Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪುಣೆಯಲ್ಲಿ ಹೊಸ ಮನೆ ಖರೀದಿಸಿದ ಮಾಜಿ ನಾಯಕ ಎಂಎಸ್ ಧೋನಿ

Former India captain MS Dhoni buys new home in Pune

ಪುಣೆ: ಟೀಮ್ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಎಂಎಸ್ ಧೋನಿ ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಇಲ್ಲಿಗೆ ಧೋನಿಗೆ ಬೇರೆ ಬೇರೆ ಮೂರು ತಾಣಗಳಲ್ಲಿ ನಿವಾಸ ಇದ್ದಂತಾಗಿದೆ. ಮುಂಬೈ, ರಾಂಚಿ, ಪುಣೆ ಈ ಮೂರು ತಾಣಗಳಲ್ಲಿ ಧೋನಿ ಕುಟುಂಬ ಸಹಿತ ತಾನು ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ, ತಮ್ಮ ಹೊಸ ಮನೆ ಮುಂಬೈಯಲ್ಲಿ ಕಟ್ಟಲ್ಪಡುತ್ತಿರುವುದಾಗಿ ತಿಳಿಸಿದ್ದರು. ಸದ್ಯ ಎಂಎಸ್‌ಡಿ ಕುಟುಂಬ ಝಾರ್ಖಾಂಡ್‌ನ ರಾಂಚಿಯಲ್ಲಿ ಖುಷಿಯಾಗಿ ದಿನಗಳನ್ನು ಕಳೆಯುತ್ತಿದೆ.

2021ರ ಇಂಡಿಯನ್ ಪ್ರೀಮಿಯರ್ ಲೀಗ್‌ ಕೋವಿಡ್-19ನಿಂದಾಗಿ ಮೇ 4ರಂದು ಅಮಾನತಾದ ಬಳಿಕ ಧೋನಿ ಕುಟುಂಬ ರಾಂಚಿಯ ಫಾರ್ಮ್‌ಹೌಸ್‌ ಬಳಿಯಿರುವ ನಿವಾಸದಲ್ಲಿದೆ. ಐಪಿಎಲ್‌ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಕಂಡಿರುವ ಸಿಎಸ್‌ಕೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.

ಧೋನಿ ಈಗಾಗಲೇ ಮನರಂಜನಾ ಉದ್ಯಮ ಆರಂಭಿಸಿದ್ದಾರೆ. ಎಂಎಸ್‌ಡಿ ಎಂಟರ್‌ಟೇನ್ಮೆಂಟ್ ಎನ್ನುವ ಕಂಪನಿ ಆರಂಭಿಸಿದ್ದಾರೆ. ಇದರ ಅಚೇರಿ ಮುಂಬೈಯಲ್ಲಿದೆ. ತನ್ನ ಫಾರ್ಮ್ ಹೌಸ್‌ನಲ್ಲಿ ಧೋನಿ ತನ್ನ ನೆಚ್ಚಿನ ಕುದುರೆ ಚೇತಕ್‌ ಬೆನ್ನು ಸವರುತ್ತಿರುವ ಚಿತ್ರ ಕೂಡ ಸಾಕ್ಷಿ ಇತ್ತೀಚೆಗೆ ಹಂಚಿಕೊಂಡಿದ್ದರು.

Story first published: Monday, May 31, 2021, 17:37 [IST]
Other articles published on May 31, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+