ಸಚಿನ್ ದಾಖಲೆ ಸುಲಭವಾಗಿ ಮುರಿಯಬಹುದು: ಜೋ ರೂಟ್ ಮೈಲಿಗಲ್ಲಿನ ಬಳಿಕ ಮಾರ್ಕ್ ಟೇಲರ್ ಹೇಳಿಕೆ

ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದಾರೆ. ಈ ಮೂಲಕ ತಂಡದ ಗೆಲುವಿಗೆ ಕಾರಣವಾದ ಜೋ ರೂಟ್ ಐತಿಹಾಸಿಕ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲನ್ನು ದಾಟುವಲ್ಲಿ ಜೋ ರೂಟ್ ಯಶಸ್ವಿಯಾಗಿದ್ದಾರೆ. ರೂಟ್ ಈ ಮಹತ್ವದ ಮೈಲಿಗಲ್ಲನ್ನು ದಾಟಿದ ಬಳಿಕ ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಯಲ್ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮಾರ್ಕ್ ಟೇಲರ್ ಜೋ ರೂಟ್ ಬಗ್ಗೆ ಮಾತನಾಡುತ್ತಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆಯಿರುವ ಸಚಿನ್ ತೆಂಡೂಲ್ಕರ್ ಸಾಧನೆಯನ್ನು ಜೋ ರೂಟ್ ಹಿಂದಿಕ್ಕಬಹುದು ಎಂದಿದ್ದಾರೆ. ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 15921 ರನ್ ಗಳಿಸಿದ್ದಾರೆ. ಈಗ ರನ್‌ಗಳಿಸುವ ರೀತಿಯಲ್ಲಿಯೇ ಮುಂದುವರಿದರೆ ಜೋ ರೂಟ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸುಲಭವಾಗಿ ಹಿಂದಿಕ್ಕಬಹುದು ಎಂದಿದ್ದಾರೆ.

ಇಂಗ್ಲೆಂಡ್‌ನ 2ನೇ ಆಟಗಾರ
ಜೋ ರೂಟ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 26ನೇ ಶತಕವನ್ನು ಪೂರೈಸಿದ್ದಾರೆ. ಈ ಶತಕದ ಸಹಾಯದಿಂದ ಲಾರ್ಡ್ಸ್ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಇಂಗ್ಲೆಂಡ್ ಗೆದ್ದುಕೊಂಡಿದ್ದು ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು 10000 ರನ್‌ಗಳ ಗಡಿಯನ್ನು ದಾಟಿದ ಇಂಗ್ಲೆಂಡ್‌ನ ಕೇವಲ ಎರಡನೇ ಆಟಗಾರ ಎನಿಸಿದ್ದಾರೆ ಜೋ ರೂಟ್.

ಸುಲಭವಾಗಿ ಸಚಿನ್ ದಾಖಲೆ ಹಿಂದಿಕ್ಕಬಹುದು
"ಜೋ ರೂಟ್‌ಗೆ ಇನ್ನೂ ಕನಿಷ್ಠ ಐದು ವರ್ಷಗಳ ಕಾಲ ಟೆಸ್ಟ್ ಆಡುವ ಅವಕಾಶವಿದೆ. ಹಾಗಾಗಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸುಲಭವಾಗಿ ಅವರು ಮುರಿಯಬಹುದು. ಕಳೆದ ಎರಡು ವರ್ಷಗಳಲ್ಲಿ ರೂಟ್ ಅವರು ಹಿಂದೆಂದಿಗಿಂತಲೂ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅತ್ಯುನ್ನತ ಫಾರ್ಮ್‌ನಲ್ಲಿ ಅವರಿದ್ದಾರೆ. ತಮ್ಮ ಫಿಟ್‌ನೆಸ್ ಉಳಿಸಿಕೊಂಡರೆ ಅವರು 15,000 ರನ್‌ಗಳನ್ನು ಸುಲಭವಾಗಿ ಗಳಿಸಬಹುದು" ಎಂದಿದ್ದಾರೆ ಆಸಿಸ್ ತಂಡದ ಮಾಜಿ ನಾಯಕ ಮಾರ್ಜ್ ಟ್ರೈಲರ್.

ಅದ್ಭುತ ಫಾರ್ಮ್‌ನಲ್ಲಿ ರೂಟ್
ಜೋ ರೂಟ್ 2021ರಲ್ಲಿ ಅದ್ಭುತ ಟೆಸ್ಟ್ ಪ್ರದರ್ಶನ ನೀಡಿದ್ದರು. ತಂಡದ ಕಳಪೆ ಪ್ರದರ್ಶನದ ಹೊರತಾಗಿಯೂ 15 ಪಂದ್ಯಗಳನ್ನು ಆಡಿದ್ದ ಜೋ ರೂಟ್ 61ರ ಸರಾಸರಿಯಲ್ಲಿ 1708 ರನ್ ಗಳಿಸಿದ್ದರು. ಈ ವರ್ಷದಲ್ಲಿ ಕೂಡ ಆ ಫಾರ್ಮ್‌ಅನ್ನು ರೂಟ್ ಮುಂದುವರಿಸಿದ್ದಾರೆ.

ಕಿವೀಸ್ ವಿರುದ್ಧ ಗೆಲುವು
ಇನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರೋಚಕವಾಗಿ ಗೆಲುವು ಸಾಧಿಸಿದೆ. ಬೌಲರ್‌ಗಳು ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿದ ಈ ಪಂದ್ಯದಲ್ಲಿ ಕೆಲ ಬ್ಯಾಟರ್‌ಗಳ ನಿರ್ಣಾಯಕ ಪಾತ್ರದ ಕಾರಣದಿಂದಾಗಿ ರೋಚಕತೆಯನ್ನು ಸೃಷ್ಟಿಸಿತ್ತು. ಆದರೆ ಅಂತಿಮವಾಗಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿಲು ಯಶಸ್ವಿಯಾಗಿದ್ದು ಮೊದಲ ಪಂದ್ಯದಲ್ಲಿ ಗೆಲುವುಸ ಸಾಧಿಸಿದೆ. ಈ ಮೂಲಕ ಸರಣಿಯನ್ನು 1-0 ಅಂತರದಿಂದ ಮೇಲುಗೈ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications