Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ನೂತನ ಅಧ್ಯಕ್ಷರಾದ ಪಾಕಿಸ್ತಾನ ಜಹೀರ್ ಅಬ್ಬಾಸ್

ಬಾರ್ಬಡೊಸ್, ಜೂ.25: ಪಾಕಿಸ್ತಾನದ ಮಾಜಿ ನಾಯಕ ಜಹೀರ್ ಅಬ್ಬಾಸ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಬಾರ್ಬಡೋಸ್ ನಲ್ಲಿ ನಡೆದ ವಾರ್ಷಿಕ ಸಭೆಯ ಮೂರನೇ ದಿನ ಈ ಪ್ರಕಟಣೆ ಹೊರಡಿಸಲಾಗಿದೆ.

ಬುಧವಾರ(ಜೂ.24) ದಿಂದ ಒಂದು ವರ್ಷ ಕಾಲದ ಅವಧಿಗೆ ಜಹೀರ್ ಅವರು ಅಧಿಕಾರ ನಡೆಸಲಿದ್ದಾರೆ. ಐಸಿಸಿ ಬೋರ್ಡ್ ಹಾಗೂ ಕೌನ್ಸಿಲ್ ಸದಸ್ಯರಿಗೆ ಜಹೀರ್ ಧನ್ಯವಾದ ಅರ್ಪಿಸಿದ್ದಾರೆ. ಐಸಿಸಿ ವಿಶ್ವಕಪ್ 2015 ಟ್ರೋಫಿಯನ್ನು ಮಾ.29ರಂದು ಆಸ್ಟ್ರೇಲಿಯಾಕ್ಕೆ ನೀಡುವಾಗ ವಿವಾದಕ್ಕೆ ಕಾರಣರಾಗಿದ್ದ ಮುಸ್ತಫಾ ಕಮಾಲ್ ಅವರ ಸ್ಥಾನೆಕ್ಕೆ ಜಹೀರ್ ನೇಮಕಗೊಂಡಿದ್ದಾರೆ.

Zaheer Abbas

ಐಸಿಸಿ ಚೇರ್ಮನ್ ಎನ್ ಶ್ರೀನಿವಾಸನ್ ಅವರು ಜಹೀರ್ ಅವರನ್ನು ಅಭಿನಂದಿಸಿದ್ದಾರೆ. ಪ್ರಥಮದರ್ಜೆಯಲ್ಲಿ 7,500ಕ್ಕೂ ಅಧಿಕ ರನ್ ಗಳಿಸಿರುವ ಜಹೀರ್ ಅವರು ಸಮರ್ಥ ಆಟಗಾರರಾಗಿದ್ದರು ಎಂದಿದ್ದಾರೆ.

ಜಹೀರ್ ಅವರು 78 ಟೆಸ್ಟ್ ಪಂದ್ಯ ಹಾಗೂ 62 ಏಕದಿನ ಪಂದ್ಯಗಳನ್ನು 1969 ರಿಂದ 1985 ಅವಧಿಯಲ್ಲಿ 5,062 ರನ್ ಹಾಗೂ 2,572 ರನ್ ಗಳಿಸಿದ್ದಾರೆ. 1975,1979 ಹಾಗೂ 1983 ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. 14 ಟೆಸ್ಟ್ ಹಾಗೂ 13 ಏಕದಿನ ಪಂದ್ಯಗಳಿಗೆ ಪಾಕಿಸ್ತಾನದ ನಾಯಕರಾಗಿದ್ದರು. ಪ್ರಥಮದರ್ಜೆ ಕ್ರಿಕೆಟ್ ನಲ್ಲಿ 108 ಶತಕಗಳನ್ನು ದಾಖಲಿಸಿರುವ ಜಹೀರ್ ಈ ಸಾಧನೆ ಮಾಡಿರುವ ಏಷ್ಯಾದ ಏಕೈಕ ಕ್ರಿಕೆಟರ್ ಆಗಿದ್ದಾರೆ. ಪಾಕಿಸ್ತಾನದ ದಿಗ್ಗಜ ಒಟ್ಟಾರೆ 22 ವರ್ಷದ ವೃತ್ತಿ ಬದುಕಿನಲ್ಲಿ 34,843ರನ್ ಕಲೆ ಹಾಕಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+