೇ ನೋ ಬಾಲ್‌ನ್ನು ಬೌಲರ್ ಓರ್ವ ಸೀಮಿತ ಓವರ್ ಪಂದ್ಯಗಳಲ್ಲಿ ಹಾಕಿದರೆ ಬ್ಯಾಟಿಂಗ್ ಒಂದು ಉಚಿತ ರನ್ ಹಾಗೂ ವಿಕೆಟ್ ಆದರೂ ಜೀವದಾನ ಸಿಗುವುದು ಮಾತ್ರವಲ್ಲದೇ ನಂತರದ ಎಸೆತ ಫ್ರೀ ಹಿಟ್ ಆಗಿರಲಿದೆ. ಹೌದು, ಸೀಮಿತ ಓವರ್ ಪಂದ್ಯಗಳಲ್ಲಿ ನೋಬಾಲ್ ಹಾಕಿದರೆ ನಂತರದ ಎಸೆತ ಫ್ರೀ ಹಿಟ್ ಆಗಲಿದ್ದು ಬ್ಯಾಟಿಂಗ್ ವಿಭಾಗಕ್ಕೆ ಆ ಎಸೆತದಲ್ಲಿ ಔಟ್ ಅದರೂ ನಾಟ್ಔಟ್‌ನ ಅನುಕೂಲವಿರಲಿದೆ. ಹೀಗೆ ಸಾಕಷ್ಟು ಪ್ರಭಾವ ಬೀರುವ ನೋಬಾಲ್ ಸಾಕಷ್ಟು ಪಂದ್ಯಗಳಲ್ಲಿ ಸೋಲನುಭವಿಸುವುಕ್ಕೂ ಕಾರಣವಾದ ಉದಾಹರಣೆಗಳಿವೆ.

ಇನ್ನು ಬೌಲರ್‌ಗಳೆಂದ ಮೇಲೆ ನೋ ಬಾಲ್ ಎಸೆಯುವುದು ಸಾಮಾನ್ಯ. ಆದರೆ, ತಮ್ಮ ಕ್ರಿಕೆಟ್ ಜೀವನದಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ನೋ ಬಾಲ್ ಎಸೆಯದೇ ಇರುವ ಐವರು ಬೌಲರ್‌ಗಳಿದ್ದು, ಆ ಬೌಲರ್‌ಗಳ ಪಟ್ಟಿ ಇಲ್ಲಿದೆ.

1. ಇಯಾನ್ ಬೋಥಮ್

1. ಇಯಾನ್ ಬೋಥಮ್

ಇಂಗ್ಲೆಂಡ್‌ನ ಲೆಜೆಂಡರಿ ಬೌಲರ್ ಇಯಾನ್ ಬೋಥಮ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಟ್ಟು 102 ಟೆಸ್ಟ್ ಪಂದ್ಯಗಳನ್ನಾಡಿದ್ದು, 116 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇನ್ನು 383 ಟೆಸ್ಟ್ ವಿಕೆಟ್ ಮತ್ತು 145 ಏಕದಿನ ವಿಕೆಟ್ ಪಡೆದಿರುವ ಇಯಾನ್ ಬೋಥಮ್ 28086 ಎಸೆತಗಳನ್ನು ಎಸೆದಿದ್ದು, ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ನಂತರ ಇಂಗ್ಲೆಂಡ್ ಪರ ಅತಿಹೆಚ್ಚು ಎಸೆತ ಎಸೆದಿರುವ ಬೌಲರ್ ಎನಿಸಿಕೊಂಡಿದ್ದಾರೆ. ಹೀಗೆ ಇಷ್ಟು ಪಂದ್ಯಗಳಲ್ಲಿ ಆಟವನ್ನಾಡಿರುವ ಇಯಾನ್ ಬೋಥಮ್ ತಮ್ಮ 16 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಮ್ಮೆಯೂ ಕೂಡ ಬೋ ಬಾಲ್ ಹಾಕಿಲ್ಲ.

2. ಡೆನ್ನಿಸ್ ಲಿಲ್ಲಿ

2. ಡೆನ್ನಿಸ್ ಲಿಲ್ಲಿ

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ಆಸ್ಟ್ರೇಲಿಯಾ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಡೆನ್ನಿಸ್ ಲಿಲ್ಲಿ ಒಟ್ಟು 70 ಟೆಸ್ಟ್ ಪಂದ್ಯಗಳನ್ನಾಡಿ 355 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೂ 63 ಏಕದಿನ ಪಂದ್ಯಗಳನ್ನಾಡಿರುವ ಡೆನ್ನಿಸ್ ಲಿಲ್ಲಿ 103 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇನ್ನು 132 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಟ್ಟು 18467 ಎಸೆತಗಳನ್ನು ಎಸೆದಿರುವ ಡೆನ್ನಿಸ್ ಲಿಲ್ಲಿ 63 ಏಕದಿನ ಪಂದ್ಯಗಳಲ್ಲಿ 3593 ಎಸೆತಗಳನ್ನು ಎಸೆದಿದ್ದಾರೆ. ಇಷ್ಟು ಎಸೆತಗಳನ್ನು ಹಾಕಿರುವ ಡೆನ್ನಿಸ್ ಲಿಲ್ಲಿ ಒಮ್ಮೆಯೂ ಕೂಡ ನೋ ಬಾಲ್ ಹಾಕಿಯೇ ಇಲ್ಲ.

3. ಕಪಿಲ್ ದೇವ್

3. ಕಪಿಲ್ ದೇವ್

ಟೀಮ್ ಇಂಡಿಯಾದ ವಿಶ್ವಕಪ್ ಹೀರೋ ಎಂದೇ ಖ್ಯಾತಿಯನ್ನು ಪಡೆದಿರುವ ಕಪಿಲ್ ದೇವ್ ತಮ್ಮ 16 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅನಿಲ್ ಕುಂಬ್ಳೆ ಮತ್ತುಹರ್ಭಜನ್ ಸಿಂಗ್ ಭಾರತದ ಪರ ಅತಿಹೆಚ್ಚು ಎಸೆತಗಳನ್ನು ಎಸೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಒಟ್ಟು 356 ಪಂದ್ಯ ಮತ್ತು 448 ಇನ್ನಿಂಗ್ಸ್‌ನಲ್ಲಿ 687 ವಿಕೆಟ್ ಪಡೆದಿರುವ ಕಪಿಲ್ ದೇವ್ 38942 ಎಸೆತಗಳನ್ನು ಎಸೆದಿದ್ದು, ಒಂದೇ ಒಂದು ಬಾರಿ ಕೂಡ ನೋ ಬಾಲ್ ಎಸೆದೇ ಇಲ್ಲ.

4. ಇಮ್ರಾನ್ ಖಾನ್

4. ಇಮ್ರಾನ್ ಖಾನ್

ಪಾಕಿಸ್ತಾನದ ಮಾಜಿ ನಾಯಕ ಹಾಗೂ ಲೆಜೆಂಡರಿ ಆಲ್‌ರೌಂಡರ್ ಆಗಿರುವ ಇಮ್ರಾನ್ ಖಾನ್ 88 ಟೆಸ್ಟ್ ಪಂದ್ಯ ಹಾಗೂ 175 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದು, 362 ಟೆಸ್ಟ್ ವಿಕೆಟ್ ಹಾಗೂ 182 ಏಕದಿನ ವಿಕೆಟ್ ಪಡೆದಿದ್ದಾರೆ. ವಾಖರ್ ಯೂನಸ್ ಮತ್ತು ವಾಸಿಮ್ ಅಕ್ರಂ ನಂತರ ಪಾಕಿಸ್ತಾನದ ಪರ ಮೂರನೇ ಅತಿಹೆಚ್ಚು ಎಸೆತಗಳನ್ನು ಹಾಕಿದ್ದು ಒಮ್ಮೆಯೂ ಕೂಡ ನೋ ಬಾಲ್ ಎಸೆದೇ ಇಲ್ಲ.

ಶ್ರೀಲಂಕಾವನ್ನು ಸೋಲಿಸೋಕೆ ರೋಹಿತ್ ಗೆ ಹೆಲ್ಪ್‌ ಮಾಡಿದ್ದು ಯಾರು? | Oneindia Kannada
5. ಲಾನ್ಸ್ ಗಿಬ್ಸ್

5. ಲಾನ್ಸ್ ಗಿಬ್ಸ್

ವೆಸ್ಟ್ ಇಂಡೀಸ್‌ನ ಮಾಜಿ ಸ್ಪಿನ್ನರ್ ಲಾನ್ಸ್ ಗಿಬ್ಸ್ 79 ಟೆಸ್ಟ್ ಪಂದ್ಯಗಳನ್ನಾಡಿದ್ದು, ಮೂರು ಏಕದಿನ ಪಂದ್ಯಗಳನ್ನಾಡಿದ್ದಾರೆ. ಗಿಬ್ಸ್ ವೆಸ್ಟ್ ಇಂಡೀಸ್ ತಂಡದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಎಸೆತಗಳನ್ನು ಎಸೆದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. 27271 ಎಸೆತಗಳನ್ನು ಎಸೆದಿರುವ ಲಾನ್ಸ್ ಗಿಬ್ಸ್ 309 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಲಾನ್ಸ್ ಗಿಬ್ಸ್ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಮ್ಮೆಯೂ ಸಹ ನೋ ಬಾಲ್ ಹಾಕಿಯೇ ಇಲ್ಲ.

Story first published: Tuesday, March 15, 2022, 13:13 [IST]
Other articles published on Mar 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+