ಲುಂಗಿ ಎನ್‌ಗಿಡಿಗೆ ಬದಲಿ ಆಟಗಾರನ ಘೋಷಣೆ ಮಾಡಿದ RCB
ಐಪಿಎಲ್ ಪಂದ್ಯಗಳು ಒಂದು ವಾರ ಸ್ಥಗಿತಗೊಂಡು ಪುನರಾರಂಭವಾಗಿದ್ದರಿಂದ ಅಂತಾರಾಷ್ಟ್ರೀಯ ಆಟಗಾರರಿಗೆ ಇದರಿಂದ ತೊಂದರೆ ಆಗುತ್ತಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡುವ ತಯಾರಿ ನಡೆಸಬೇಕಿದೆ. ಹೀಗಾಗಿ ಈ ಆಟಗಾರರು ಪ್ಲೇ ಆಫ್‌ಗೂ ಮುನ್ನ ತಂಡದಿಂದ ಹಿಂದೆ ಸರಿಯಲಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಸೀಮಿತ ಓವರ್‌ಗಳ ಸರಣಿ ನಡೆಯಲಿದ್ದು, ಈ ಆಟಗಾರರು ಸಹ ಮಹತ್ವದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ಐಪಿಎಲ್‌ನಲ್ಲಿ ಈ ನಾಲ್ಕು ತಂಡದ ಆಟಗಾರರು ಇದ್ದಾರೆ. ಹೀಗಾಗಿ ಬಿಸಿಸಿಐ ಈ ನಾಲ್ಕು ತಂಡದ ಆಟಗಾರರು ತಮ್ಮಲ್ಲಿ ಇದ್ದಲ್ಲಿ ಅವರ ರಿಪ್ಲೇಸ್ ಮೆಂಟ್ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಇದರ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಬದಲಿಗೆ ಬೇರೆ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ.

ದಕ್ಷಿಣ ಆಫ್ರಿಕಾ ಆಟಗಾರರು ಪ್ಲೇ ಆಫ್‌ಗೂ ಮುನ್ನ ತಮ್ಮ ತಮ್ಮ ಫ್ರಾಂಚೈಸಿ ತೊರೆಯಲಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ಮೇ 27ರಂದು ಎಲ್ಲರೂ ಸೇರುವಂತೆ ಸೂಚಿಸಿದೆ. ಇನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಲುಂಗಿ ಎನ್‌ಗಿಡಿ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಇವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಇವರು ಲೀಗ್ ಹಂತದ ಪಂದ್ಯಗಳು ಮುಗಿಯುತ್ತಿದ್ದಂತೆ ತವರಿಗೆ ಹಾರಲಿದ್ದಾರೆ. ಇವರು ಒಂದು ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದರು. ಅಲ್ಲದೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಮೂರು ವಿಕೆಟ್ ಕಬಳಿಸಿದ್ದರು. ಆರ್‌ಸಿಬಿ ಇವರ ಬದಲಿಗೆ ಬೇರೆ ಆಟಗಾರ ಘೋಷಣೆ ಮಾಡಿದೆ.
ಲುಂಗಿ ಬದಲಿಗೆ ಯಾರು?
ಆರ್‌ಸಿಬಿ ಲುಂಗಿ ಎನ್‌ಗಿಡಿ ಬದಲಿಗೆ ಜಿಂಬಾಬ್ವೆ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇವರಿಗೆ ಆರ್‌ಸಿಬಿ 75 ಲಕ್ಷ ರೂ. ನೀಡಿದೆ. ಬ್ಲೆಸ್ಸಿಂಗ್ ಮುಜರಬಾನಿ ಮೇ 26ರ ಬಳಿಕ ಆರ್‌ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಸಹ ರೋವ್‌ಮನ್ ಪೊವೆಲ್ ಅವರ ಬದಲಿಗೆ ಬೇರೆ ಆಟಗಾರ ಘೋಷಣೆ ಮಾಡಿದೆ. ಪೊವೆಲ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇವರ ಬದಲಿಗೆ ಮಧ್ಯಪ್ರದೇಶದ ಶಿವಂ ಶುಕ್ಲಾ ಅವರನ್ನು 30 ಲಕ್ಷ ರೂ.ಗೆ ಕೋಲ್ಕತ್ತಾ ಖರೀದಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅಮೋಘ ಜಯ ಸಾಧಿಸಿತು. ಈ ಮೂಲಕ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇ ಆಫ್‌ಗೆ ಪ್ರವೇಶ ಪಡೆದಿವೆ. ಈ ತಂಡಗಳಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡದ ಆಟಗಾರರು ಇದ್ದಾರೆ. ಇವರ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳುವಂತೆ ಬಿಸಿಸಿಐ ಸೂಚಿಸಿದೆ. ಇನ್ನು ಉಳಿದ ಒಂದು ಸ್ಥಾನಕ್ಕಾಗಿ ನಾಲ್ಕು ತಂಡಗಳು ಫೈಟ್ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications