For Quick Alerts
ALLOW NOTIFICATIONS  
For Daily Alerts
 

ಅಫ್ಘಾನ್ ಪುರುಷರ ತಂಡ ದಂಡಿಸದಂತೆ ಮಹಿಳಾ ಕ್ರಿಕೆಟ್ ಮುಖ್ಯಸ್ಥೆ ಮನವಿ

Former Afghanistan Women’s Cricket Chief Tuba Sangar urges World Cricket For Support

ಕಾಬೂಲ್: ಸದಾ ಯುದ್ಧ-ಗಲಾಟೆಯಲ್ಲೇ ಮುಳುಗಿರುತ್ತಿದ್ದ ಅಫ್ಘಾನಿಸ್ತಾನ, ಪಾಕಿಸ್ತಾನದಂತಹ ದೇಶವನ್ನು ಬದಲಾಯಿಸುವಲ್ಲಿ ಕ್ರಿಕೆಟ್‌ನ ಪಾತ್ರ ಮಹತ್ವದ್ದಾಗಿದೆ. ಅಬಾಲ ವೃದ್ಧರೆಲ್ಲರನ್ನೂ ರಂಜಿಸುತ್ತಿರುವ ಕ್ರಿಕೆಟ್ ಈಗ ಅಫ್ಘಾನಿಸ್ತಾನದ ಪ್ರಮುಖ ಕ್ರೀಡೆಯಾಗಿದೆ. ಆದರೆ ಅಫ್ಘಾನ್ ಆಡಳಿತವನ್ನು ತಾಲಿಬಾನ್‌ಗಳು ಕೈಗೆತ್ತಿಕೊಂಡಂದಿನಿಂದ ಅಲ್ಲಿನ ಕ್ರಿಕೆಟ್‌ಗೆ ಕೊಂಚ ಹಿನ್ನಡೆಯಾಗಿದೆ.

ಅಫ್ಘಾನಿಸ್ತಾನದ ಆಡಳಿತವನ್ನು ಕೈಗೆತ್ತಿಕೊಂಡ ಬಳಿಕ ತಾಲಿಬಾನ್, ಅಲ್ಲಿ ಕಠಿಣ ನಿಯಮಗಳನ್ನು ಘೋಷಿಸಿದೆ. ಮುಖ್ಯವಾಗಿ ಮಹಿಳೆಯರಿಗೆ ಅಲ್ಲಿ ಸ್ವಾತಂತ್ರ್ಯವೇ ಇಲ್ಲವಾಗಿದೆ. ಅಧಿಕಾರಕ್ಕೇರಿದ ಬಳಿಕ ತಾಲಿಬಾನ್‌ ಮಹಿಳಾ ಕ್ರೀಡಾ ಚಟುವಟಿಕೆಗಳನ್ನು ನಿಷೇಧಿಸುವುದಾಗಿ ಹೇಳಿತ್ತು. ತಾಲಿಬಾನ್‌ನ ಈ ಕ್ರಮ ಅಲ್ಲಿನ ಪುರುಷರ ಕ್ರಿಕೆಟ್‌ಗೂ ಅಡ್ಡಿಯುಂಟು ಮಾಡುತ್ತಿದೆ.

ಪುರುಷರ ಕ್ರಿಕೆಟ್‌ಗೆ ತಾಲಿಬಾನ್ ಅನುಮತಿ ನೀಡಿತ್ತಾದರೂ ಮಹಿಳಾ ಕ್ರಿಕೆಟ್‌ಗೆ ನಿಷೇಧ ಹೇರಿತ್ತು. ತಾಲಿಬಾನ್ ಲಿಂಗ ತಾರತಮ್ಯ ನೀತಿಗೆ ತಿರುಗೇಟು ನೀಡಿದ್ದ ಕ್ರಿಕೆಟ್ ಆಸ್ಟ್ರೇಲಿಯಾ, ಮಹಿಳಾ ಕ್ರಿಕೆಟ್‌ ನಿಷೇಧಿಸುವುದಾದರೆ ಪುರುಷರ ಕ್ರಿಕೆಟ್ ತಂಡದೊಂದಿಗಿನ ನಮ್ಮ ಉದ್ದೇಶಿತ ಟೆಸ್ಟ್ ಕ್ರಿಕೆಟ್ ಪಂದ್ಯ ರದ್ದಾಗಲಿದೆ ಎಂದಿತ್ತು.

ಕ್ರಿಕೆಟ್ ಆಸ್ಟ್ರೇಲಿಯಾದ ಹೇಳಿಕೆಗೆ ಅಫ್ಘಾನ್ ಮಹಿಳಾ ಕ್ರಿಕೆಟ್ ಮುಖ್ಯಸ್ಥೆ ತುಬಾ ಸಂಗಾರ್ ಪ್ರತಿಕ್ರಿಯಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕ್ರಿಕೆಟ್ ಬೋರ್ಡ್‌ಗಳು ಮತ್ತು ಕ್ರಿಕೆಟರ್‌ಗಳು ಅಫ್ಘಾನ್ ಪುರುಷರ ತಂಡವನ್ನು ಬೆಂಬಲಿಸಬೇಕು. ತಾಲಿಬಾನ್‌ಗಳು ಮಹಿಳಾ ಕ್ರಿಕೆಟ್‌ ನಿಷೇಧಿಸಿದರೂ ಪುರುಷರ ಕ್ರಿಕೆಟ್‌ ತಂಡವನ್ನು ದಂಡಿಸಬಾರದು ಎಂದು ಸಂಗಾರ್ ಹೇಳಿದ್ದಾರೆ.

"ಪುರುಷರ ತಂಡವನ್ನು ಬಹಿಷ್ಕರಿಸುವ ಆಲೋಚನೆ ಒಳ್ಳೆಯದಲ್ಲ. ಅವರು ಅಫ್ಘಾನಿಸ್ತಾನ ತಂಡಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅಫ್ಘಾನಿಸ್ತಾನವನ್ನು ವಿಶ್ವಕ್ಕೆ ಸಕರಾತ್ಮಕ ರೀತಿಯಲ್ಲಿ ಪರಿಚಯಿಸಿದ್ದರಲ್ಲಿ ಪುರುಷರ ಕ್ರಿಕೆಟರ್‌ಗಳ ಪಾತ್ರ ಬಹಳವಿದೆ. ಪುರುಷರ ತಂಡಕ್ಕೆ ಅವಕಾಶ ತಪ್ಪಿದರೆ ಎಲ್ಲಾ ರೀತಿಯಲ್ಲೂ ಅಫ್ಘಾನ್‌ನಲ್ಲಿ ಕ್ರಿಕೆಟ್ ಅಳಿಸಿ ಹೋಗುತ್ತದೆ," ಎಂದು 28ರ ಹರೆಯದ ತುಬಾ ಸಂಗಾರ್ ಹೇಳಿದ್ದಾರೆ. ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡ ಕೆಲವೇ ಸಮಯದಲ್ಲಿ ಸಂಗಾರ್ ಅಫ್ಘಾನಿಸ್ತಾನ ತ್ಯಜಿಸಿ ಕೆನಡಾಕ್ಕೆ ಹೋಗಿದ್ದರು.

Story first published: Wednesday, September 15, 2021, 17:31 [IST]
Other articles published on Sep 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+