ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಭಿನ್ನವಾಗುವುದು ಆ ಒಬ್ಬ ಆಟಗಾರನಿಂದ ಎಂದ ಮಾಜಿ ಕ್ರಿಕೆಟಿಗ

Former cricketer Scott Styris praises Suryakumar Yadav said he is 360 degree player

ಟಿ20 ವಿಶ್ವಕಪ್ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿತಂಡಗಳು ಕೂಡ ಅತ್ಯುತ್ತಮ ಪ್ರದರ್ಶನ ನೀಡಲು ಹಾತೊರೆಯುತ್ತವೆ. ಎಲ್ಲಾ ಆಟಗಾರರು ಕೂಡ ಅತ್ಯುತ್ತಮ ಈ ವೇದಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಬಯಸುತ್ತಾರೆ. ಆದರೆ ಈ ಟೂರ್ನಿಗೂ ಮುನ್ನವೇ ಅತಿ ಹೆಚ್ಚಿನ ಭರವಸೆ ಮೂಡಿಸಿರುವ ಭಾರತೀಯ ಆಟಗಾರ ಸೂರ್ಯಕುಮಾರ್ ಯಾದವ್. ಇತ್ತೀಚಿನ ದಿನಗಳಲ್ಲಿ ಅತ್ಯಂತ ಸ್ಥಿರವಾಗಿ ಬ್ಯಾಟಿಂಗ್ ನಡೆಸುತ್ತಿರುವ ಸೂರ್ಯಕುಮಾರ್ ಯಾದವ್ ಹೆಚ್ಚು ನಿರೀಕ್ಷೆ ಮೂಡಿಸಿದ್ದಾರೆ. ಈ ಬಗ್ಗೆ ದಿಗ್ಗಜ ಕ್ರಿಕೆಟಿಗರು ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್‌ನಲ್ಲಿರುವ ಭಿನ್ನ ಶಕ್ತಿಯ ಬಗ್ಗೆ ಮಾತನಾಡಿದ್ದಾರೆ. ಇತರ ಎಲ್ಲಾ ಬ್ಯಾಟರ್‌ಗಳಿಗಿಂತಲೂ ತಾನು ಭಿನ್ನ ಆಟಗಾರ ಎಂಬುದನ್ನು ಸೂರ್ಯಕುಮಾರ್ ಯಾದವ್ ಈಗಾಗಲೇ ತೋರಿಸಿದ್ದಾರೆ ಎಂದು ಸ್ಕ್ವಾಟ್ ಸ್ಟೈರಿಸ್ ಹೇಳಿದ್ದಾರೆ.

ಟಿ20 ವಿಶ್ವಕಪ್‌: ಈ ಸ್ಟಾರ್ ಆಟಗಾರನ ಫಾರ್ಮ್ ಭಾರತ ತಂಡಕ್ಕೆ ಸಕಾರಾತ್ಮಕ ಸಂಕೇತ; ಕಮ್ರಾನ್ ಅಕ್ಮಲ್ಟಿ20 ವಿಶ್ವಕಪ್‌: ಈ ಸ್ಟಾರ್ ಆಟಗಾರನ ಫಾರ್ಮ್ ಭಾರತ ತಂಡಕ್ಕೆ ಸಕಾರಾತ್ಮಕ ಸಂಕೇತ; ಕಮ್ರಾನ್ ಅಕ್ಮಲ್

ಅಗ್ರಸ್ಥಾನದ ಮೇಲೆ ಸೂರ್ಯ ಕಣ್ಣು

ಅಗ್ರಸ್ಥಾನದ ಮೇಲೆ ಸೂರ್ಯ ಕಣ್ಣು

ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಚಿತ್ತ ತಮ್ಮತ್ತ ಸೆಳeಯುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯ ತಮ್ಮ ಫಾರ್ಮ್‌ಅನ್ನು ಆನಂದಿಸುತ್ತಿದ್ದು ಮುಂಬರುವ ಟಿ20 ವಿಶ್ವಕಪ್‌ಗೆ ಎದುರುನೋಡುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ನೀಡುತ್ತಿರುವ ಸ್ಪೋಟಕ ಹಾಗೂ ಸ್ಥಿರ ಪ್ರದರ್ಶನದ ಕಾರಣದಿಂದಾಗಿ ಐಸಿಸಿ ಟಿ20 ಬ್ಯಾಟರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು ಮೊದಲ ಸ್ಥಾನಕ್ಕಿಂತ ಕೇವಲ 2 ಅಂಕಗಳಷ್ಟು ಹಿಂದಿದ್ದಾರೆ.

ಆರಂಭಿಕನಾಗಿ ಯಶಸ್ಸು ಅಚ್ಚರಿಯಾಗಿಲ್ಲ

ಆರಂಭಿಕನಾಗಿ ಯಶಸ್ಸು ಅಚ್ಚರಿಯಾಗಿಲ್ಲ

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ಕಾಟ್ ಸ್ಟೈರಿಸ್ ಟೀಮ್ ಇಂಡಿಯಾದಲ್ಲಿ ಸೈರ್ಯಕುಮಾರ್ ಆರಂಭಿಕನಾಗಿ ಕಣಕ್ಕಿಳಿದು ಯಶಸ್ಸು ಸಾಧಿಸಿದ ಬಗ್ಗೆ ತನಗೆ ಯಾವುದೇ ರೀತಿಯ ಅಚ್ಚರಿಯಾಗಿಲ್ಲ ಎಂದಿದ್ದಾರೆ. ಉತ್ತಮ ಆಟಗಾರರು ಯಾವುದೇ ಸ್ಥಾನದಲ್ಲಿ ಆಡುವತೆ ಸೂಚಿಸಿದರೂ ಮಿಂಚಬಲ್ಲರು ಎಂಬ ಅಭಿಪ್ರಾಯವನ್ನು ಸ್ಕಾಟ್ ಸ್ಟೈರಿಸ್ ವ್ಯಕ್ತಪಡಿಸಿದ್ದಾರೆ. "ಅತ್ಯುತ್ತಮ ಆಟಗಾರರು ಯಾವಾಗಲೂ ಅತ್ಯುತ್ತಮವಾಗಿಯೇ ಆಡುತ್ತಾರೆ. ಅವರಿಗೆ ಯಾವ ಕ್ರಮಾಂಕವನ್ನು ನಿಡಿದರೂ ಅದು ಪರಿಣಾಮ ಬೀರುವುದಿಲ್ಲ. ಅವರು ಆರಂಭಿಕನಾಗಿ ಯಶಸ್ಸು ಸಾಧಿಸಿದ್ದು ನನಗೆ ಹೆಚ್ಚು ಆಶ್ಚರ್ಯವುಂಟು ಮಾಡಲಿಲ್ಲ" ಎಂದಿದ್ದಾರೆ ಕಿವೀಸ್ ಮಾಜಿ ಕ್ರಿಕೆಟಿಗ

ಭಾರತದ ಸಮಸ್ಯೆಯ ಬಗ್ಗೆ ಹೊಟ್ಟೆಕಿಚ್ಚು ಮೂಡುತ್ತದೆ

ಭಾರತದ ಸಮಸ್ಯೆಯ ಬಗ್ಗೆ ಹೊಟ್ಟೆಕಿಚ್ಚು ಮೂಡುತ್ತದೆ

ಮುಂದುವರಿಸು ಮಾತನಾಡಿದ ಸ್ಕ್ವಾಟ್ ಸ್ಟೈರಿಸ್ ಭಾರತ ಕ್ರಿಕೆಟ್ ತಂಡ ಈಗ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ನನಗೆ ನಿಜಕ್ಕೂ ಹೊಟ್ಟೆಕಿಚ್ಚುಂಟಾಗುತ್ತಿದೆ ಎಂದು ಸ್ಟೈರಿಸ್ ಹೇಳಿದ್ದಾರೆ. "ಸೂರ್ಯಕುಮಾರ್ ಯಾದವ್ ಆರಂಭಿಕನಾಗಿ ಕಣಕ್ಕಿಳಿಯಬೇಕಾ? ಮೂರನೇ ಕ್ರಮಾಂಕದಲ್ಲಿ ಆಡಬೇಕಾ? ಈಗ ಇದು ನಿಮಗೆ ಎಷ್ಟು ಕಷ್ಟವಾಗುತ್ತಿದೆ. ಆದರೆ ಖಂಡಿತವಾಗಿಯೂ ಕೆಲ ಅನುಭವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಸೂರ್ಯ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು" ಎಂದಿದ್ದಾರೆ ಸ್ಕಾಟ್ ಸ್ಟೈರಿಸ್.

ಸೂರ್ಯಕುಮಾರ್‌ನಿಂದ ಭಾರತ ಭಿನ್ನ ತಂಡವಾಗಲಿದೆ

ಸೂರ್ಯಕುಮಾರ್‌ನಿಂದ ಭಾರತ ಭಿನ್ನ ತಂಡವಾಗಲಿದೆ

ನಂತರ ಸ್ಲಾಟ್ ಸ್ಟೈರಿಸ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಸಾಮರ್ಥ್ಯ ಬಗ್ಗೆಯೂ ವಿಶೇಷ ಮಾತುಗಳನ್ನಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಈ ಸಾಮರ್ಥ್ಯದಿಂದಾಗಿ ಭಾರತ ತಂಡವನ್ನು ಇತರ ಎಲ್ಲಾ ತಂಡಗಳಿಗಿಂತ ಅವರು ಭಿನ್ನ ತಂಡವೆನಿಸುವಂತೆ ಮಾಡುತ್ತಾರೆ. ಆತನೋರ್ವ ಸಾಂಪ್ರದಾಯಿಕ ಶೈಲಿಯ ಕ್ರಿಕೆಟ್ ಆಟಗಾರನಲ್ಲ. ಆತ ನಿಜಕ್ಕೂ ಭಿನ್ನ ಆಟಗಾರ ಎಂದು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಕಿವೀಸ್ ಮಾಜಿ ಕ್ರಿಕೆಟಿಗ ವಿಶೇಷ ಮಾತುಗಳನ್ನಾಡಿದ್ದಾರೆ.

ಸ್ಕ್ವಾಡ್‌ಗಳು ಹೀಗಿದೆ
ವೆಸ್ಟ್ ಇಂಡೀಸ್: ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್, ಓಡಿಯನ್ ಸ್ಮಿತ್, ಕೀಮೋ ಪಾಲ್, ಶಮರ್ ಬ್ರೂಕ್ಸ್, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್

ಭಾರತ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಷ್ದೀಪ್ ಸಿಂಗ್, ರವಿ ಬಿಷ್ಣೋಯ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ , ಸಂಜು ಸ್ಯಾಮ್ಸನ್, ಹರ್ಷಲ್ ಪಟೇಲ್, ರವೀಂದ್ರ ಜಡೇಜಾ

Story first published: Friday, August 5, 2022, 0:13 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X