T20 World Cup 2022: ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಎಂದ ಭಾರತದ ಮಾಜಿ ಕ್ರಿಕೆಟಿಗ

ನವೆಂಬರ್ 13ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022ರ ಫೈನಲ್‌ನಲ್ಲಿ ಪಾಕಿಸ್ತಾನ ಇಂಗ್ಲೆಂಡ್ ಸೆಣೆಸಲಿವೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಬೆಂಬಲಿಸುವುದಾಗಿ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಹೇಳಿದ್ದಾರೆ.
ನವೆಂಬರ್ 9ರಂದು ಸಿಡ್ನಿಯಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ಫೈನಲ್‌ಗೆ ಪ್ರವೇಶ ಪಡೆಯಿತು. 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಅಡಿಲೇಡ್ ಓವಲ್‌ನಲ್ಲಿ 10 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.
ಸ್ಟಾರ್ ಸ್ಪೋರ್ಟ್ ವಾಹಿನಿಯಲ್ಲಿ ಫೈನಲ್ ಪಂದ್ಯಕ್ಕೆ ಮುನ್ನ, ಪಂದ್ಯದ ಬಗ್ಗೆ ವಿಶ್ಲೇಷಣೆ ಮಾಡುವಾಗ ಸಂಜಯ್ ಬಂಗಾರ್ ತಾವು ಪಾಕಿಸ್ತಾನ ತಂಡಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
"ನಾನು ಪಾಕಿಸ್ತಾನ ತಂಡಕ್ಕೆ ಬೆಂಬಲ ನೀಡುತ್ತೇನೆ. ಪಾಕಿಸ್ತಾನದ ಬೌಲರ್‌ಗಳು ಈ ರೀತಿಯ ಪಂದ್ಯಾವಳಿಗಳನ್ನು ಗೆಲ್ಲಬೇಕು, ಆ ತಂಡದಲ್ಲಿ ನಾಲ್ವರು ಗುಣಮಟ್ಟದ ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ ಗಳನ್ನು ಹೊಂದಿದ್ದಾರೆ. ಅವರು ಎಡಗೈ ಸ್ಪಿನ್ನರ್ ಆಯ್ಕೆಯನ್ನು ಹೊಂದಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧ ಎಡಗೈ ಸ್ಪಿನ್ನರ್ ಅನ್ನು ಹೆಚ್ಚು ಬಳಸುವುದಿಲ್ಲ ಎಂದು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಶಾದಾಬ್ ಖಾನ್ ಉತ್ತಮ ಪ್ರದರ್ಶನ
ಶಾದಾಬ್ ಖಾನ್‌ರ ಆಲ್‌ರೌಂಡ್ ಕೌಶಲ್ಯ ಮತ್ತು ರಿವರ್ಸ್ ಸ್ವಿಂಗ್ ಸಾಧ್ಯತೆಯೂ ಪಾಕಿಸ್ತಾನಕ್ಕೆ ಲಾಭದಾಯಕಾವಿದೆ ಎಂದು ಸಂಜಯ್ ಬಂಗಾರ್ ಹೇಳಿದರು.
ಶಾದಾಬ್ ಖಾನ್ ಹೊಂದಿರುವ ಆಲ್‌ರೌಂಡರ್ ಸಾಮರ್ಥ್ಯಗಳು, ಅವರು ಹೊಂದಿರುವ ಬೌಲಿಂಗ್ ದಾಳಿ, ರಿವರ್ಸ್ ಸ್ವಿಂಗ್, ಕೆಲವು ಸಮಯದಲ್ಲಿ ಆಟದ ದಿಕ್ಕನ್ನು ಬದಲಾಯಿಸುವುದನ್ನು ನಾವು ಈಗಾಗಲೇ ನೋಡಿದ್ದೇವೆ, ಆದ್ದರಿಂದ, ಫೈನಲ್‌ನಲ್ಲಿ ಇಂಗ್ಲೆಂಡ್ ತಂಡಕ್ಕಿಂತ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿದೆ" ಎಂದು ಅವರು ಹೇಳಿದ್ದಾರೆ.
ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪರವಾಗಿ ಶಾದಾಬ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 6 ಪಂದ್ಯಗಳಲ್ಲಿ 6.59 ಎಕಾನಮಿಯಲ್ಲಿ 10 ವಿಕೆಟ್ ಪಡೆದಿದ್ದಾರೆ, 177.27ರ ಸ್ಟ್ರೈಕ್ ರೇಟ್‌ನಲ್ಲಿ 78 ರನ್ ಗಳಿಸಿದ್ದಾರೆ.

ಎರಡೂ ತಂಡಗಳು ಉತ್ತಮ ಬ್ಯಾಟಿಂಗ್
ಎರಡೂ ತಂಡಗಳು ಸರಿಯಾದ ಸಮಯದಲ್ಲಿ ಬ್ಯಾಟಿಂಗ್‌ನಲ್ಲಿ ತಮ್ಮ ಲಯ ಕಂಡುಕೊಂಡಿವೆ ಎಂದು ಸಂಜಯ್ ಬಂಗಾರ್ ಹೇಲಿದ್ದಾರೆ. ಸೆಮಫೈನಲ್‌ನಲ್ಲಿ ಪಾಕಿಸ್ತಾನದ ಆರಂಭಿಕರಾದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ತಮ್ಮ ಫಾರ್ಮ್ ಕಂಡುಕೊಂಡರು. ಇಂಗ್ಲೆಂಡ್ ಆರಂಭಿಕರು ಕೂಡ ಭಾರತದ ವಿರುದ್ಧ ಅಜೇಯ ಆಟವಾಡಿದರು.
ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಫಾರ್ಮ್ ಕಂಡುಕೊಂಡಿದ್ದಾರೆ. ಮೊಹಮ್ಮದ್ ಹ್ಯಾರಿಸ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ಪಾಕಿಸ್ತಾನದ ಬ್ಯಾಟಿಂಗ್ ಉತ್ತಮವಾಗಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.

ಮೊಹಮ್ಮದ್ ಹ್ಯಾರಿಸ್ ಉತ್ತಮ ಪ್ರದರ್ಶನ
ಮೊಹಮ್ಮದ್ ಹ್ಯಾರಿಸ್ ಉತ್ತಮ ಪ್ರದರ್ಶನ ನೀಡುವ ಮೂಲಕ ಪಾಕಿಸ್ತಾನದ ವಿಶ್ವಾಸ ಹೆಚ್ಚಾಗಿದೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಒತ್ತಡದ ಸನ್ನಿವೇಶದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ದೊಡ್ಡ ಸವಾಲನ್ನು ಸ್ವೀಕರಿಸಿ ಅದನ್ನು ನಿಭಾಯಿಸಿದರೆ ನಿಮ್ಮ ವಿಶ್ವಾಸ ಹೆಚ್ಚಾಗುವುದು ಸಹಜ ಎಂದು ಅವರು ಹೇಳಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುವ ಹ್ಯಾರಿಸ್ ಪ್ರಭಾವಶಾಲಿ ಬ್ಯಾಟರ್, ಅವರು ಆಡಿದ ಮೂರು ಪಂದ್ಯಗಳಲ್ಲಿ 161.81 ಸ್ಟ್ರೈಕ್ ರೇಟ್‌ನಲ್ಲಿ 89 ರನ್ ಗಳಿಸಿದ್ದಾರೆ. ಈ ವಿಶ್ವಕಪ್‌ನಲ್ಲಿ ಪ್ರತಿ ಓವರ್‌ಗೆ ಎಂಟು ರನ್‌ಗಳಿಗಿಂತ ಹೆಚ್ಚು ಸರಾಸರಿ ಗಳಿಸಿದ ಪಾಕಿಸ್ತಾನದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications