For Quick Alerts
ALLOW NOTIFICATIONS  
For Daily Alerts
 

143 ವರ್ಷಗಳಲ್ಲಿ ವೀಕ್ಷಕರಿಲ್ಲದೆ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು!

For the first time in its 143-year history Test cricket will have no spectators

ಲಂಡನ್, ಜುಲೈ 8: ಪ್ರೇಕ್ಷಕರಿಲ್ಲದೆ, ಪ್ರೇಕ್ಷಕರ ಸದ್ದುಗದ್ದಲವಿಲ್ಲದೆ ಕ್ರಿಕೆಟ್ ನಡೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ಕ್ರಿಕೆಟ್ ಮಾತ್ರವಲ್ಲ, ವೀಕ್ಷಕರಿಲ್ಲದ ಕ್ರೀಡಾಕೂಟಗಳೇ ಅರ್ಥಹೀನ ಅನ್ನಿಸುತ್ತವೆ. ಕ್ರೀಡಾಪಟುಗಳಿಗೆ ಉತ್ಸಾಹ ಬರುವುದೇ ವೀಕ್ಷಕರ ಉಪಸ್ಥಿತಿಯಿಂದ, ಅವರ ಚೀರಾಟ, ಕೇಕೆಯಿಂದ. ಆದರೆ ವೀಕ್ಷಕರಿಲ್ಲದೆ ಕ್ರೀಡಾಕೂಟಗಳನ್ನು ನಡೆಸಬೇಕಾದ ಅನಿವಾರ್ಯತೆಯನ್ನು ಕೊರೊನಾವೈರಸ್ ತಂದೊಡ್ಡಿದೆ (ಚಿತ್ರಕೃಪೆ: ಇಂಗ್ಲೆಂಡ್ ಕ್ರಿಕೆಟ್).

ಕೊರೊನಾ ವೈರಸ್ ಭೀತಿ ಶುರುವಾದ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿ ಜುಲೈ 8ರ ಬುಧವಾರ ನಡೆಯುತ್ತಿರುವ ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಗುರುತಿಸಿಕೊಳ್ಳುತ್ತಿದೆ. ಆದರೆ ಈ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಲಿದೆ.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46753

ಟೆಸ್ಟ್ ಕ್ರಿಕೆಟ್ ಶುರುವಾಗಿ ಸುಮಾರು 143 ವರ್ಷಗಳು ಕಳೆದಿವೆ. ಆದರೆ ಇಡೀ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ವೀಕ್ಷಕರಿಲ್ಲದೆ ಪಂದ್ಯ ನಡೆಯುತ್ತಿರುವುದು ಇದೇ ಮೊದಲ ಸಾರಿ. ಮೈದಾನ ಪ್ರವೇಶಿಸುವಾಗ ಈ ಬಾರಿ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳೇ ಇಲ್ಲದ ವಿಚಿತ್ರ ಪರಿಸ್ಥಿತಿ ಕಾಣಸಿಗುತ್ತಿದೆ.

ಕೊರೊನಾವೈರಸ್ ಕಾರಣ ಈ ಪಂದ್ಯದಲ್ಲಿ ಅಥವಾ ಈ ಸರಣಿಯಲ್ಲಿ ಒಂದಿಷ್ಟು ಬದಲಾವಣೆಗಳು ಕಾಣಸಿಗಲಿವೆ. ಮುಖ್ಯವಾಗಿ ಆಟಗಾರರು ಚೆಂಡಿಗೆ ಎಂಜಲು ಸವರುವಂತಿಲ್ಲ. ಆಟಗಾರರು ಚೆಂಡಿಗೆ ಎಂಜಲು ಸವರಿದ್ದು ಕಂಡುಬಂದರೆ ಇನ್ನಿಂಗ್ಸ್‌ನಲ್ಲಿ 2 ಬಾರಿ ಅಂಪೈರ್ ಎಚ್ಚರಿಸುತ್ತಾರೆ. ಮತ್ತೂ ಆಟಗಾರರು ಎಂಜಲು ಮೆತ್ತಿದರೆ ಪೆನಾಲ್ಟಿಯಾಗಿ ಬ್ಯಾಟಿಂಗ್ ಮಾಡುವ ತಂಡಕ್ಕೆ 5 ರನ್ ನೀಡಲಾಗುತ್ತದೆ.

Story first published: Wednesday, July 8, 2020, 17:56 [IST]
Other articles published on Jul 8, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+