'ಯಾರ್ಕ್‌ಶೈರ್‌ ಕ್ರಿಕೆಟ್ ಕ್ಲಬ್‌ನಲ್ಲಿ ವರ್ಣಭೇದ ನೀತಿಗೆ ಒಳಗಾಗಿದ್ದೆ'

ಕರಾಚಿ: ಯಾರ್ಕ್‌ಶೈರ್ ಕ್ರಿಕೆಟ್ ಕ್ಲಬ್‌ನಲ್ಲಿದ್ದಾಗ ವರ್ಣಭೇದ ನೀತಿ ಎದುರಿಸಿದ್ದೆ ಎಂದು ಇಂಗ್ಲೆಂಡ್ ಅಂಡರ್-19 ತಂಡದ ಅಝೀಮ್ ರಫೀಕ್ ಆರೋಪಿಸಿದ ಎರಡು ದಿನಗಳ ಬಳಿಕ ತಾನೂ ಯಾರ್ಕ್‌ಶೈರ್‌ನಲ್ಲಿ ನಿಂದನೆಗೆ ಒಳಗಾಗಿದ್ದೆ ಎಂದು ಪಾಕಿಸ್ತಾನದ ಮಾಜಿ ವೇಗಿ ರಾಣಾ ನವೇದ್ ಉಲ್ ಹಸನ್ ಹೇಳಿದ್ದಾರೆ.

ಆತ ತನಗೆ ಹೋಲಿಕೆಯಿರುವ ಬ್ಯಾಟ್ಸ್‌ಮನ್: ಡಿವಿಲಿಯರ್ಸ್ ಹೇಳಿದ ಆ ಆರ್‌ಸಿಬಿ ಆಟಗಾರ ಯಾರು?

ವರ್ಣ ಭೇದ ನೀತಿಯ ವಿರುದ್ಧದ ಧ್ವನಿಯೆತ್ತಿರುವ ಅಝೀಮ್‌ಗೆ ತಾನು ಬೆಂಬಲಿಸುವುದಾಗಿ ನವೇದ್ ಉಲ್ ಹಸನ್ ತಿಳಿಸಿದ್ದಾರೆ. ಅಮೆರಿಕಾದಲ್ಲಿ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಕೊಲ್ಲಲ್ಪಟ್ಟ ಬಳಿಕ ವರ್ಣಭೇದ ನೀತಿಯ ವಿರುದ್ಧ ವಿಶ್ವ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಹೆಸರಿನಲ್ಲಿ ವರ್ಣಭೇದದ ವಿರುದ್ಧ ಪ್ರತಿಭಟನೆಯ ಕಿಡಿ ಹತ್ತಿಕೊಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಪಾಯಕಾರಿ ಆಟಗಾರರು, ವೇಳಾಪಟ್ಟಿ, ಮಾಹಿತಿ

ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಮಾತನಾಡಿದ ರಾಣಾ ನವೇದ್, ಯಾರ್ಕ್‌ಶೈರ್ ಅಭಿಮಾನಿಗಳು ನನ್ನ ವಿರುದ್ಧ ತಾರತಮ್ಯ ಮಾಡುತ್ತಿದ್ದರು. ಆದರೆ ಆಗ ಧ್ವನಿಯೆತ್ತಿದರೆ ಕ್ಲಬ್‌ನ ಒಪ್ಪಂದಕ್ಕೆ ತೊಂದರೆಯಾಗಬಹುದು ಎಂದು ಆಗ ಅದನ್ನು ಸಹಿಸಿಕೊಂಡಿದ್ದೆ ಎಂದು ವಿವರಿಸಿದ್ದಾರೆ.

ಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರ

'ನಾನು ಅಝೀಮ್ ಹೇಳಿಕೆಯನ್ನು ಸಂಪೂರ್ಣ ಬೆಂಬಲಿಸುತ್ತೇನೆ. ಇದೇ ತರ ಘಟನೆ ನನ್ನ ಬದುಕಿನಲ್ಲೂ ನಡೆದಿದೆ. ನಾನು ವಿದೇಶಿಗನಾಗಿದ್ದಿದ್ದರಿಂದ ನಾನು ಇದರ ಬಗ್ಗೆ ಮಾತನಾಡಲಿಲ್ಲ. ಇದು ತಾತ್ಕಾಲಿಕ ಅಂದುಕೊಂಡು ನಾನದನ್ನು ಸಹಿಸಿಕೊಂಡಿದ್ದೆ. ಆಟದ ಕಡೆ ಗಮನ ಹರಿಸುತ್ತಿದ್ದೆ. ಕ್ಲಬ್ ಜೊತೆಗಿನ ಒಪ್ಪಂದಕ್ಕೆ ಅಪಾಯ ತರಲು ನನಗೆ ಇಷ್ಟವಿರಲಿಲ್ಲ,' ಎಂದು 42ರ ಹರೆಯದ ರಾಣಾ ನವೇದ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, September 16, 2020, 16:12 [IST]
Other articles published on Sep 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X