ಟಿ20 ವಿಶ್ವಕಪ್ ಗೆಲ್ಲಲು ಭಾರತ ತನ್ನ 'ಬಿ' ಟೀಮ್ ಕಳುಹಿಸಬೇಕು ಎಂದ ಮಾಜಿ ಆಟಗಾರ

ಮಾಜಿ ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್ ಅವರು ಟಿ20 ವಿಶ್ವಕಪ್ ವರ್ಷದಲ್ಲಿ ಭಾರತದ ಸಾಕಷ್ಟು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದು, ಏಷ್ಯಾದ ದೈತ್ಯ ತಂಡ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಯಶಸ್ವಿಯಾಗಿ ಹೊರಹೊಮ್ಮಲು ತಮ್ಮ 'ಬಿ' ತಂಡವನ್ನು ಕಳುಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಗುರುವಾರ, ಜುಲೈ 7ರಂದು ಸೌತಾಂಪ್ಟನ್‌ನಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ, ಆಡುವ 11ರ ಬಳಗಕ್ಕೆ ಭಾರತವು ಬದಲಾವಣೆಗಳನ್ನು ಮಾಡಬೇಕಾದ ಸಮಯದಲ್ಲಿ ಗ್ರೇಮ್ ಸ್ವಾನ್ ಅವರಿಂದ ಈ ಹೇಳಿಕೆ ಬಂದಿದೆ. ಆಡುವ 11ರ ಬಳಗದಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಇಲ್ಲದಿದ್ದರೂ ಭಾರತವು ಜೋಸ್ ಬಟ್ಲರ್ ತಂಡವನ್ನು 50 ರನ್‌ಗಳಿಂದ ಸೋಲಿಸಿತು.

ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯ ಮೆರೆದ 'ಎರಡನೇ ಸ್ಟ್ರಿಂಗ್' ತಂಡ
ಬರ್ಮಿಂಗ್‌ಹ್ಯಾಮ್‌ನಲ್ಲಿ ಮರುನಿಗದಿಪಡಿಸಲಾದ ಐದನೇ ಟೆಸ್ಟ್ ಮುಗಿದ ಒಂದು ದಿನದ ನಂತರ ಆರಂಭವಾದ ಮೊದಲ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್‌ರಂತಹವರಿಗೆ ವಿಶ್ರಾಂತಿ ನೀಡಲಾಯಿತು.
ಗುರುವಾರ ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯ ಮೆರೆದ ರೋಹಿತ್ ಶರ್ಮಾ 'ಎರಡನೇ ಸ್ಟ್ರಿಂಗ್' ತಂಡವನ್ನು ಮುನ್ನಡೆಸಿದಾಗ ಭಾರತದ ಬೆಂಚ್ ಬಲವು ಪ್ರದರ್ಶನಗೊಂಡಿತು. ನಾಯಕ ರೋಹಿತ್ ಶರ್ಮಾ 24 ರನ್ ಸಿಡಿಸಿದರೆ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ದೀಪಕ್ ಹೂಡಾ ಕೇವಲ 17 ಎಸೆತಗಳಲ್ಲಿ 33 ರನ್ ಗಳಿಸಿದರು. ನಂತರ ಸೂರ್ಯಕುಮಾರ್ ಯಾದವ್ 39 ರನ್ ಗಳಿಸಿದರು ಮತ್ತು ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲು ಅರ್ಧಶತಕ ಬಾರಿಸಿದರು.

ಚೊಚ್ಚಲ ಟಿ20 ಶತಕವನ್ನು ಗಳಿಸಿದ ನಂತರ ದೀಪಕ್ ಹೂಡಾ
ಗಮನಾರ್ಹ ಅಂಶವೆಂದರೆ ಜೂನ್‌ನಲ್ಲಿ ಐರ್ಲೆಂಡ್‌ನಲ್ಲಿ ತಮ್ಮ ಚೊಚ್ಚಲ ಟಿ20 ಶತಕವನ್ನು ಗಳಿಸಿದ ನಂತರ ದೀಪಕ್ ಹೂಡಾ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಇವರುಗಳು ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅವರಂತಹವರಿಗೆ ದಾರಿ ಮಾಡಿಕೊಡಬೇಕಾಗಬಹುದು. ಆದರೆ ಅಕ್ಷರ್ ಪಟೇಲ್ ಬದಲಿಗೆ ಜಡೇಜಾವನ್ನು ನಿರೀಕ್ಷಿಸಲಾಗಿದೆ. ಸೀಮಿತ ಓವರ್‌ಗಳ ತಂಡದ ಭಾಗವಾಗಿರುವ ಶ್ರೇಯಸ್ ಅಯ್ಯರ್ ಅವರು ಅವಕಾಶಗಳಿಗಾಗಿ ಕಾಯುವ ಸಾಧ್ಯತೆಯಿದೆ.
ಗುರುವಾರ ಚೊಚ್ಚಲ ಪಂದ್ಯದಲ್ಲೇ 2 ವಿಕೆಟ್ ಕಬಳಿಸಿ ಸ್ವಿಂಗ್ ಬೌಲಿಂಗ್ ಕೌಶಲ ಮೆರೆದ ಅರ್ಶ್‌ದೀಪ್ ಸಿಂಗ್, ಐರ್ಲೆಂಡ್‌ನಲ್ಲಿ ತಮ್ಮ ಟಿ20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಉಮ್ರಾನ್ ಮಲಿಕ್ ಅವರು ಅವಕಾಶಕ್ಕಾಗಿ ಕಾಯುತ್ತಿರುವಾಗಲೂ ಜಸ್ಪ್ರೀತ್ ಬುಮ್ರಾಗೆ ದಾರಿ ಮಾಡಿಕೊಡುತ್ತಾರೆ.

ಮತ್ತೊಮ್ಮೆ ಆತಿಥೇಯರನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ
"ಭಾರತವು ತಮ್ಮ ಬಿ ತಂಡವನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕು ಮತ್ತು ಬಹುಶಃ ವಿಶ್ವಕಪ್ ಗೆಲ್ಲಬಹುದು," ಎಂದು ಗ್ರೇಮ್ ಸ್ವಾನ್ ಸೋನಿ ಸ್ಪೋರ್ಟ್ಸ್‌ಗೆ ತಿಳಿಸಿದರು. ಗುರುವಾರ ಇಂಗ್ಲೆಂಡ್ ವಿರುದ್ಧ ಆಡಿದ 11ರ ಬಳಗ ಮತ್ತೊಮ್ಮೆ ಆತಿಥೇಯರನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ. ಒಂದು ವೇಳೇ ಗೆಲುವಿನ ಸಂಯೋಜನೆಯನ್ನು ಬದಲಾಯಿಸುವುದು ಜೋಸ್ ಬಟ್ಲರ್ ತಂಡಕ್ಕೆ ಮಾತ್ರ ಒಳ್ಳೆಯ ಸುದ್ದಿ ಎಂದು ಮಾಜಿ ಇಂಗ್ಲೆಂಡ್ ಸ್ಪಿನ್ನರ್ ಹೇಳಿದರು.
"ನೀವು ಸಾಕಷ್ಟು ಆಟಗಾರರನ್ನು ಕರೆತರುವುದು ಉತ್ತಮ ಆಲೋಚನೆ ಎಂದು ನಾನು ಭಾವಿಸುತ್ತೇನೆ. ನೀವು ಗೆಲ್ಲುವ ತಂಡವನ್ನು ಪಡೆದುಕೊಂಡಿದ್ದೀರಿ ಮತ್ತು ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಅದನ್ನು ಸಂಪೂರ್ಣವಾಗಿ ಬದಲಾಯಿಸಿದ್ದೀರಿ. ಈಗ ಆಡಿರುವ 11ರ ಬಳಗ ಇಂಗ್ಲೆಂಡವನ್ನು ಸೋಲಿಸುತ್ತದೆ. 2 ದಿನದಲ್ಲಿ ನೀವು ಬುಮ್ರಾ, ಕೊಹ್ಲಿ ಮತ್ತು ಪಂತ್‌ನಂತಹ ವಿಶ್ವದರ್ಜೆಯ ಆಟಗಾರರನ್ನು ಕರೆತಂದರೂ, ಅದು ಗೆಲುವಿನ ಸಮತೋಲನವನ್ನು ಹಾಳುಮಾಡುತ್ತದೆ".

ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಬೇಕು
ಏತನ್ಮಧ್ಯೆ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರೊಂದಿಗೆ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಲು ಸಲಹೆ ನೀಡಿದ ಗ್ರೇಮ್ ಸ್ವಾನ್, ಮಾಜಿ ನಾಯಕ ಮಧ್ಯಮ ಓವರ್‌ಗಳಲ್ಲಿ ಆಡಲು ಸೂಕ್ತವಲ್ಲ ಎಂದರು.
ವಿರಾಟ್ ಕೊಹ್ಲಿ ಟಿ20ಯಲ್ಲಿ ಭಾರತಕ್ಕೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಮಧ್ಯಮ ಓವರ್‌ಗಳಲ್ಲಿ ಅವರ ಕಳಪೆ ಫಾರ್ಮ್‌ನಿಂದ ಹೊರಬರಲು ಸಾಧ್ಯವಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಜಿ ನಾಯಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.
"ರೋಹಿತ್ ಶರ್ಮಾ ಇನ್ನೊಂದು ತುದಿಯಲ್ಲಿ ವೇಗವಾಗಿ ಸ್ಕೋರ್ ಮಾಡುತ್ತಿದ್ದಾಗ, ವಿರಾಟ್ ಕೊಹ್ಲಿ ಸಾಥ್ ನೀಡುತ್ತಾರೆ ಮತ್ತು ಅವರನ್ನು ಅನುಸರಿಸುತ್ತಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿ ಹೆಚ್ಚು ಸ್ಕೋರ್ ಮಾಡುತ್ತಾರೆ. ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್ ಇದನ್ನು ಅನುಸರಿಸಬಹುದು," ಎಂದು ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications