For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಮಾಧವ್ ಆಪ್ಟೆ ನಿಧನ

ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಮಾಧವ್ ಆಪ್ಟೆ ನಿಧನ
Former India Test cricketer Madhav Apte passes away

ನವದೆಹಲಿ, ಸೆಪ್ಟೆಂಬರ್ 23: ಭಾರತ ಟೆಸ್ಟ್ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಆಟಗಾರ ಮಾಧವ್ ಆಪ್ಟೆ ಸಾವನ್ನಪ್ಪಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮುಂಬೈಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ (ಸೆಪ್ಟೆಂಬರ್ 22) ಬೆಳಗ್ಗೆ ಅಪ್ಟೆ ಕೊನೆಯುಸಿರೆಳೆದರು.

1932 ಅಕ್ಟೋಬರ್ 5ರಂದು ಜನಿಸಿದ್ದ ಆಪ್ಟೆ, 1952ರಿಂದ 1953ರ ವರೆಗೆ ಏಳು ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಏಳು ಪಂದ್ಯಗಳಲ್ಲಿ 49.27ರ ಸರಾಸರಿಯಲ್ಲಿ 542 ರನ್ ಕಲೆ ಹಾಕಿದ್ದರು. ಇದರಲ್ಲಿ ಒಂದು ಶತಕ, ಮೂರು ಅರ್ಧ ಶತಕಗಳು ಸೇರಿವೆ.

ಒಟ್ಟು 67 ಪ್ರಥಮದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿದ್ದ ಆಪ್ಟೆ 3,336 ರನ್ ಬಾರಿಸಿದ್ದರು. ಇದರಲ್ಲಿ 6 ಶತಕ, 16 ಅರ್ಧ ಶತಕಗಳು ಸೇರಿದ್ದವು. ಬಾಂಬೆಯಲ್ಲಿ ಜನಿಸಿದ್ದ ಮಾಧವ್, ಮುಂಬೈಯ ಎಲ್ಫಿನ್‌ಸ್ಟೋನ್‌ ಕಾಲೇಜ್‌ನಲ್ಲಿದ್ದಾಗ ವಿನೋದ್ ಮಂಕದ್ ತರಬೇತಿಯಡಿಯಲ್ಲಿ ಲೆಗ್‌ ಸ್ಪಿನ್ನರ್ ಆಗಿ ಕ್ರಿಕೆಟ್ ಬದುಕಿಗೆ ಕಾಲಿರಿಸಿದ್ದರು.

ಓವಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್‌ಮನ್ ತನ್ನ ಕೊನೇ ಇನ್ನಿಂಗ್ಸ್‌ನಲ್ಲಿ 100.00 ಸರಾಸರಿ ಸಾಧನೆ ತಪ್ಪುವಲ್ಲಿ ಆಪ್ಟೆಯ ಪ್ರದರ್ಶನವೂ ಕಾರಣ ಎನ್ನಲಾಗುತ್ತದೆ. ಅಂದ್ಹಾಗೆ ಸಚಿನ್ ತೆಂಡೂಲ್ಕರ್ ವೃತ್ತಿ ಬದುಕು ರೂಪುಗೊಳ್ಳುವಲ್ಲೂ ಆಪ್ಟೆ ಮಾರ್ಗದರ್ಶನದ ಪಾಲಿದೆ.

Story first published: Monday, September 23, 2019, 15:31 [IST]
Other articles published on Sep 23, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+