SM Krishna: ಟೆನಿಸ್ ಎಸ್‌ಎಂ ಕೃಷ್ಣಾಗೆ ಅಚ್ಚುಮೆಚ್ಚು
ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ತಿರುಗಾಡುತ್ತಿರುವ ಈಗಿನ ರಾಜಕಾರಣಿಗಳಿಗ ಬಾಯಲ್ಲಿ ಈ ಹೆಸರು ಬರಲು ಕಾರಣ ಆ ವ್ಯಕ್ತಿ. ಅವರು ನಿಜಕ್ಕೂ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ ಒಬ್ಬ ಶ್ರೇಷ್ಠ ರಾಜಕಾರಣಿ. ತಾವು ತೆಗೆದುಕೊಂಡ ಉತ್ತಮ ನಿರ್ಧಾರದಿಂದ ಬೆಂಗಳೂರಿನ ಚಿತ್ರಣವನ್ನೇ ಬದಲಿಸಿದ ಲೀಡರ್. ಹಲವು ಸಮಸ್ಯೆಗಳ ಮಧ್ಯೆಯೂ ತಮ್ಮ ಆಡಳಿತಾತ್ಮಕ ನಡೆ ಹಾಗೂ ದಿಟ್ಟ ನಿಲುವುಗಳಿಂದ ದೇಶದ ಗಮನ ಸೆಳೆದವರು. ತಮ್ಮ ಬಿಡುವಿಲ್ಲದ ವೇಳೆಯಲ್ಲೂ ಇವರಿಗೆ ಕ್ರೀಡೆಯ ಮೇಲೆ ಅಪಾರ ಪ್ರೀತಿ ಇತ್ತು. ತಮ್ಮ ಬ್ಯೂಸಿ ಶೆಡ್ಯೂಲ್‌ನಲ್ಲಿ ರಾಕೆಟ್ ಹಿಡಿದು, ಪಂದ್ಯವನ್ನು ಆಡುವುದು ಹಾಗೂ ನೋಡುವುದು ಎಂದರೆ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣಾ ಅವರಿಗೆ ಅಚ್ಚು ಮೆಚ್ಚು.
ಕರ್ನಾಟಕ ಕಂಡ ದಿಟ್ಟ ರಾಜಕಾರಣಿಗಳಲ್ಲಿ ಒಬ್ಬರಾದ ಎಸ್‌ಎಂ ಕೃಷ್ಣಾ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಎಂದರೆ ಅಷ್ಟಾಗಿ ಜನರಿಗೆ ಪರಿಚಯ ಇರಲಿಕ್ಕಿಲ್ಲ. ಆದರೆ ಅವರ ಎಸ್‌ಎಂ ಕೃಷ್ಣ ಎಂದು ಹೇಳಿದರೆ ಸಾಕು ಎಲ್ಲರಿಗೂ ಚಿರಪರಿಚಿತರು. ಇವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮುಂಜಾನೆ ನಿಧನರಾಗಿದ್ದಾರೆ. ಶ್ವಾಸಕೋಶದಿಂದ ಬಳಲುತ್ತಿದ್ದ ಎಸ್‌ಎಂ ಕೃಷ್ಣ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಎಸ್‌ಎಂ ಕೃಷ್ಣಾ ಅವರಿಗೆ ಟೆನಿಸ್ ಮೇಲೆ ಎಷ್ಟು ಪ್ರೀತಿ ಇತ್ತು ಎಂಬುದನ್ನು ಅವರ ಸಂದರ್ಶನಗಳನ್ನು ನೋಡಿದವರಿಗೆ ತಿಳಿಯುತ್ತದೆ. ಅವರ ಸಂದರ್ಶನಗಳಲ್ಲಿ ಒಂದು ಪಾರ್ಟ್ ಸಂದರ್ಶಕರು ಟೆನಿಸ್ ಮೇಲಿನ ಪ್ರೀತಿಗೆ ಮೀಸಲು ಇಡುತ್ತಿದ್ದರು. ಎಸ್‌ಎಂ ಕೃಷ್ಣಾ ಹಾಗೂ ಟೆನಿಸ್ ಆಟದ ಮೇಲೆ ಇರುವ ಪ್ರೀತಿ ಅಂತಹದ್ದು. ಸಮಯ ಸಿಕ್ಕಾಗಲೆಲ್ಲಾ ಇವರು ರಾಕೆಟ್ ಹಿಡಿದು ಟೆನಿಸ್ ಅಂಗಳಕ್ಕೆ ಇಳಿದು ಅಭಿಮಾನಿಗಳನ್ನು ರಂಜಿಸಿದ್ದನ್ನು ಯಾರು ನೆನಪು ಹಾರುವಂತಿಲ್ಲ.
ಬಾಲ್ಯದಿಂದಲೂ ಕೃಷ್ಣ ಅವರಿಗೆ ಕ್ರೀಡೆ ಎಂದರೆ ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಫುಟ್‌ಬಾಲ್, ವಾಲಿಬಾಲ್ ಆಡುತ್ತಿದ್ದರು. ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದ ಬಳಿಕ ಟೆನ್ನಿಸ್ ಪ್ರೀತಿ ಬೆಳೆಸಿಕೊಂಡರು. ಇವರು ತಮ್ಮ ರಾಜಕೀಯ ಬಿಡುವಿನ ವೇಳೆಯಲ್ಲೂ ಟೆನಿಸ್ ಆಡಿ ಖುಷಿ ಪಡುತ್ತಿದ್ದರು.
ನೆಚ್ಚಿನ ಟೆನಿಸ್ ಆಟಗಾರ ಯಾರು?
ವಿದೇಶದಲ್ಲಿ ವ್ಯಾಸಂಗ ಮಾಡುವಾಗ ಯುಎಸ್ ಓಪನ್ ನೋಡುವುದು ಕೃಷ್ಣಾ ಅವರಿಗೆ ಇಷ್ಟ. ಹಲವು ವಿಬಂಬಲ್ಡನ್ ಟೆನಿಸ್ ಮ್ಯಾಚ್‌ಗಳನ್ನು ನೋಡಿ ಆನಂದಿಸಿದ್ದರು ಕೃಷ್ಣಾ. ಮಾಜಿ ಸಿಎಂ ಅವರಿಗೆ ವಿಶ್ವ ವಿಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡೆರರ್ ಅಂದರೆ ಅಚ್ಚು ಮೆಚ್ಚು. ಇವರ ಆಟ ನೋಡಲು ಅಟ್ರ್ಯಾಕ್ಟಿ ಆಗಿರುತ್ತದೆ ಎಂದು ಎಸ್‌ಎಂ ಕೃಷ್ಣ ಹಲವು ಬಾರಿ ಹೇಳಿಕೊಂಡಿದ್ದಾರೆ. ಇನ್ನು ಒಂದೇ ವರ್ಷ ನಡೆಯುವ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳನ್ನು ಒಂದು ವರ್ಷ ನೋಡಿ ಕೃಷ್ಣ ಆನಂದಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications