
ಅಕ್ಷರ್ ಪಟೇಲ್ ವೆಸ್ಟ್ ಇಂಡೀಸ್ ವಿರುದ್ಧ 35 ಎಸೆತಗಳಲ್ಲಿ ಅಜೇಯ 64 ರನ್
ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ 35 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿ ಭಾರತ ತಂಡವನ್ನು ಎರಡು ವಿಕೆಟ್‌ಗಳಿಂದ ಗೆಲ್ಲಿಸಿದರು.
ಟಾಸ್ ಗೆದ್ದ ವೆಸ್ಟ್ ವಿಂಡೀಸ್ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್‌ಗೆ 311 ರನ್ ಗಳಿಸಿದರು. ನಂತರ ಭಾರತದ ಪರ ಶಿಖರ್ ಧವನ್ ಮತ್ತು ಸೂರ್ಯಕುಮಾರ್ ಯಾದವ್ ಹೊರತುಪಡಿಸಿ ಎಲ್ಲಾ ಬ್ಯಾಟ್ಸ್‌ಮನ್‌ಗಳು ನಿರ್ಣಾಯಕ ಕೊಡುಗೆ ನೀಡಿದರು. ಶ್ರೇಯಸ್ ಅಯ್ಯರ್ 63 (71 ಎಸೆತ) ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ ಕೂಡ 54 ರನ್ ಬಾರಿಸಿದರು.

ಇಶಾನ್ ಕಿಶನ್ ಬಾಂಗ್ಲಾದೇಶ ವಿರುದ್ಧ 131 ಎಸೆತಗಳಲ್ಲಿ 210 ರನ್
ಇಶಾನ್ ಕಿಶನ್ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 2022ರ ಭಾರತದ ಕೊನೆಯ ಏಕದಿನ ಪಂದ್ಯದ ಸಮಯದಲ್ಲಿ 131 ಎಸೆತಗಳಲ್ಲಿ 210 ರನ್ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಭಾರತ ತಂಡ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಬೃಹತ್ ಮೊತ್ತ ದಾಖಲಿಸಿತು.
ಇಶಾನ ಕಿಶನ್ ತಮ್ಮ ಮೊದಲ ಏಕದಿನ ಶತಕವನ್ನು 85 ಎಸೆತಗಳಲ್ಲಿ ಪೂರೈಸಿದರು. ನಂತರ 103 ಎಸೆತಗಳಲ್ಲಿ 150 ರನ್ ಗಳಿಸಿದರು. ಅವರ ಮುಂದಿನ 50 ರನ್‌ಗಳು ಕೇವಲ 23 ಎಸೆತಗಳಲ್ಲಿ ಬಂದವು. ಕೇವಲ 126 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು.
24 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳನ್ನು ಒಳಗೊಂಡಂತೆ ಇಶಾನ್ ಕಿಶನ್ ಅವರ 210 ರನ್‌ಗಳ ಪ್ರದರ್ಶನದಿಂದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 409 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ವಿರಾಟ್ ಕೊಹ್ಲಿ ಕೂಡ ತಮ್ಮ 44ನೇ ಏಕದಿನ ಶತಕದೊಂದಿಗೆ 91 ಎಸೆತಗಳಲ್ಲಿ 113 ರನ್ ಗಳಿಸಿದರು.

ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ 131 ಎಸೆತಗಳಲ್ಲಿ ಅಜೇಯ 125 ರನ್
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ-ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ ಏಕಾಂಗಿಯಾಗಿ ತಮ್ಮ ತಂಡದ ಗೆಲುವಿಗೆ ದಾರಿ ತೋರಿಸಿದರು. ಭಾರತಕ್ಕೆ 2022ರ ಅತ್ಯುತ್ತಮ ಏಕದಿನ ಇನ್ನಿಂಗ್ಸ್ ಬಂದಿತು.
260 ರನ್‌ಗಳನ್ನು ಬೆನ್ನಟ್ಟಿದ ಟೀಂ ಇಂಡಿಯಾ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಕೇವಲ 72 ರನ್‌ಗಳಲ್ಲಿ ಕಳೆದುಕೊಂಡಾಗ ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ 133 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟವನ್ನು ನಿರ್ಮಿಸಿದರು. ಪಂತ್ ಆತಿಥೇಯ ಬೌಲರ್‌ಗಳ ಬೆವರಿಳಿಸಿ ಚೊಚ್ಚಲ ಏಕದಿನ ಶತಕದೊಂದಿಗೆ ಭಾರತವನ್ನು ಗೆಲುವಿನ ಗಡಿ ತಲುಪಿಸಿದರು.
ನಿಧಾನಗತಿ ಬ್ಯಾಟಿಂಗ್ ಆರಂಭಿಸಿದ ಪಂತ್ 71 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು. ಗುರಿಯು ಹತ್ತಿರವಾಗುತ್ತಿದ್ದಂತೆ, ಎಡಗೈ ಬ್ಯಾಟರ್ ತನ್ನ ಮುಂದಿನ ಅರ್ಧಶತಕವನ್ನು ಕೇವಲ 35 ಎಸೆತಗಳಲ್ಲಿ ಗಳಿಸಿದರು.
ರಿಷಭ್ ಪಂತ್ ಅವರ ಇನ್ನಿಂಗ್ಸ್‌ನಲ್ಲಿ 16 ಬೌಂಡರಿಗಳು ಮತ್ತು ಎರಡು ಸಿಕ್ಷರ್‌ಗಳನ್ನು ಸಿಡಿಸುವ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.


Click it and Unblock the Notifications












