IND vs ENG: ಮಿಥಾಲಿ ರಾಜ್ ದಾಖಲೆ ಮುರಿದು ವಿಶ್ವದಲ್ಲಿ 3ನೇ ಸ್ಥಾನ ಪಡೆದ ಸ್ಮೃತಿ ಮಂಧಾನ

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರ ಮುಡಿಗೆ ಮತ್ತೊಂದು ಗರಿ ಮೂಡಿದೆ. ಎಡಗೈ ಸ್ಟೈಲಿಶ್ ಆರಂಭಿಕ ಬ್ಯಾಟರ್ ಬುಧವಾರ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಏಕದಿನ ಕ್ರಿಕೆಟ್‌ನಲ್ಲಿ 3000 ರನ್‌ಗಳ ಹೆಗ್ಗುರುತನ್ನು ತಲುಪಿದ ಮೂರನೇ ಭಾರತೀಯ ಮಹಿಳಾ ಕ್ರಿಕೆಟರ್ ಆಗಿದ್ದಾರೆ.

ಏಕದಿನ ಸರಣಿಯ ಸರಣಿಯ ಮೊದಲ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ 91 ರನ್ ಗಳಿಸಿದ್ದ ಸ್ಮೃತಿ ಮಂಧಾನ ಅವರು ಮಾಜಿ ಭಾರತೀಯ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಪ್ರಸ್ತುತ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ರನ್ನು ಅನುಕರಿಸಿದರು. ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಎರಡನೇ ಪಂದ್ಯದಲ್ಲಿ 51 ಎಸೆತಗಳಲ್ಲಿ 40 ರನ್ ಗಳಿಸಿದರು.

IND vs AUS: ತಂಡಕ್ಕೆ ಈ ಇಬ್ಬರು 'ಫಿನಿಶರ್'ಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದ ಬಿಸಿಸಿಐ ಮಾಜಿ ಆಯ್ಕೆಗಾರIND vs AUS: ತಂಡಕ್ಕೆ ಈ ಇಬ್ಬರು 'ಫಿನಿಶರ್'ಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದ ಬಿಸಿಸಿಐ ಮಾಜಿ ಆಯ್ಕೆಗಾರ

ಅವರು ತಮ್ಮ 76ನೇ ಇನ್ನಿಂಗ್ಸ್‌ನಲ್ಲಿ ಹೆಗ್ಗುರುತನ್ನು ತಲುಪಿದರು ಮತ್ತು ಈ ಮೂಲಕ ಈ 3000 ರನ್‌ಗಳ ಹೆಗ್ಗುರುತನ್ನು ಅತ್ಯಂತ ವೇಗವಾಗಿ ತಲುಪಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಆದರು. ಮಾಜಿ ನಾಯಕಿ ಮಿಥಾಲಿ ರಾಜ್ ಅವರ 88 ಇನ್ನಿಂಗ್ಸ್‌ಗಳ ದಾಖಲೆಯನ್ನು ಉತ್ತಮ ಅಂತರದಿಂದ ಹಿಂದಿಕ್ಕಿದರು.

ಆಸ್ಟ್ರೇಲಿಯಾದ ಇಬ್ಬರು ದಿಗ್ಗಜರಾದ ಬೆಲಿಂಡಾ ಕ್ಲಾರ್ಕ್ (62) ಮತ್ತು ಮೆಗ್ ಲ್ಯಾನಿಂಗ್ (64) ನಂತರ ಸ್ಥಾನ ಸ್ಮೃತಿ ಮಂಧಾನ ಈಗ ಒಟ್ಟಾರೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲದೇ 3000 ರನ್‌ಗಳ ಹೆಗ್ಗುರುತನ್ನು ಅತ್ಯಂತ ವೇಗವಾಗಿ ತಲುಪಿದ ಮೂರನೇ ಭಾರತೀಯ ಕ್ರಿಕೆಟರ್ ಆಗಿದ್ದು, ಇದಕ್ಕೂ ಮೊದಲು ಪುರುಷ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಇದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮಿಥಾಲಿ ರಾಜ್ ಮತ್ತು ಹರ್ಮನ್‌ಪ್ರೀತ್‌ರಂತಹ ದಿಗ್ಗಜರನ್ನು ಹಿಂದಿಕ್ಕಿ ಸ್ಮೃತಿ ಮಂಧಾನಾ ಎಲ್ಲಾ ಸ್ವರೂಪಗಳಲ್ಲಿ ಭಾರತದ ಅತ್ಯಂತ ಸಮೃದ್ಧ ಬ್ಯಾಟರ್ ಆಗಿದ್ದಾರೆ.

ಈ ಆಟಗಾರ ಭಾರತಕ್ಕಾಗಿ ಎಲ್ಲಾ 3 ಸ್ವರೂಪಗಳಲ್ಲಿ ಆಡುವುದನ್ನು ನೋಡುತ್ತೇನೆ; ಮಾಜಿ ಆಯ್ಕೆಗಾರಈ ಆಟಗಾರ ಭಾರತಕ್ಕಾಗಿ ಎಲ್ಲಾ 3 ಸ್ವರೂಪಗಳಲ್ಲಿ ಆಡುವುದನ್ನು ನೋಡುತ್ತೇನೆ; ಮಾಜಿ ಆಯ್ಕೆಗಾರ

ಇನ್ನು ಯುವ ಬ್ಯಾಟರ್ ಶಫಾಲಿ ವರ್ಮಾ ಅವರೊಂದಿಗಿನ ಅವರ ಆರಂಭಿಕ ಜೊತೆಯಾಟವು ಭಾರತವನ್ನು ದೊಡ್ಡ ಸ್ಕೋರ್‌ಗಳಿಗೆ ಮುನ್ನಡೆಸಿದೆ. ಸ್ಮೃತಿ ಮಂಧಾನಾ ಅವರು 2017ರ ಐಸಿಸಿ ಮಹಿಳಾ ವಿಶ್ವಕಪ್, 2020ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಮತ್ತು 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಶತಕ, ಭಾರತ ಬೃಹತ್ ಮೊತ್ತ
ಸೆಪ್ಟೆಂಬರ್ 21 ಬುಧವಾರದಂದು ಭಾರತ ಮಹಿಳಾ ಕ್ರಿಕೆಟ್ ತಂಡವು ಏಕದಿನ ಪಂದ್ಯಗಳಲ್ಲಿ ತಮ್ಮ ಎರಡನೇ ಅತ್ಯಧಿಕ ಸ್ಕೋರ್ ದಾಖಲಿಸಿದರು. ಕ್ಯಾಂಟರ್ಬರಿಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ವುಮೆನ್ ಇನ್ ಬ್ಲೂ 5 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿತು.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಬುಧವಾರ, ಸೆಪ್ಟೆಂಬರ್ 21ರಂದು ತನ್ನ 123ನೇ ಪಂದ್ಯದಲ್ಲಿ ಐದನೇ ಏಕದಿನ ಶತಕವನ್ನು ಬಾರಿಸಿದರು. ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳೆಯರ ವಿರುದ್ಧ ಅನುಭವಿ ಬ್ಯಾಟರ್ 111 ಎಸೆತಗಳಲ್ಲಿ 18 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 143 ರನ್ ಗಳಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 21, 2022, 22:52 [IST]
Other articles published on Sep 21, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X