For Quick Alerts
ALLOW NOTIFICATIONS  
For Daily Alerts
 

ಇದೇ ಮೊದಲು! ಧೋನಿ ಐಸಿಸಿ ಶ್ರೇಷ್ಠ ತಂಡದಿಂದ ಹೊರಕ್ಕೆ!

By Mahesh

ಬೆಂಗಳೂರು, ಡಿ.02: ಸತತವಾಗಿ ಏಳು ವರ್ಷಗಳ ಕಾಲ ಐಸಿಸಿ ಏಕದಿನ ಕ್ರಿಕೆಟ್ ಶ್ರೇಷ್ಠದಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಈ ಬಾರಿ ಐಸಿಸಿ ಪ್ರಕಟಿಸಿರುವ 2015 ಶ್ರೇಷ್ಠ ತಂಡದಲ್ಲಿ ಕಾಣಿಸಿಕೊಂಡಿಲ್ಲ.

2014ರಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕ್ಯಾಪ್ಟನ್ ಕೂಲ್ ಅವರು ಈ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅವರು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶ್ರೇಷ್ಠ ತಂಡಗಳ ಪಟ್ಟಿಯಲ್ಲಿ ಭಾರತದ ಇಬ್ಬರು ಆಟಗಾರರು ಮಾತ್ರ ಆಯ್ಕೆಯಾಗಿದ್ದಾರೆ.[2015ನೇ ಸಾಲಿನ ಶ್ರೇಷ್ಠ ಕ್ರಿಕೆಟ್ ತಂಡ ಇಲ್ಲಿದೆ ನೋಡಿ]

For first time in 8 years, no MS Dhoni in ICC ODI Team of the Year

ಆರ್ ಅಶ್ವಿನ್ ಅವರು ಟೆಸ್ಟ್ ತಂಡದಲ್ಲಿ 12ನೇ ಆಟಗಾರರಾಗಿದ್ದರೆ, ಮೊಹಮ್ಮದ್ ಶಮಿ ಅವರು ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

50 ಓವರ್ ಗಳ ಮಾದರಿಯಲ್ಲಿ ಭಾರತದಿಂದ ಇನ್ನೂ ಹೆಚ್ಚಿನ ಆಟಗಾರರು ಆಯ್ಕೆಯಾಗುವ ನಿರೀಕ್ಷೆಯಿತ್ತು. ಕಳೆದ ಬಾರಿ 34 ವರ್ಷ ವಯಸ್ಸಿನ ಧೋನಿ ಅವರು 5 ಬಾರಿ ಸತತವಾಗಿ ನಾಯಕರಾಗಿದ್ದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಹಾಗೂ ಶಮಿ ಅವರು ಟೆಸ್ಟ್ ತಂಡದಲ್ಲಿದ್ದರು. ಸೆಪ್ಟೆಂಬರ್ 18, 2014ರಿಂದ ಸೆಪ್ಟೆಂಬರ್ 13, 2015 ಅವಧಿಯಲ್ಲಿ ನೀಡಿರುವ ಪ್ರದರ್ಶನವನ್ನು ಆಯ್ಕೆಗೆ ಪರಿಗಣಿಸಲಾಗಿದೆ.

ಆಯ್ಕೆ ಸಮಿತಿ:
ಐಸಿಸಿ ಕ್ರಿಕೆಟ್ ಸಮಿತಿಯ ಚೇರ್ಮನ್ ಅವರ ನೇತೃತ್ವದ ಸಮಿತಿಯಲ್ಲಿ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಕೂಡಾ ಸದಸ್ಯರಾಗಿದ್ದರು. ಉಳಿದಂತೆ ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಇಯಾನ್ ಬಿಷಪ್, ಇಂಗ್ಲೆಂಡಿನ ಮಾಜಿ ಆಟಗಾರ ಮಾರ್ಕ್ ಬುಚರ್, ಮಹಿಳಾ ಮಾಜಿ ಕ್ರಿಕೆಟರ್ ಬಿಲಿಂಡಾ ಕ್ಲಾರ್ಕ್, ದಿ ಹಿಂದೂ ಪತ್ರಿಕೆಯ ಜಿ ವಿಶ್ವನಾಥ್ ಅವರಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+