ಯಾವುದೇ ತಂಡಕ್ಕಾದರೂ ಆ ಒಬ್ಬ ಭಾರತೀಯ ಆಟಗಾರನನ್ನು ಆಯ್ಕೆ ಮಾಡುತ್ತೇನೆ ಎಂದ ಆಸಿಸ್ ಸ್ಟಾರ್

ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಆಡುವ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ದೊರೆಯಲಿದ್ದು ಯಾರು ಬೆಂಚ್ ಕಾಯಬೇಕಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟರ್ ಆಗಿ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಮಧ್ಯೆ ಸಾಕಷ್ಟು ಪೈಪೋಟಿಯಿದ್ದು ಇವರಲ್ಲಿ ಯಾರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಬೇಕು ಎಂಬುದು ಮ್ಯಾನೇಜ್‌ಮೆಂಟ್‌ಗೂ ತಲೆನೋವಾಗಿದೆ.
ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಯುವ ಆಟಗಾರ ರಿಷಭ್ ಪಂತ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಿಷಭ್ ಪಂತ್ ಸಾಮರ್ಥ್ಯದ ಬಗ್ಗೆ ವಿಶೇಷ ಮಾತುಗಳನ್ನಾಡಿರುವ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ತಾನು ಆಯ್ಕೆಗಾರನಾಗಿದ್ದರೆ ಯಾವುದೇ ತಂಡಕ್ಕಾದರೂ ರಿಷಭ್ ಪಂತ್‌ನಂತಾ ಆಟಗಾರನನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ.

ಆಸಿಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೆಂಚ್ ಕಾದ ಪಂತ್
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ರಿಷಭ್ ಪಂತ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗಿದ್ದರು. ವಿಕೆಟ್ ಕೀಪರ್ ಬ್ಯಾಟರ್ ಆಗಿ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿದ್ದ ಕಾರಣ ಪಂತ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೊರತಾಗಿಯೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಕಾರಣದಿಂದಾಗಿ ಭಾರತ ಸೋಲು ಅನುಭವಿಸಿತ್ತು.

ನಾನು ಆಯ್ಕೆಗಾರನಾಗಿದ್ದರೆ ಎಲ್ಲಾ ತಂಡಕ್ಕೂ ಪಂತ್ ಆಯ್ಕೆ
ಇನ್ನು ಈ ಸಂದರ್ಭದಲ್ಲಿ ಮ್ಯಾಥ್ಯೂ ಹೇಡನ್ ಮಾತನಾಡಿ ತಾನೇನಾದರೂ ಆಯ್ಕೆಗಾರನಾಗಿದ್ದರೆ ಎಲ್ಲಾ ತಂಡಕ್ಕೂ ರಿಷಭ್ ಅವರನ್ನು ಆಯ್ಕೆ ಮಾಡಿರುತ್ತಿದ್ದೆ. ಆತ ಭವಿಷ್ಯದ ಆಟಗಾರ. ಆತನಿಗೆ ಬೆಂಬಲವನ್ನು ನೀಡಬೇಕಿದ್ದು ಸಮಯಾವಕಾಶ ನೀಡಬೇಕಿದೆ. ಕಳಪೆ ಫಾರ್ಮ್ ಅಥವಾ ರನ್‌ಗಳಿಸಲು ಸಾಧ್ಯವಾಗದಿದ್ದರೂ ಆತ ತಂಡದಲ್ಲಿ ಇರಬೇಕು ಎಂಬುದು ನನ್ನ ಅಭಿಪ್ರಾಯ. ಎಲ್ಲಾ ರೀತಿಯಿಂದ ನೋಡದರೂ ಆತನೋರ್ವ ಅದ್ಭುತವಾದ ಆಟಗಾರನಾಗಿದ್ದಾರೆ" ಎಂದು ಮ್ಯಾಥ್ಯೂ ಹೇಡನ್ ಹೇಳಿಕೆಯನ್ನು ನೀಡಿದ್ದಾರೆ.
IND vs ENG: ಮಿಥಾಲಿ ರಾಜ್ ದಾಖಲೆ ಮುರಿದು ವಿಶ್ವದಲ್ಲಿ 3ನೇ ಸ್ಥಾನ ಪಡೆದ ಸ್ಮೃತಿ ಮಂಧಾನ

ಚುಟುಕು ಮಾದರಿಯಲ್ಲಿ ಪಂತ್ ಪದೇ ಪದೇ ವಿಫಲ
ರಿಷಭ್ ಪಂತ್ ಟೆಸ್ಟ್ ತಂಡದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಸ್ಮರಣೀಯ ಇನ್ನಿಂಗ್ಸ್ ನೀಡಿದ್ದಾರೆ. ಆದರೆ ವೈಟ್‌ಬಾಲ್ ಮಾದರಿ ವಿಚಾರಕ್ಕೆ ಬಂದರೆ ಪಂತ್ ತನ್ನ ಸಾಮರ್ಥ್ಯವನ್ನು ಈವರೆಗೆ ಪ್ರದರ್ಶಿಸಲಿ ಸಾಧ್ಯವಾಗಿಲ್ಲ. ಅದರಲ್ಲೂ ಟಿ20ಯಲ್ಲಿ ಪಂತ್ ಸಾಧನೆ ತೀರಾ ಕಳಪೆಯಿದೆ. ಹೀಗಾಗಿ ಚುಟುಕು ವಿಶ್ವಕಪ್‌ಗೆ ಪಂತ್ ಬದಲಿಗೆ ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್‌ಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಆಯ್ಕೆಗಾರರು ಪಂತ್ ಮೇಲೆಯೇ ಹೆಚ್ಚಿನ ವಿಶ್ವಾಸವನ್ನು ಇರಿಸಿದ್ದು ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿದ್ದಾರೆ.

ಆಸಿಸ್ ವಿರುದ್ಧದ ಎರಡನೇ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜು
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದೆ. ಎರಡನೇ ಪಂದ್ಯ ಶುಕ್ರವಾರ ನಡೆಯಲಿದ್ದು ನಾಗ್ಪುರದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿರುವ ಕಾರಣ ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಮಾತ್ರ ಸರಣಿಯಲ್ಲಿ ಜೀವಂತವಾಗುಳಿಯಲು ಸಾಧ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications