ಕಾಮೆಂಟರಿ ಮಧ್ಯೆ ಡಾ. ರಾಜ್ ಹಾಡು ಹಾಡಿದ ವೆಂಕಟೇಶ್ ಪ್ರಸಾದ್-ವಿಡಿಯೋ

ಬೆಂಗಳೂರು, ಮೇ 10: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ವೆಂಕಟೇಶ್ ಪ್ರಸಾದ್ ಐಪಿಎಲ್ ಕಾಮೆಂಟರಿ ಮಧ್ಯೆ ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಹಾಡಿರುವ ಹಾಡು ಹಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೆಬಲ್ ಸ್ಟಾರ್ ಅಂಬರೀಶ್-ಮಾಲಾಶ್ರಿ ಅಭಿನಯದ 'ಹೃದಯ ಹಾಡಿತು' ಕನ್ನಡ ಸಿನಿಮಾದಲ್ಲಿ, ಗಾನ ಗಂಧರ್ವ ರಾಜ್‌ಕುಮಾರ್ ಕಂಠದಲ್ಲಿರುವ 'ನಲಿಯುತಾ.. ಹೃದಯ ಹಾಡನು ಹಾಡಿದೆ..' ಹಾಡನ್ನು ಪ್ರಸಾದ್ ಕಾಮೆಂಟರಿ ಮಧ್ಯೆ ಹಾಡಿದ್ದರು. ಈ ವಿಡಿಯೋವನ್ನು ಕರ್ನಾಟಕದ ಇನ್ನೊಬ್ಬ ಕ್ರಿಕೆಟಿಗ ವಿಜಯ್ ಭಾರಧ್ವಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಈ ವಿಡಿಯೋವನ್ನು ಮೇ 8ರಂದು ಟ್ವಿಟರ್‌ನಲ್ಲಿ ಹಾಕಿಕೊಳ್ಳಲಾಗಿದೆ. ಅಂದರೆ ಆ ದಿನ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ತಂಡಗಳು ಕಾದಾಡಿದ್ದವು. ಇದರಲ್ಲಿ ಡೆಲ್ಲಿ 2 ವಿಕೆಟ್‌ಗಳಿಂದ ಗೆದ್ದಿತ್ತು.
Story first published: Friday, May 10, 2019, 22:54 [IST]
Other articles published on May 10, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications