ಬ್ರೇಕಿಂಗ್ ನ್ಯೂಸ್: ಕ್ರಿಕೆಟ್ ದಿಗ್ಗಜ ಆಸ್ಟ್ರೇಲಿಯಾದ ಶೇನ್ ವಾರ್ನ್ ಇನ್ನಿಲ್ಲ!

ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಕ್ರಿಕೆಟಿಗರ ಪೈಕಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಕೂಡ ಒಬ್ಬರು. 52 ವರ್ಷದ ಶೇನ್ ವಾರ್ನ್ ಇದೀಗ ನಿಧನ ಹೊಂದಿದ್ದು ಇಹಲೋಕವನ್ನು ತ್ಯಜಿಸಿದ್ದಾರೆ. ಹೌದು, ಇಂದು ( ಮಾರ್ಚ್ 4 ) ಥೈಲ್ಯಾಂಡ್‌ನ ಖೋ ಸಾಮುಯಿಯಲ್ಲಿನ ತಮ್ಮ ಬಂಗಲೆಯಲ್ಲಿ ಶೇನ್ ವಾರ್ನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಶೇನ್ ವಾರ್ನ್ ತಮ್ಮ ಬಂಗಲೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದನ್ನು ಕಂಡ ಕುಟುಂಬಸ್ಥರು ತಕ್ಷಣವೇ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಶೇನ್ ವಾರ್ನ್ ಅಸುನೀಗಿದ್ದು, ಕ್ರಿಕೆಟ್ ದಿಗ್ಗಜನ ಈ ದಿಢೀರ್ ಮರಣ ಇದೀಗ ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿದೆ.
ಸದ್ಯ ಶೇನ್ ವಾರ್ನ್ ತಮ್ಮ ಬಂಗಲೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಸಿಕ್ಕಿದ ನಂತರ ವೈದ್ಯಕೀಯ ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ಕೂಡ ಶೇನ್ ವಾರ್ನ್ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಶೇನ್ ವಾರ್ನ್ ಮ್ಯಾನೇಜ್‌ಮೆಂಟ್ ವರದಿಯನ್ನು ನೀಡಿದೆ. ಸದ್ಯ ಶೇನ್ ವಾರ್ನ್ ಕುಟುಂಬ ಪ್ರೈವಸಿ ಬಯಸಿದ್ದು, ಆದಷ್ಟು ಬೇಗ ಈ ಕುರಿತಾದ ಮುಂದಿನ ಮಾಹಿತಿಗಳನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶೇನ್ ವಾರ್ನ್ ನಿಧನದ ಸುದ್ದಿ ತಿಳಿದ ಪ್ರತಿಯೊಬ್ಬ ಕ್ರಿಕೆಟಿಗ ಹಾಗೂ ಕ್ರಿಕೆಟ್ ಅಭಿಮಾನಿಯೂ ಕೂಡ ತೀವ್ರ ಆತಂಕಕ್ಕೆ ಒಳಗಾಗಿದ್ದು, ಶೇನ್ ವಾರ್ನ್ ಹಠಾತ್ ನಿಧನದ ಕುರಿತು ತೀವ್ರ ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಕಂಬನಿ ಮಿಡಿದ ಕ್ರಿಕೆಟಿಗರು
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ದಿಡೀರ್ ನಿಧನದ ಸುದ್ದಿಯನ್ನು ಕೇಳಿದ ಶೇನ್ ವಾರ್ನ್ ಸಮಕಾಲೀನ ಕ್ರಿಕೆಟಿಗರು ಹಾಗೂ ಯುವ ಕ್ರಿಕೆಟಿಗರು ನಂಬಲಾಗುತ್ತಿಲ್ಲ ಎಂಬ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವಿರೇಂದ್ರ ಸೆಹ್ವಾಗ್, ಬಾಬರ್ ಅಜಮ್ ಸೇರಿದಂತೆ ಹಲವಾರು ಹಿರಿಯ ಹಾಗೂ ಯುವ ಕ್ರಿಕೆಟಿಗರು ದಿಗ್ಗಜನ ಸಾವಿನ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹೃದಯಾಘಾತದ ಅನುಮಾನ
ಇನ್ನು ಶೇನ್ ವಾರ್ನ್ ಸಾವಿಗೆ ನಿಖರವಾದ ಕಾರಣ ಏನೆಂಬುದು ಇನ್ನೂ ಬಹಿರಂಗವಾಗದೇ ಇದ್ದು, ಕುಟುಂಬಸ್ಥರು ಕೆಲ ಸಮಯದ ನಂತರ ಸಂಪೂರ್ಣ ಮಾಹಿತಿಯನ್ನು ಮಾಧ್ಯಮಕ್ಕೆ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ತಮ್ಮ ಬಂಗಲೆಯಲ್ಲಿಯೇ ಕುಸಿದುಬಿದ್ದ ಶೇನ್ ವಾರ್ನ್ ಸಾವಿಗೆ ಹೃದಯಾಘಾತವೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಅಸಲಿ ಕಾರಣವೇನೆಂಬುದು ಕೊಂಚ ಸಮಯದಲ್ಲಿಯೇ ಬಹಿರಂಗವಾಗಲಿದೆ.

ಅತಿ ಹೆಚ್ಚು ಟೆಸ್ಟ್ ವಿಕೆಟ್ ಗಳಿಸಿದ ಆಟಗಾರರಲ್ಲಿ ಶೇನ್ ವಾರ್ನ್ ದ್ವಿತೀಯ
ದಿಢೀರ್ ನಿಧನಕ್ಕೆ ಒಳಗಾಗಿರುವ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳನ್ನಾಡಿದ್ದು, 273 ಇನ್ನಿಂಗ್ಸ್‌ಗಳ ಪೈಕಿ 708 ವಿಕೆಟ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗೆ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿರುವ ಶೇನ್ ವಾರ್ನ್ ಇನ್ನೂ ಹತ್ತು ಹಲವಾರು ದಾಖಲೆಗಳನ್ನು ನಿರ್ಮಿಸಿ ಕ್ರಿಕೆಟರ್ ಆಗಬೇಕು ಎಂದು ಕನಸನ್ನು ಹೊತ್ತಿಕೊಂಡಿರುವ ಹಲವಾರು ಯುವ ಪ್ರತಿಭೆಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications