ಐಪಿಎಲ್ ಬೆಟ್ಟಿಂಗ್: ಮಹಿಳಾ ಕ್ರಿಕೆಟ್ ಮಾಜಿ ಕೋಚ್ ಅರೋತೆ ಅರೆಸ್ಟ್!

ನವದೆಹಲಿ, ಏಪ್ರಿಲ್ 2: ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕೋಚ್ ತುಷಾರ್ ಅರೋತೆ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ಆರೋಪದ ಮೇಲೆ ಬಂಧಿಸಲಾಗಿದೆ. ಮಂಗಳವಾರ (ಏಪ್ರಿಲ್ 2) ಅರೋತೆ ಅವರನ್ನು ವಡೋದರಾದಲ್ಲಿ ಬಂಧಿಸಲಾಗಿದೆ.
ಐಪಿಎಲ್ 2019 ಮೈಖೇಲ್ ಕನ್ನಡ 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)
'ಕೆಫೆಯೊಂದಕ್ಕೆ ದಾಳಿ ನಡೆಸಿ ತುಷಾರ್ ಅರೋತೆ ಸೇರಿ ಒಟ್ಟು 18 ಮಂದಿಯನ್ನು ನಾವು ಬಂಧಿಸಿದ್ದೇವೆ. ಅವರ ಬಳಿಯಿದ್ದ ಮೊಬೈಲ್ ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ' ಎಂದು ವಡೋದರಾ ಕ್ರೈಂ ಬ್ರಾಂಚಿನ ಡಿಸಿಪಿ ಜೆಎಸ್ ಜಡೇಜಾ ಎಎನ್‌ಐಗೆ ತಿಳಿಸಿದ್ದಾರೆ.
'ಇದಕ್ಕೂ ಮೊದಲು ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡ ಆರೋಪದಡಿಯಲ್ಲಿ ಜೈಪರ್‌ನಲ್ಲಿ ಒಟ್ಟು ಹದಿನೈದು ಮಂದಿಯನ್ನು ಬಂಧಿಸಲಾಗಿದೆ' ಎಂದು ಜೆಎಸ್ ಜಡೇಜಾ ಮಂಗಳವಾರ ಮಾಹಿತಿ ನೀಡಿದ್ದಾರೆ.
ಸೋಮವಾರ (ಏಪ್ರಿಲ್ 1) ಪಂಜಾಬ್‌ನ ಮೊಹಾಲಿಯಲ್ಲಿ ನಡೆದ ಪಂಜಾಬ್ ಮತ್ತು ಡೆಲ್ಲಿ ನಡುವಿನ ಪಂದ್ಯದ ವೇಳೆಯೂ ಅಜ್ಮೀರ್ ರಸ್ತೆಯ 2 ಅಪಾರ್ಟ್‌ಮೆಂಟ್‌ಗಳಲ್ಲಿ ದಾಳಿ ನಡೆಸಿರುವ ಬಗ್ಗೆ ಜೈಪುರ್ ಪೊಲೀಸ್ ಕಮೀಷನರ್ ಆನಂದ್ ಕುಮಾರ್ ಮಾಹಿತಿ ಒದಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications