For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ರೋಹಿತ್, ರಾಹುಲ್; ಭಾರತದ ಈ ಸ್ಟಾರ್ ತ್ರಿವಳಿ ಆಟಗಾರರ ಬಗ್ಗೆ ಕಪಿಲ್ ದೇವ್ ಶಾಕಿಂಗ್ ಹೇಳಿಕೆ

Former India Cricket Captain Kapil Dev Big Statement On Virat Kohli, Rohit Sharma And KL Rahul Ahead T20 Series
ರೋಹಿತ್ ಶರ್ಮಾ ಹಾಗೂ ವಿರಾಟ್ ಗೆ ಮತ್ತೆ ತಲೆನೋವು!! | OneIndia Kannada

ಈ ವರ್ಷದ ಅಕ್ಟೋಬರ್-ನವೆಂಬರ್‌ ವೇಳೆಗೆ ಆಸ್ಟ್ರೇಲಿಯದ ಅಂಗಳದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಯುಎಇಯಲ್ಲಿ ಕಳೆದ ವಿಶ್ವಕಪ್ ಆವೃತ್ತಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಲು ವಿಫಲವಾದ ಕಾರಣ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಈ ಪಂದ್ಯಾವಳಿಯಲ್ಲಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.

ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು ಪ್ರಸ್ತುತ ಭಾರತ ತಂಡವನ್ನು ಕಡಿಮೆ ಸ್ವರೂಪದ ಆಟದಲ್ಲಿ ತಮ್ಮ ವಿಧಾನವನ್ನು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರು 150 ಪ್ಲಸ್ ಸ್ಟ್ರೈಕ್ ರೇಟ್‌ನಲ್ಲಿ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಅವರು ನಿರ್ಣಾಯಕ ಘಟ್ಟದಲ್ಲಿ ಔಟಾಗುತ್ತಿರುವುದು ತಂಡದ ಒತ್ತಡ ಹೆಚ್ಚಿಸಿದೆ ಎಂದು ತಿಳಿಸಿದರು.

ಕೆಎಲ್ ರಾಹುಲ್ 135.38 ಸ್ಟ್ರೈಕ್ ರೇಟ್‌ನಲ್ಲಿ 616 ರನ್

ಕೆಎಲ್ ರಾಹುಲ್ 135.38 ಸ್ಟ್ರೈಕ್ ರೇಟ್‌ನಲ್ಲಿ 616 ರನ್

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ನಾಯಕ ಕೆಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ 135.38 ಸ್ಟ್ರೈಕ್ ರೇಟ್‌ನಲ್ಲಿ 15 ಪಂದ್ಯಗಳಲ್ಲಿ 616 ರನ್ ಗಳಿಸಿದರು. ಸದ್ಯ ಅವರಿ ಟಿ20 ಕ್ರಿಕೆಟ್ ಮಾದರಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 14 ಪಂದ್ಯಗಳಲ್ಲಿ 120 ಸ್ಟ್ರೈಕ್ ರೇಟ್‌ನಲ್ಲಿ 286 ರನ್ ಗಳಿಸಿದರು. ಆರ್‌ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ 16 ಪಂದ್ಯಗಳಲ್ಲಿ 115.99 ಸ್ಟ್ರೈಕ್ ರೇಟ್‌ನಲ್ಲಿ 341 ರನ್ ಗಳಿಸಿದರು.

ನಿರ್ಭೀತ ಕ್ರಿಕೆಟ್ ಆಡಬೇಕು

ನಿರ್ಭೀತ ಕ್ರಿಕೆಟ್ ಆಡಬೇಕು

"ಖ್ಯಾತಿ ಸಾಕಷ್ಟು ದೊಡ್ಡದಾಗಿರುತ್ತದೆ ಮತ್ತು ಬಹುಶಃ ಒತ್ತಡವು ಅಷ್ಟೇ ಹೆಚ್ಚಾಗಿರುತ್ತದೆ, ಆದರೆ ಅದು ಹಾಗಾಗಬಾರದು. ನೀವು ನಿರ್ಭೀತ ಕ್ರಿಕೆಟ್ ಆಡಬೇಕು. ಈ ಎಲ್ಲಾ ಆಟಗಾರರು (ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್) 150-160 ಸ್ಟ್ರೈಕ್ ರೇಟ್‌ನಲ್ಲಿ ಆಡಬಹುದು. ಅವರು ಬಿಗ್ಗ ಹಿಟ್ಟರ್‌ಗಳು, ಆದರೆ ರನ್ ಗಳಿಸುವ ಸಮಯ ಬಂದಾಗ ಅವರೆಲ್ಲರೂ ಔಟ್ ಆಗುತ್ತಾರೆ," ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು.

"ನೀವು ಸೆಟ್ ಅಗಲು ಆರಂಭದ 8-10-12 ಎಸೆತಗಳು ಬೇಕಾಗಬಹುದು ಎಂದು ನಾವು ಹೇಳುತ್ತೇವೆ, ಆದರೆ 25 ಎಸೆತಗಳನ್ನು ಆಡಿದ ನಂತರ ನೀವು ಔಟ್ ಆಗುತ್ತೀರಿ. ಟೇಕ್ ಆಫ್ ಆಗುವ ಸಮಯ ಬಂದಾಗ, ನೀವು ಔಟ್ ಆಗಿ ಹೊರಬರುತ್ತೀರಿ. ಆದ್ದರಿಂದ ಒತ್ತಡವು ನಿಮ್ಮ ಮೇಲೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಉಳಿದ ಆಟಗಾರರು ಮತ್ತು ತಂಡದ ಮೇಲೆ ಪ್ರಭಾವ ಬೀರುತ್ತದೆ," ಎಂದು ಮಾಜಿ ನಾಯಕ ಕಪಿಲ್ ದೇವ್ ಅನ್‌ಕಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಕೆಎಲ್ 80-90 ಸ್ಕೋರ್ ಮಾಡಿದರೆ ಸಾಕು

ಕೆಎಲ್ 80-90 ಸ್ಕೋರ್ ಮಾಡಿದರೆ ಸಾಕು

"ನೀವು ಕೆಎಲ್ ರಾಹುಲ್ ಬಗ್ಗೆ ಮಾತನಾಡುವುದಾದರೆ, ನೀವು ಅವರ 20 ಓವರ್‌ಗಳನ್ನು ಆಡುವ ಬಗ್ಗೆ ಮಾತನಾಡಬೇಕು ಮತ್ತು ಕೆಎಲ್ 80-90 ಸ್ಕೋರ್ ಮಾಡಿದರೆ ಸಾಕು. ಆದರೆ ಅವರು 20 ಓವರ್‌ಗಳನ್ನು ಆಡಿ 60 ರನ್ ಗಳಿಸಿ ಔಟಾಗದೇ ಹಿಂತಿರುಗುತ್ತಾರೆ. ಇದು ತಂಡಕ್ಕೆ ನ್ಯಾಯ ಒದಗಿಸದಂತಾಗುವುದಿಲ್ಲ," ಎಂದು ಮಾಜಿ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ವಿಶ್ಲೇಷಿಸಿದರು.

ಟಿ20 ಪಂದ್ಯಗಳಲ್ಲಿ ಭಾರತ ತಂಡವು ತನ್ನ ವಿಧಾನವನ್ನು ಬದಲಾಯಿಸುವ ಅಗತ್ಯವಿದೆಯೇ ಎಂದು ಕೇಳಿದಾಗ, "ವಿಧಾನವನ್ನು ಬದಲಾಯಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಅದು ಇಲ್ಲದಿದ್ದರೆ, ನೀವು ಆಟಗಾರರನ್ನು ಬದಲಾಯಿಸಬೇಕಾಗುತ್ತದೆ," ಎಂದು ಹೇಳಿದರು.

ಹೆಸರಿನಿಂದಾಗಿ ನೀವು ದೊಡ್ಡವರಲ್ಲ

ಹೆಸರಿನಿಂದಾಗಿ ನೀವು ದೊಡ್ಡವರಲ್ಲ

ಅವರು ದೊಡ್ಡ ಆಟಗಾರರಾಗಿದ್ದರೆ, ಅವರು ತಂಡದ ಮೇಲೆ ದೊಡ್ಡ ಪ್ರಭಾವ ಬೀರಬೇಕು. ಹೆಸರಿನಿಂದಾಗಿ ನೀವು ದೊಡ್ಡವರಲ್ಲ, ಪ್ರದರ್ಶನದಲ್ಲಿ ದೊಡ್ಡವರಾಗಿರಬೇಕು. ನೀವು ದೊಡ್ಡ ಹೆಸರಿನವರಾಗಿದ್ದರೆ, ನೀವು ಹಾಗೆ ಕ್ರಿಕೆಟ್ ಆಡಬೇಕು. ಇಲ್ಲದಿದ್ದರೆ, ನಾವು ಇಲ್ಲಿದ್ದೇವೆ ನಮ್ಮ ಬಗ್ಗೆ ಮಾತನಾಡಿ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು.

ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಂದಿನ ಪಂದ್ಯವನ್ನು ಆಡಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ.

Story first published: Monday, June 6, 2022, 17:37 [IST]
Other articles published on Jun 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+