ಮುಂಬೈ ತಂಡ ಗೆಲ್ಲುವ ಕನಸು ಕಾಣುತ್ತಿದ್ದೀರಾ? ಸಚಿನ್ ತೆಂಡೂಲ್ಕರ್ ಗೆ ಲೇವಡಿ

ಹಾಲೀ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ, ಇದುವರೆಗೆ ಎರಡು ಪಂದ್ಯವನ್ನು ಆಡಿದ್ದು, ಅದರಲ್ಲಿ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೋತು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಗೆಲುವು ಸಾಧಿಸಿದೆ.
ನಾಯಕನಾಗಿ ಕಳೆದ ಪಂದ್ಯದಲ್ಲಿ ಲಯಕ್ಕೆ ಮರಳಿರುವ ರೋಹಿತ್ ಶರ್ಮಾಗೆ, ತಂಡವನ್ನು ದಡಕ್ಕೆ ಸೇರಿಸಿರುವ ಗುರುತರ ಜವಾಬ್ದಾರಿಯಿದೆ. ಬಲಿಷ್ಠ ಆಟಗಾರರನ್ನು ಹೊಂದಿರುವ ಮುಂಬೈ ತಂಡ, ಸೋಮವಾರ (ಸೆ 28) ದುಬೈನಲ್ಲಿ ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಆಡಲಿದೆ.
ಭಾನುವಾರ (ಸೆ 27) ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ, ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗ, ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದ ನಾಯಕರೂ ಆಗಿದ್ದವರು.
ಈ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮಾಂಟೆ ಪಾನೆಸರ್, ತೆಂಡೂಲ್ಕರ್ ಅವರ ಕಾಲೆಳೆದಿದ್ದಾರೆ. ಹಿಂದೊಮ್ಮೆ 'ಕ್ರಿಕೆಟಿನ ನನ್ನ ಅಚ್ಚುಮೆಚ್ಚಿನ ಆಟಗಾರ'ಎಂದು ಹೇಳಿದ್ದ ಪಾನೆಸರ್, ಕನಸು ಕಾಣುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ತೆಂಡೂಲ್ಕರ್
ಐಪಿಎಲ್ ಆರಂಭ ಆದಾಗಿನಿಂದ ಸತತ ಆರು ಸೀಸನ್ ಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಸಚಿನ್ ತೆಂಡೂಲ್ಕರ್, ಅದಾದ ನಂತರ ತಂಡದ ಕೋಚ್ ಆಗಿದ್ದವರು. ತೆಂಡೂಲ್ಕರ್ ಅವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಔಟ್ ಮಾಡಿದ್ದ ನನ್ನ ವೃತ್ತಿ ಜೀವನದ ಹೈಲೆಟ್ಸ್ ಎಂದು ಮಾಂಟೆ ಪಾನೆಸರ್ ಹೇಳಿದ್ದರು. (ಚಿತ್ರ:ಪಿಟಿಐ)
ಐಪಿಎಲ್ 2020 ಗೆಲ್ಲುವ ಕನಸು ಕಾಣುತ್ತಿದ್ದೀರಾ
ಸಚಿನ್ ತಂಡೂಲ್ಕರ್ ಟ್ವೀಟ್ ಮಾಡಿ, "ಮೇಕಿಂಗ್ ಎ ಟ್ರಿಪ್ ಟು ಡ್ರೀಮ್ ಲ್ಯಾಂಡ್" ಎಂದು ಟ್ವೀಟ್ ಮಾಡಿ ಅದಕ್ಕೆ ವಿಶ್ವ ಪ್ರವಾಸೋದ್ಯಮ ದಿನದ ಹ್ಯಾಷ್ ಟ್ಯಾಗ್ ಹಾಕಿದ್ದರು. ಈ ಟ್ವೀಟಿಗೆ ಲೇವಡಿ ಮಾಡಿರುವ ಪಾನೆಸರ್, "ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ 2020 ಗೆಲ್ಲುವ ಕನಸು ಕಾಣುತ್ತಿದ್ದೀರಾ"ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಹೇಳಲು ನನಗೆ ಯಾವುದೇ ಮುಜುಗರವಿಲ್ಲ
ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಯಾರು ಜಯ ಸಾಧಿಸಲಿದ್ದಾರೆ ಎನ್ನುವ ಪ್ರಶ್ನೆಯನ್ನು ಮಾಧ್ಯಮದವರು ತೆಂಡೂಲ್ಕರ್ ಬಳಿ ಕೇಳಿದ್ದರು. ಅದಕ್ಕೆ, "ಈ ಬಗ್ಗೆ ಹೇಳಲು ನನಗೆ ಯಾವುದೇ ಮುಜುಗರವಿಲ್ಲ. ಮುಂಬೈ ತಂಡವೇ ಈ ಬಾರಿಯೂ ಟ್ರೋಫಿಯನ್ನು ಗೆಲ್ಲಲಿದೆ" ಎಂದು ತೆಂಡೂಲ್ಕರ್ ಹೇಳಿದ್ದರು. (ಚಿತ್ರ:ಟ್ವಿಟ್ಟರ್)

ರೋಹಿತ್ ಶರ್ಮಾ ಹುಡುಗರೇ ಚಾಂಪಿಯನ್
"ಸ್ವಾಭಾವಿಕವಾಗಿ ನೀಲಿ ಕಲರ್ ಡ್ರೆಸ್ ಹಾಕುವ ಹುಡುಗರೇ ಈ ಬಾರಿಯ ಚಾಂಪಿಯನ್. ಈ ಬಗ್ಗೆ ಏನಾದರೂ ಸಂಶಯವಿದೆಯೇ? ಭಾರತ ಮತ್ತು ಮುಂಬೈ ಸೇರಿದರೆ ಮುಂಬೈ ಇಂಡಿಯನ್ಸ್ ಆಗುತ್ತದೆ"ಎಂದು ತನ್ನ ತಂಡದ ಬಗ್ಗೆ ಸಚಿನ್ ತಂಡೂಲ್ಕರ್ ಭರವಸೆಯ ಮಾತನ್ನಾಡಿದ್ದರು. (ಚಿತ್ರ:ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications