ಭಾರತದ ಈ ಬ್ಯಾಟರ್‌ನನ್ನು ಶ್ಲಾಘಿಸಿ, ಮಹತ್ವದ ಸಲಹೆ ನೀಡಿದ ಎಬಿ ಡಿವಿಲಿಯರ್ಸ್
ದಕ್ಷಿಣ ಆಫ್ರಿಕಾದ ಶ್ರೇಷ್ಠ ಹಾಗೂ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ಅತ್ಯುತ್ತಮ ಶ್ರೇಣಿಯ ಶಾಟ್‌ಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಮೂರು ಸ್ವರೂಪಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಸೂರ್ಯಕುಮಾರ್ ಯಾದವ್ ಮುಂದಿರುವ ದೊಡ್ಡ ಸವಾಲು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಮೂರು ಟಿ20 ಶತಕಗಳನ್ನು 200 ಅಥವಾ ಅದಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಬಾರಿಸಿದ ನಂತರ ವಿಶ್ವದಾದ್ಯಂತ ಚರ್ಚೆಗೊಳಪಟ್ಟರು.
ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರಿಗಿಂತ ಹೆಚ್ಚು ಶತಕಗಳನ್ನು ಗಳಿಸಿದ ಏಕೈಕ ಆಟಗಾರನೆಂದರೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ. ಆದರೆ ಅವರು ಅಗ್ರಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿರುವ ಎಲ್ಲರೂ ಅಗ್ರಕ್ರಮಾಂಕದಲ್ಲಿ ಬ್ಯಾಟ್ ಮಾಡುವವರಾಗಿದ್ದಾರೆ.
"ಇದು ನಂಬಲಸಾಧ್ಯವೆಂದು ಎಂದು ನಾನು ಭಾವಿಸುತ್ತೇನೆ. ನಾನು ಎಂದಿಗೂ ಆಡದ ಶಾಟ್‌ಗಳನ್ನು ಸೂರ್ಯಕುಮಾರ್ ಆಡುತ್ತಿದ್ದಾನೆ. ನಾನು ನಿಜವಾಗಿಯೂ ಆ ರೀತಿ ಆಡಲು ಪ್ರಯತ್ನಪಟ್ಟಿದ್ದೇನೆ. ಆಗ ಅದನ್ನು ವೀಕ್ಷಿಸಲು ಸುಂದರವಾಗಿರುತ್ತದೆ. ಅವನು ಇನ್ನೂ ಬಹಳ ದೂರ ಸಾಗಬೇಕು ಎಂದು ನಾನು ಭಾವಿಸುತ್ತೇನೆ. ಅವರನಿಂದ ಇನ್ನೂ ಹೆಚ್ಚು ಬರಲಿದೆ ಎಂದು ನಾನು ನಿರೀಕ್ಷಿಸುತ್ತೇನೆ," ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

"ಭವಿಷ್ಯದಲ್ಲಿ ಸೂರ್ಯಕುಮಾರ್ ಯಾದವ್ ಇನ್ನೂ ಉತ್ತಮ ಆಟಗಾರನಾಗುತ್ತಾನೆ. ಹೀಗಾಗಿ ಅದನ್ನು ನೋಡಲು ತುಂಬಾ ರೋಮಾಂಚನಕಾರಿಯಾಗಿದೆ. ಅವರು ಸ್ಥಿರತೆ ಕಾಯ್ದುಕೊಳ್ಳುವುದು ದೊಡ್ಡ ಸಮಸ್ಯೆಯಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಎಬಿ ಡಿವಿಲಿಯರ್ಸ್ ಜಿಯೋಸಿನಿಮಾದ ಹೋಮ್ ಆಫ್ ಹೀರೋಸ್‌ನ ಸಂದರ್ಶನದಲ್ಲಿ ಮಾತನಾಡಿದರು.
ಸೂರ್ಯಕುಮಾರ್ ಯಾದವ್ ನಂ.1 ಟಿ20 ಬ್ಯಾಟ್ಸ್‌ಮನ್ ಆಗಿದ್ದರೆ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅವರ ರನ್‌ಗಳು ಅಷ್ಟೊಂದು ಉತ್ತಮವಾಗಿಲ್ಲ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ, ಸೂರ್ಯಕುಮಾರ್ ಯಾದವ್ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿಲ್ಲ ಎಂಬುದನ್ನು ಗಮನಿಸಬೇಕಾದ ಸಂಗತಿಯಾಗಿದೆ.
ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳ ಕೊರತೆ ಹೊರತಾಗಿಯೂ ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಟೆಸ್ಟ್ ತಂಡದಲ್ಲಿ ಸೂರ್ಯಕುಮಾರ್ ಅವರನ್ನು ಆಯ್ಕೆ ಮಾಡಲಾಗಿಲ್ಲ.
ಇನ್ನು ಐಪಿಎಲ್‌ಗೆ ಮೊದಲು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಸತತ ಮೂರು ಬಾರಿಯೂ ಸೊನ್ನೆಗೆ ಔಟಾಗಿದ್ದರು.
"ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಸ್ಥಿರವಾಗಿರುವುದು ಮತ್ತು ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಅವರ ಆಟವನ್ನು ಲೆಕ್ಕಾಚಾರ ಮಾಡಿ ಮಾಡಿ ಆಡಬೇಕು. ಇದನ್ನು ಅರ್ಥಮಾಡಿಕೊಳ್ಳುವುದು ಅವರ ಮುಂದಿರುವ ದೊಡ್ಡ ಸವಾಲು," ಎಂದು ಎಬಿ ಡಿವಿಲಿಯರ್ಸ್ ಹೇಳಿದರು.
"ನಾನು ಆತನಲ್ಲಿ ಬಹಳಷ್ಟು ಹೋಲಿಕೆಗಳನ್ನು ನೋಡುತ್ತೇನೆ. ಸೂರ್ಯಕುಮಾರ್ ಕೇವಲ ಬ್ಯಾಟಿಂಗ್ ಗೇರ್‌ಗಳ ಮೂಲಕ ಪಂದ್ಯವನ್ನು ಬದಲಾಯಿಸಲು ಸಾಧ್ಯವಾಗುತ್ತದೆ. ನನ್ನ ಪ್ರಕಾರ, ಅವರು ಮೈದಾನದ ಸುತ್ತಲೂ ಸ್ಕೋರ್ ಮಾಡುವುದನ್ನು ನೋಡಲು ನಂಬಲಾಗದಂತಿದೆ," ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications