Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ಡೇನಿಯಲ್ ವೆಟ್ಟೋರಿ ನೇಮಕ

Daniel vettori

ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನ್ಯೂಜಿಲೆಂಡ್‌ನ ಮಾಜಿ ನಾಯಕ ಹಾಗೂ ಆಲ್‌ರೌಂಡರ್ ಡೇನಿಯಲ್ ವೆಟ್ಟೋರಿ ನೇಮಕಗೊಂಡಿದ್ದಾರೆ. ಈ ಮೂಲಕ ನ್ಯೂಜಿಲೆಂಡ್‌ನ ಮತ್ತೊಬ್ಬ ದಿಗ್ಗಜ ಕ್ರಿಕೆಟಿಗ ಪ್ರತಿಷ್ಠಿತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ಟೆಸ್ಟ್‌ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡರು. ಇದ್ರ ಬೆನ್ನಲ್ಲೇ ವೆಟ್ಟೋರಿಯನ್ನ ಕ್ರಿಕೆಟ್ ಆಸ್ಟ್ರೇಲಿಯಾ ಕೋಚ್ ಆಗಿ ನೇಮಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್‌ನ ಲೆಜೆಂಡ್ ಕ್ರಿಕೆಟರ್ ಡೇನಿಯಲ್ ವೆಟ್ಟೋರಿ

ನ್ಯೂಜಿಲೆಂಡ್‌ನ ಲೆಜೆಂಡ್ ಕ್ರಿಕೆಟರ್ ಡೇನಿಯಲ್ ವೆಟ್ಟೋರಿ

ವೆಟ್ಟೋರಿ 18 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 113 ಟೆಸ್ಟ್ ಮತ್ತು 295 ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಹಾಯಕ ಸಿಬ್ಬಂದಿಯಾಗಿ ಹಲವು ವರ್ಷ ಕೆಲಸ ಮಾಡಿರುವ ವೆಟ್ಟೋರಿಯು, ಹೆಡ್ ಕೋಚ್ ಮೆಕ್‌ಡೊನಾಲ್ಡ್‌ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಹಾಯಕ ಸಿಬ್ಬಂದಿ ಆಗಿದ್ದ ವೆಟ್ಟೋರಿ ಅವರ ನೇಮಕಾತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನಂಬಲಾಗಿದೆ.

"ಇದು ಅತ್ಯಂತ ಬಲಿಷ್ಠ ಮತ್ತು ಸಂಘಟಿತ ಗುಂಪಾಗಿದ್ದು, ಮುಂದೆ ಬಹಳ ಲಾಭದಾಯಕ ಮತ್ತು ಆಶಾದಾಯಕವಾಗಿ ಯಶಸ್ವಿ ಅವಧಿಯನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿದೆ" ಎಂದು ವೆಟ್ಟೋರಿ ಆಸ್ಟ್ರೇಲಿಯಾ ತಂಡದ ಬಗ್ಗೆ ಹೇಳಿದರು.

IPL 2022 Playoffs Rules : ಮಳೆಯಿಂದ ಪಂದ್ಯ ರದ್ದಾದರೆ ಆರ್‌ಸಿಬಿ ಟ್ರೋಫಿ ಕನಸು ಭಗ್ನ; ಪ್ಲೇಆಫ್ ಹೊಸ ನಿಯಮ ಏನು ಹೇಳುತ್ತೆ?

ಆಂಡ್ರ್ಯೂ ಬೊರೊವೆಕ್ ಮತ್ತೊಬ್ಬ ಅಸಿಸ್ಟೆಂಟ್ ಕೋಚ್

ಆಂಡ್ರ್ಯೂ ಬೊರೊವೆಕ್ ಮತ್ತೊಬ್ಬ ಅಸಿಸ್ಟೆಂಟ್ ಕೋಚ್

ಕಳೆದ ವರ್ಷ ಆಯ್ದ ಪ್ರವಾಸಗಳಲ್ಲಿ ತಂಡದೊಂದಿಗೆ ಕೆಲಸ ಮಾಡಿದ ವಿಕ್ಟೋರಿಯಾದ ಆಂಡ್ರೆ ಬೊರೊವೆಕ್ ಅವರನ್ನು ಸಹ ಸಹಾಯಕ ಕೋಚ್ ಆಗಿ ಆಯ್ಕೆ ಮಾಡಲಾಗಿದೆ ಮತ್ತು ಮುಂದಿನ ತಿಂಗಳು ಶ್ರೀಲಂಕಾದಲ್ಲಿ ರಾಷ್ಟ್ರೀಯ ತಂಡದ ಎರಡು-ಟೆಸ್ಟ್ ಸರಣಿಗೆ ಮುಂಚಿತವಾಗಿ ಆಸ್ಟ್ರೇಲಿಯಾ ಎ ತಂಡಕ್ಕೆ ತರಬೇತುದಾರರಾಗಿರುತ್ತಾರೆ.

ಆರ್‌ಸಿಬಿಗೆ ಮತ್ತೆ ಬರ್ತಿದ್ದೇನೆ ಎಂದ ಎಬಿಡಿ: ಯಾವ ಪಾತ್ರ ಎಂಬುದರ ಕುರಿತು ಸುಳಿವು ಕೊಟ್ಟ ಮಿ.360!

Harshal Patel ನಾಳಿನ ಪಂದ್ಯವನ್ನು ಆಡ್ತಾರಾ? | OneIndia Kannada
ಆಂಡ್ರ್ಯೂ ಮೆಕ್‌ಡೊನಾಲ್ಡ್‌ ಆಸೀಸ್ ಹೆಡ್‌ ಕೋಚ್

ಆಂಡ್ರ್ಯೂ ಮೆಕ್‌ಡೊನಾಲ್ಡ್‌ ಆಸೀಸ್ ಹೆಡ್‌ ಕೋಚ್

ಆಂಡ್ರ್ಯೂ ಬ್ಯಾರಿ ಮೆಕ್‌ಡೊನಾಲ್ಡ್ ಅವರು ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಮತ್ತು ವಿಕ್ಟೋರಿಯಾ ಮತ್ತು ದಕ್ಷಿಣ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳಿಗಾಗಿ ಆಡಿದ ಮಾಜಿ ಕ್ರಿಕೆಟಿಗರಾಗಿದ್ದಾರೆ. ಅವರು ಪ್ರಸ್ತುತ ವಿಕ್ಟೋರಿಯಾದ ಗೀಲಾಂಗ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ 3 ಜನವರಿ 2009 ರಂದು ಸಿಡ್ನಿಯಲ್ಲಿ ತಮ್ಮ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.

ಶ್ರೀಲಂಕಾ ಮತ್ತು ಭಾರತಕ್ಕೆ ಪ್ರವಾಸಗಳು ಮುಂದಿನ ವರ್ಷಗಳಲ್ಲಿ ಸಾಲು ಸಾಲು ಇರುವುದರಿಂದ , ಆಸ್ಟ್ರೇಲಿಯಾವು ಮುಂದಿನ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಉಪಖಂಡದ ರಾಷ್ಟ್ರಗಳೊಂದಿಗೆ ಪಂದ್ಯಗಳನ್ನಾಡುವ ವೇಳಾಪಟ್ಟಿಯನ್ನು ಹೊಂದಿದೆ. ಆ್ಯರೊನ್ ಫಿಂಚ್ ನೇತೃತ್ವದ ತಂಡವು ಈ ವರ್ಷದ ಅಕ್ಟೋಬರ್‌ನಲ್ಲಿ ತಮ್ಮ ತವರು ಮೈದಾನದಲ್ಲಿ ನಡೆಯುವ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.

Story first published: Tuesday, May 24, 2022, 19:14 [IST]
Other articles published on May 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+