For Quick Alerts
ALLOW NOTIFICATIONS  
For Daily Alerts
 

2004ರಲ್ಲಿ ಪಾಕಿಸ್ತಾನ ಪ್ರವಾಸಕ್ಕಾಗಿ ಎಂಎಸ್ ಧೋನಿ ಆಯ್ಕೆ ತಪ್ಪಿಸಿದ್ಯಾರು?; ಬಹಿರಂಗಪಡಿಸಿದ ಮಾಜಿ ಮುಖ್ಯ ಆಯ್ಕೆಗಾರ

2004ರಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ ಭಾರತ ಕ್ರಿಕೆಟ್ ತಂಡದಲ್ಲಿ ಎಂಎಸ್ ಧೋನಿ ಹೆಸರನ್ನು ಆಯ್ಕೆ ಮಾಡಲು ಬಯಸಿದ್ದೆ. ಆದರೆ, ಅಂದಿನ ನಾಯಕ ಸೌರವ್ ಗಂಗೂಲಿ ಅವರು ಧೋನಿಯನ್ನು ತಂಡದಲ್ಲಿ ನೋಡಲು ಇಷ್ಟಪಡದ ಕಾರಣ, ಅವರು ಪ್ರಯಾಣಿಸಲಿಲ್ಲ ಎಂದು ಬಿಸಿಸಿಐ ಮಾಜಿ ಆಯ್ಕೆಗಾರ ಸಬಾ ಕರೀಮ್ ಬಹಿರಂಗಪಡಿಸಿದರು.

ಇತ್ತೀಚಿಗಿನ ಸಂವಾದದ ಸಂದರ್ಭದಲ್ಲಿ, ಸಬಾ ಕರೀಮ್ ಅವರು ಬಿಹಾರ ತಂಡಕ್ಕಾಗಿ ಎಂಎಸ್ ಧೋನಿ ಪ್ರದರ್ಶನವನ್ನು ಹೇಗೆ ನೋಡಿದ್ದರು ಮತ್ತು ಭಾರತದ ಮಾಜಿ ನಾಯಕ ತೋರಿದ ಪ್ರದರ್ಶನದಿಂದ ಹೇಗೆ ಪ್ರಭಾವಿತರಾಗಿದ್ದರು ಎಂಬುದರ ಕುರಿತು ಮಾತನಾಡಿದರು.

Former Chief of Selection Committee Reveals Why MS Dhoni Missed Pakistan Tour In 2004

2003-04ರ ಪಾಕಿಸ್ತಾನ ವಿರುದ್ಧದ ಸರಣಿಗೆ ಎಂಎಸ್ ಧೋನಿ ಆಯ್ಕೆಯಾಗಿರಲಿಲ್ಲ. ಆದರೆ, ನಂತರ 2004ರಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು 2005ರಲ್ಲಿ ಪಾಕಿಸ್ತಾನ ವಿರುದ್ಧದ ಸ್ವದೇಶಿ ಸರಣಿಗಾಗಿ ಭಾರತ ತಂಡದ ಭಾಗವಾಗಿದ್ದರು ಎಂಬುದು ಇತಿಹಾಸ.

"ನಾನು ಎಂಎಸ್ ಧೋನಿ ಅವರನ್ನು ಮೊದಲ ಬಾರಿಗೆ ನೋಡಿದೆ. ಅದು ರಣಜಿ ಟ್ರೋಫಿಯಲ್ಲಿ ಅವರ ಎರಡನೇ ವರ್ಷವಾಗಿತ್ತು. ಆಗ ಬಿಹಾರ ಪರ ಆಡುತ್ತಿದ್ದ ಧೋನಿ ಬ್ಯಾಟಿಂಗ್ ಮತ್ತು ಕೀಪಿಂಗ್ ಮಾಡುವುದನ್ನು ನಾನು ನೋಡಿದೆ. ನನಗೆ ಇನ್ನೂ ನೆನಪಿದೆ, ಆತ ಬ್ಯಾಟಿಂಗ್ ಮಾಡುವಾಗ ಸ್ಪಿನ್ನರ್ ಮತ್ತು ವೇಗದ ಬೌಲರ್‌ಗೆ ದೊಡ್ಡ ಶಾಟ್‌ಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದರು," ಎಂದು ಬಿಸಿಸಿಐ ಮಾಜಿ ಆಯ್ಕೆಗಾರ ಸಬಾ ಕರೀಮ್ ತಿಳಿಸಿದರು.

Former Chief of Selection Committee Reveals Why MS Dhoni Missed Pakistan Tour In 2004

ವಿಕೆಟ್ ಕೀಪಿಂಗ್‌ಗೆ ಇರಬೇಕಾದ ಫುಟ್‌ವರ್ಕ್ ಸ್ವಲ್ಪ ಕಡಿಮೆಯಾಗಿದೆ. ಆ ಸಮಯದಲ್ಲಿ ನಾವು ಅವರೊಂದಿಗೆ ಈ ಬಗ್ಗೆ ಕೆಲಸ ಮಾಡಬೇಕಿದೆ. ಎಂಎಸ್ ಧೋನಿ ಅವರ ಹಿರಿಮೆ ವಿಕೆಟ್ ಕೀಪಿಂಗ್‌ನಲ್ಲಿ ಅಡಗಿದೆ. ನಾವು ಮಾತನಾಡುವಾಗ ಧೋನಿ ಅದರ ಬಗ್ಗೆ ಮಾತನಾಡುತ್ತಾರೆ ಎಂದರು.

ಎಂಎಸ್ ಧೋನಿ ವೃತ್ತಿಜೀವನದಲ್ಲಿ ಒಂದು ತಿರುವು ಕಂಡಿತು. ರಣಜಿಯಲ್ಲಿ ಆತ ಉತ್ತಮವಾಗಿ ಆಡುತ್ತಿದ್ದರು. ರಾಷ್ಟ್ರೀಯ ಏಕದಿನ ತಂಡಕ್ಕೆ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದೆವು. ಏಕೆಂದರೆ, ಆತನ ಬ್ಯಾಟಿಂಗ್ ತುಂಬಾ ಪ್ರಬಲವಾಗಿದೆ ಮತ್ತು ಅವರು ವೇಗವಾಗಿ ರನ್ ಗಳಿಸುತ್ತಿದ್ದರು,'' ಎಂದು ಸಬಾ ಕರೀಮ್ ಜಿಯೋಸಿನಿಮಾದಲ್ಲಿ ಹೇಳಿದರು.

"ಆ ವೇಳೆ ಕೀನ್ಯಾದಲ್ಲಿ ಭಾರತ ಎ, ಪಾಕಿಸ್ತಾನ ಎ ಮತ್ತು ಕೀನ್ಯಾ ನಡುವಿನ ತ್ರಿಕೋನ ಸರಣಿಯಾಗಿತ್ತು. ದಿನೇಶ್ ಕಾರ್ತಿಕ್ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗುತ್ತಿರುವ ಕಾರಣ, ಎಂಎಸ್ ಧೋನಿಗೆ ಭಾರತ ಎ ತಂಡದ ಪರ ಆಡುವ ಅವಕಾಶ ಸಿಕ್ಕಿತು," ಎಂದು ನೆನಪಿಸಿಕೊಂಡರು.

"ಅಲ್ಲಿ ಎಂಎಸ್ ಧೋನಿ ವಿಕೆಟ್‌ ಕೀಪಿಂಗ್ ಚೆನ್ನಾಗಿ ನಿಭಾಯಿಸಿದರು ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ರನ್ ಗಳಿಸಿದರು. ಭಾರತ ಎ ತಂಡ ಪಾಕಿಸ್ತಾನ ಎ ತಂಡದ ವಿರುದ್ಧ ಎರಡು ಬಾರಿ ಆಡಿತು ಮತ್ತು ಇಡೀ ಸರಣಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರು," ಎಂದು ಸಬಾ ಕರೀಮ್ ತಿಳಿಸಿದರು.

"ಅಲ್ಲಿಂದ ಧೋನಿ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ಪಡೆಯಿತು. ಅದರ ನಂತರ, ಧೋನಿ ಹೆಸರು ರಾಷ್ಟ್ರೀಯ ತಂಡದ ಲೆಕ್ಕಾಚಾರದಲ್ಲಿತ್ತು. ಆ ಸಮಯದಲ್ಲಿ ನಾನು ಕೋಲ್ಕತ್ತಾದಲ್ಲಿದ್ದೆ ಮತ್ತು ಸೌರವ್ ಗಂಗೂಲಿ ನಾಯಕನಾಗಿದ್ದರು ಎಂಬುದು ನನಗೆ ನೆನಪಿದೆ".

"ನಾನು ಗಂಗೂಲಿಯನ್ನು ಭೇಟಿಯಾಗಲು ಹೋದೆ ಮತ್ತು ಭಾರತ ತಂಡಕ್ಕೆ ಸೇರಬೇಕಾದ ಕೀಪರ್ ಇದ್ದಾನೆ ಎಂದು ನಾನು ಹೇಳಿದೆ. ಅಲ್ಲದೆ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾನೆ ಎಂದು ಹೇಳಿದೆ. ದುರದೃಷ್ಟವಶಾತ್, ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡುವ ಮೊದಲು ಸೌರವ್ ಗಂಗೂಲಿ ಅವರು ಎಂಎಸ್ ಧೋನಿ ಆಟವನ್ನು ನೋಡಿರಲಿಲ್ಲ. ಹಾಗಾಗಿ ಆ ಪ್ರವಾಸಕ್ಕೆ ಧೋನಿಯನ್ನು ಆಯ್ಕೆ ಮಾಡಲಿಲ್ಲ. ಆದರೆ ಅದರ ನಂತರ ಆಯ್ಕೆಯಾದನು," ಎಂದು ಸಬಾ ಕರೀಮ್ ಬಹಿರಂಗಪಡಿಸಿದರು.

Story first published: Saturday, August 5, 2023, 14:09 [IST]
Other articles published on Aug 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+