
ಬಾಬರ್ ಅಜಂ- ಪಾಕಿಸ್ತಾನ- 2291 ರನ್
ವರ್ಷಾಂತ್ಯಕ್ಕೆ ಇನ್ನೂ ಹದಿನೈದು ದಿನಗಳು ಬಾಕಿ ಇರುವಾಗ ಎಲ್ಲಾ ಸಾಧ್ಯತೆಗಳನುಗುಣವಾಗಿ, ಪಾಕಿಸ್ತಾನದ ನಾಯಕ ಬಾಬರ್ ಅಜಂ 2022ರಲ್ಲಿ ಈ ವರ್ಷ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಗ್ರ ರನ್-ಸ್ಕೋರರ್ ಆಗಿ ಈ ವರ್ಷ ಮುಗಿಸುವುದು ಖಚಿತವಾಗಿದೆ. ಏಕೆಂದರೆ ತಮ್ಮ ಪ್ರತಿಸ್ಪರ್ಧಿಗಿಂತ ಬರೋಬ್ಬರಿ 500 ರನ್‌ಗಳ ಅಂತರದಲ್ಲಿ ಮುಂದಿದ್ದಾರೆ.
ಬಾಬರ್ ಅಜಂ ಈ ವರ್ಷ ಮೂರು ಸ್ವರೂಪಗಳ 48 ಇನ್ನಿಂಗ್ಸ್‌ಗಳಲ್ಲಿ 52ರ ಸರಾಸರಿಯಲ್ಲಿ 2291 ರನ್ ಗಳಿಸಿದ್ದಾರೆ. ಈ ವರ್ಷ 15 ಅರ್ಧ ಶತಕಗಳೊಂದಿಗೆ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ ಶತಕಗಳು ಮತ್ತು ಇಂಗ್ಲೆಂಡ್ ವಿರುದ್ಧ ಒಂದು ಟಿ20 ಶತಕ ಬಾರಿಸಿದ್ದಾರೆ.
ಆದರೆ, ಈ ವರ್ಷದ ಕೊನೆಯ ತಿಂಗಳುಗಳಲ್ಲಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದರು. ಬಾಬರ್ ಅಜಂ ಟಿ20 ವಿಶ್ವಕಪ್‌ನಲ್ಲಿ 93ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 124 ರನ್ ಗಳಿಸಿದರು ಮತ್ತು ಏಷ್ಯಾ ಕಪ್‌ನಲ್ಲಿಯೂ ರನ್ ಗಳಿಸಲು ವಿಫಲರಾಗಿದ್ದರು.

ಲಿಟನ್ ದಾಸ್- ಬಾಂಗ್ಲಾದೇಶ- 1780 ರನ್
ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಲಿಟನ್ ದಾಸ್ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಒಟ್ಟಾರೆ 46 ಇನ್ನಿಂಗ್ಸ್‌ಗಳಲ್ಲಿ 40ರ ಸರಾಸರಿಯಲ್ಲಿ 1780 ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ.
ಲಿಟನ್ ದಾಸ್ 2022ರಲ್ಲಿ ಇಲ್ಲಿಯವರೆಗೆ 3 ಶತಕಗಳನ್ನು ಹೊಡೆದಿದ್ದಾರೆ. 2 ಟೆಸ್ಟ್ ಶತಕಗಳು ಶ್ರೀಲಂಕಾ ವಿರುದ್ಧ ಮೀರ್‌ಪುರದಲ್ಲಿ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬಂದಿದ್ದರೆ, ಒಂದು ಏಕದಿನ ಶತಕ ಅಫ್ಘಾನಿಸ್ತಾನ ವಿರುದ್ಧ ಬಂದಿದೆ.
ಲಿಟನ್ ದಾಸ್ ಕೂಡ 12 ಅರ್ಧಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಬ್ಯಾಟರ್ ಲಿಟನ್ ದಾಸ್ 142 ಸ್ಟ್ರೈಕ್‌ರೇಟ್‌ನಲ್ಲಿ 127 ರನ್ ಗಳಿಸಿದರು.

ಮೊಹಮ್ಮದ್ ರಿಜ್ವಾನ್- ಪಾಕಿಸ್ತಾನ- 1572 ರನ್
ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಈ ವರ್ಷ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಜ್ವಾನ್ ಅವರು ಆರಂಭಿಕ ಆಟಗಾರರಾಗಿ ಬಡ್ತಿ ಪಡೆದ ನಂತರ ಕಳೆದ ಎರಡು ವರ್ಷಗಳಿಂದ ಟಿ20 ಪಂದ್ಯಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿ ರನ್ ಗಳಿಸುತ್ತಿದ್ದಾರೆ.
2022ರಲ್ಲಿ ಮೊಹಮ್ಮದ್ ರಿಜ್ವಾನ್ ಇದುವರೆಗೆ ಆಡಿದ 45 ಇನ್ನಿಂಗ್ಸ್‌ಗಳಲ್ಲಿ 40ರ ಸರಾಸರಿಯಲ್ಲಿ 1572 ರನ್ ಗಳಿಸಿದ್ದಾರೆ. ಈ 1572ರಲ್ಲಿ 996 ರನ್‌ಗಳು 45ರ ಸರಾಸರಿ ಹೊಂದಿರುವ ಟಿ20 ಪಂದ್ಯಗಳಲ್ಲಿ ಬಂದಿವೆ. ಒಟ್ಟಾರೆ ಅವರ 12 ಅರ್ಧಶತಕಗಳಲ್ಲಿ 10 ಅರ್ಧಶತಕಗಳಲ್ಲಿ ಟಿ20 ಪಂದ್ಯಗಳಲ್ಲಿ ಬಾರಿಸಿದ್ದಾರೆ. ಈ ವರ್ಷ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕರಾಚಿ ಟೆಸ್ಟ್‌ನಲ್ಲಿ ಮೊಹಮ್ಮದ್ ರಿಜ್ವಾನ್ ಏಕೈಕ ಶತಕ ಗಳಿಸಿದ್ದಾರೆ.

ಶ್ರೇಯಸ್ ಅಯ್ಯರ್- ಭಾರತ- 1489 ರನ್
ನಂಬಿಕಸ್ಥ ಬ್ಯಾಟ್ಸ್‌ಮನ್ ಎಂದೇ ಖ್ಯಾತಿಯಾಗಿರುವ ಶ್ರೇಯಸ್ ಅಯ್ಯರ್ ಭಾರತದ ಮೊದಲ ಆಯ್ಕೆಯ ಟಿ20 ಆಡುವ ಹನ್ನೊಂದರ ಭಾಗವಾಗಿರದಿದ್ದರೂ, ಶ್ರೇಯಸ್ ಅಯ್ಯರ್ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಅಸಾಧಾರಣ ಫಾರ್ಮ್‌ನಲ್ಲಿದ್ದಾರೆ. ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಇದೀಗ ಟೆಸ್ಟ್ ತಂಡದಲ್ಲಿಯೂ ನಿಯಮಿತವಾಗಿ ಆಯ್ಕೆಯಾಗುತ್ತಿದ್ದಾರೆ.
2022ರಲ್ಲಿ ಶ್ರೇಯಸ್ ಅಯ್ಯರ್ ಅವರ 1489 ರನ್‌ಗಳಲ್ಲಿ 55ರ ಸರಾಸರಿಯಲ್ಲಿ ಅರ್ಧದಷ್ಟು 724 ರನ್‌ಗಳು ಏಕದಿನ ಪಂದ್ಯಗಳಲ್ಲಿ ಬಂದಿವೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಶತಕ ಸೇರಿದಂತೆ 6 ಅರ್ಧಶತಕಗಳೊಂದಿಗೆ ಳನ್ನು ಬಾರಿಸಿದ್ದಾರೆ. ಈ ವರ್ಷದಲ್ಲಿ ಶ್ರೇಯಸ್ ಅಯ್ಯರ್ ಆಡಿದ 17 ಟಿ20 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 463 ರನ್ ಗಳಿಸಿದ್ದಾರೆ ಮತ್ತು 141 ಸ್ಟ್ರೈಕ್ ರೇಟ್ 4 ಅರ್ಧಶತಕಗಳನ್ನು ದಾಖಲಿಸಿದರು ಮತ್ತು 6 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 60ರ ಸರಾಸರಿಯಲ್ಲಿ ಶ್ರೇಯಸ್ ಅಯ್ಯರ್ 3 ಅರ್ಧಶತಕಗಳನ್ನು ಬಾರಿಸಿದರು.

ಸ್ಟೀವ್ ಸ್ಮಿತ್- ಆಸ್ಟ್ರೇಲಿಯಾ- 1433 ರನ್
ಆಸ್ಟ್ರೇಲಿಯಾದ ಟಿ20 ತಂಡದಿಂದ ಸ್ಟೀವ್ ಸ್ಮಿತ್ ಅವರನ್ನು ಕೈಬಿಡಲಾಗಿದೆಯಾದರೂ, ಏಕದಿನ ಮತ್ತು ಟೆಸ್ಟ್ ಸ್ವರೂಪಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ್ದಾರೆ. 2022ರಲ್ಲಿ ಇದುವರೆಗೆ 9 ಟೆಸ್ಟ್‌ಗಳಲ್ಲಿ ಸ್ಟೀವ್ ಸ್ಮಿತ್ 62ರ ಸರಾಸರಿಯಲ್ಲಿ 749 ರನ್ ಗಳಿಸಿದ್ದಾರೆ ಮತ್ತು 2 ಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅತ್ಯುತ್ತಮ 200* ಮತ್ತು 4 ಅರ್ಧಶತಕಗಳು ದಾಖಲಾಗಿವೆ.
ಸ್ಟೀವ್ ಸ್ಮಿತ್ ಏಕದಿನ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು, 11 ಇನ್ನಿಂಗ್ಸ್‌ಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಒಂದು ಶತಕ ಸೇರಿದಂತೆ 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. 2022ರಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ 67ರ ಸರಾಸರಿಯಲ್ಲಿ 539 ರನ್ ಬಾರಿಸಿದ್ದಾರೆ.


Click it and Unblock the Notifications












