For Quick Alerts
ALLOW NOTIFICATIONS  
For Daily Alerts
 

ಮತ್ತೆ ಬಡಿದ ಸ್ಪಾಟ್ ಫಿಕ್ಸಿಂಗ್ ವಾಸನೆ: ಭಾರತೀಯರ ಜತೆ ಪಾಕ್ ಮಾಜಿ ಕ್ರಿಕೆಟಿಗ

former indian and pak players caught on camera in alleged spot fixing

ಟಿ-20 ಟೂರ್ನಿಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡುವ ಮಾತುಕತೆ ನಡೆದ ಸ್ಥಳದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜಾ ಇರುವ ವಿಡಿಯೋವನ್ನು ಅಲ್ ಜಜೀರಾ ಸುದ್ದಿವಾಹಿನಿ ಪ್ರಸಾರ ಮಾಡಿದೆ.

ಮುಂಬೈನ ಮಾಜಿ ಕ್ರಿಕೆಟಿಗ ರಾಬಿನ್ ಮಾರಿಸ್ ಮತ್ತು ಹಸನ್ ರಾಜಾ ಒಂದೇ ಕೊಠಡಿಯಲ್ಲಿ ಕುಳಿತಿರುವ ವಿಡಿಯೋ ಇದೆ. ವಿಡಿಯೋದಲ್ಲಿ ಮಾರಿಸ್ ಮತ್ತು ಗುರುತು ಮರೆಮಾಚಿಕೊಂಡಿದ್ದ ವರದಿಗಾರನ ನಡುವೆ ಮಾತುಕತೆ ನಡೆಯುತ್ತದೆ. ಈ ಮಾತುಕತೆಯಲ್ಲಿ ಹಸನ್ ರಾಜಾ ಪಾಲ್ಗೊಂಡಿಲ್ಲ.

ರಾಜಾ ಮತ್ತು ಮಾರಿಸ್ ಇಬ್ಬರೂ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ 2007-08ರಲ್ಲಿ ಮುಂಬೈ ಚಾಂಪ್ಸ್ ತಂಡಕ್ಕೆ ಜತೆಯಾಗಿ ಆಡಿದ್ದರು.

ಈ ಆರೋಪಗಳಿಗೆ ಹಸನ್ ರಾಜಾ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮಾರಿಸ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೆ, ವಾಹಿನಿಯು ಜನರ ಮನರಂಜನೆಗಾಗಿ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ಆಡಿಷನ್‌ನಲ್ಲಿ ಭಾಗವಹಿಸಿ ನಟಿಸುವಂತೆ ಆಹ್ವಾನ ನೀಡಿತ್ತು ಎಂದು ಹೇಳಿದ್ದಾರೆ.

ವಾಹಿನಿ ನಡೆಸಿರುವ ತನಿಖಾ ವಿಡಿಯೋದಲ್ಲಿ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸುವುದಕ್ಕಾಗಿಯೇ ಟಿ 20 ಟೂರ್ನಿಯನ್ನು ಆಯೋಜಿಸಲು ಮಾರಿಸ್ ಮಾತನಾಡುವುದು ದಾಖಲಾಗಿದೆ.

ಈ ಟೂರ್ನಿಯಲ್ಲಿ ಯಾವುದೇ 'ಎ' ಗ್ರೇಡ್ ಆಟಗಾರರು ಭಾಗಿಯಾಗುವುದಿಲ್ಲ. ಆದರೆ, ಬಿ, ಸಿ ಮತ್ತು ಡಿ ಗ್ರೇಡ್ ಆಟಗಾರರನ್ನು ಕರೆತರುವುದಾಗಿ ಹೇಳಿದ್ದಾರೆ. ಅಂತಹ ಟೂರ್ನಿಗಳನ್ನು ದುಬೈ, ಹಾಂಗ್‌ಕಾಂಗ್‌, ಜಿಂಬಾಬ್ವೆ ಮತ್ತು ಶ್ರೀಲಂಕಾಗಳಲ್ಲಿ ನಡೆಸುವ ಕುರಿತು ಮಾತನಾಡಿದ್ದಾರೆ.

ಇನ್ನೊಂದು ಹೋಟೆಲ್ ಒಂದರಲ್ಲಿ ಗೌರವ್ ರಾಜ್‌ಕುಮಾರ್ ಎಂಬಾತ ಯುಎಇಯಲ್ಲಿ ನಾಲ್ಕು ತಂಡಗಳ 20-20 ಟೂರ್ನಿ ಆಯೋಜಿಸುವ ಬಗ್ಗೆ ಮಾತನಾಡಿದ್ದಾರೆ.

ಈ ವೇಳೆ ಅಲ್ಲಿ ಮಾರಿಸ್ ಕೂಡ ಹಾಜರಿದ್ದರು. ಇಂತಹ ಟೂರ್ನಿಗಳಲ್ಲಿ ಸ್ಪಾಟ್‌ ಫಿಕ್ಸಿಂಗ್ ಮಾಡಲು ಭ್ರಷ್ಟ ಆಟಗಾರ ಎಷ್ಟು ಹಣ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಮಾರಿಸ್ ನೀಡಿರುವುದು ಅಲ್ ಜಜೀರಾದ ವಿಡಿಯೋದಲ್ಲಿ ದಾಖಲಾಗಿದೆ.

2017ರಲ್ಲಿ ಭಾರತ-ಶ್ರೀಲಂಕಾ ಮತ್ತು 2016ರಲ್ಲಿ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯಗಳ ವೇಳೆ ಶ್ರೀಲಂಕಾದ ಗಾಲ್ಲೆಯಲ್ಲಿ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಪಿಚ್ ಸಿದ್ಧಪಡಿಸುವ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದು, ತನ್ನ ಸೂಚನೆಯಂತೆ ಪಿಚ್ ಸಿದ್ಧಪಡಿಸಲು ಹೇಳಿದ್ದ.

ಅದೇ ರೀತಿ ಈ ವರ್ಷ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆಯೂ ಗಾಲ್ಲೆ ಪಿಚ್‌ ಅನ್ನು ಬೆಟ್ಟಿಂಗ್‌ನ ಸೂಚನೆಯಂತೆ ಸಿದ್ಧಪಡಿಸಲು ಹೇಳಲಾಗಿದೆ ಎಂದು ಅಲ್ ಜಜೀರಾ ಆರೋಪಿಸಿದೆ.

ಹಸನ್ ರಾಜಾ 1996ರಲ್ಲಿ 14ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ ಆಡಿದ ಅತಿ ಕಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ಏಳು ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿರುವ ಹಸನ್, 2005ರ ಬಳಿಕ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ.

Story first published: Sunday, May 27, 2018, 15:38 [IST]
Other articles published on May 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+