ಪಾಕ್ ಮಾಜಿ ನಾಯಕಿ ಆಜಾದ್ ಕಾಶ್ಮೀರ್ ಹೇಳಿಕೆ ವಿವಾದ
ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಮೊದಲಿನಂತೆ ಇಲ್ಲ. ಇತ್ತೀಚಿಗೆ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲೂ ಭಾರತ, ಪಾಕ್ ಆಟಗಾರರು ಮೈದಾನಕ್ಕೆ ಇಳಿದಾಗ ಇದರ ತಾಜಾ ಉದಾಹರಣೆಯನ್ನು ನೋಡಿದೆವು. ಆಟಗಾರರು ಹಸ್ತಲಾಘವ ಮಾಡದೆ ತಮ್ಮ ತಮ್ಮ ಡ್ರೆಸ್ಸಿಂಗ್ ರೂಮ್‌ನತ್ತ ಪ್ರಯಾಣ ಬೆಳೆಸಿದರು. ಈ ವಿಷಯ ಇನ್ನು ಹಸಿಯಾಗಿರುವಾಗಲೇ ಪಾಕ್ ತಂಡದ ಮಾಜಿ ನಾಯಕಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಆ ವಿವಾದ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಭಾನುವಾರ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿ ಆದವು. ಈ ವೇಳೆ ಪಾಕಿಸ್ತಾನ ತಂಡದ ನಾಯಕಿ ನೀಡಿದ ಆ ಒಂದು ಹೇಳಿಕೆ ಈಗ ವಿವಾದದ ಕೇಂದ್ರ ಬಿಂದು ಆಗಿದೆ. ಈ ಹೇಳಿಕೆಗೆ ಈ ಭಾರೀ ಪ್ರತಿ ರೋಧ ವ್ಯಕ್ತವಾಗಿದೆ. ಅಲ್ಲದೆ ಐಸಿಸಿ ನಿಯಮಗಳ ಅನುಸಾರ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಖಂಡಿಸುತ್ತಿದೆ. ಇದೇ ವೇಳೆ ಹಲವರು ಪಾಕ್ ತಂಡದ ಮಾಜಿ ನಾಯಕಿ ಸನಾ ಮಿರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಬಾಂಗ್ಲಾ ಹಾಗೂ ಪಾಕ್ ನಡುವಣ ಪಂದ್ಯ ಕೊಲಂಬೊದ ಪ್ರೇಮದಾಸ ಅಂಗಳದಲ್ಲಿ ನಡೆದಿತ್ತು. ಈ ವೇಳೆ ನಟಾಲಿಯಾ ಪರ್ವೇಜ್ ಬ್ಯಾಟಿಂಗ್ ಮಾಡುವಾಗ ಸಾರಾ ಇವರು ಆಜಾದ್ ಕಾಶ್ಮೀರನವರು ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಈ ಹೇಳಿಕೆ ಈಗ ಬಹುದೊಡ್ಡ ವಿವಾದವನ್ನು ಸೃಷ್ಟಿಸಿದೆ. ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ಎಂದು ಕರೆಯುತ್ತದೆ. ಆದರೆ ಪಾಕಿಸ್ತಾನ ಈ ಭಾಗವನ್ನು ಆಜಾದ್ ಕಾಶ್ಮೀರ್ ಎಂದು ಕರೆಯುತ್ತದೆ. ಪಿಒಕೆಯಲ್ಲಿ ಜನ ಜೀವನ ನಡೆಸುವುದು ಕಷ್ಟವಾಗಿದೆ. ಇಲ್ಲಿನ ಜನರ ನಿರಂತರವಾಗಿ ಪಾಕ್ ವಿರುದ್ಧ ಧ್ವನಿ ಎತ್ತುತ್ತಿದ್ದು, ಪ್ರತಿಭಟನೆಯನ್ನು ಸಹ ಮಾಡುತ್ತಿದ್ದಾರೆ.
ಸಾನಾ ವಿರುದ್ಧ ಕಿಡಿ
ಸಾನಾ ಐಸಿಸಿ ನಿಯಮಗಳನ್ನು ಮೀರಿದ್ದರಿಂದ ಇವರ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಈ ಹೇಳಿಕೆ ಸಾನಾ ಅವರ ಬಾಯ್‌ತಪ್ಪಿನಿಂದ ಬಂದಿದೆಯೋ ಅಥವಾ ಉದ್ದೇಶಪೂರ್ವಕವಾಗಿ ಹೇಳಿದ್ದಾರೋ ಎಂಬುದರ ಬಗ್ಗೆ ತಿಳಿದು ಬರಬೇಕಿದೆ. ಸಾಮಾಜಿಕ ತಾಣದಲ್ಲಿ ಜನರು ಸಾನಾ ಅವರ ಈ ಹೇಳಿಕೆಗೆ ಪರ ಹಾಗೂ ವಿರೋಧ ಚರ್ಚೆಗಳನ್ನು ಆರಂಭಿಸಿದ್ದಾರೆ. ಕೆಲವು ಜನರು ಸಾನಾ ರಾಜಕೀಯ ವಿಷಯವನ್ನು ಆಟಕ್ಕೆ ಎಳೆದಿದ್ದರಿಂದ ಇವರಿಗೆ ಶೀಕ್ಷೆ ಆಗಬೇಕು ಎಂದು ತಿಳಿಸಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ಕಾದಾಟವನ್ನು ನಡೆಸಲಿವೆ. ಈ ವೇಳೆ ಭಾರತ ಆತ್ಮ ವಿಶ್ವಾಸದಿಂದ ಕಣಕ್ಕೆ ಇಳಿದರೆ, ಪಾಕ್ ತಾನಾಡಿದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿದ್ದು, ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications