ಕಾಮೆಂಟರಿ ನೀಡುತ್ತಿದ್ದ ಪಾಕ್ ಮಾಜಿ ನಾಯಕಿ ಸನಾಗೆ ಕೊರೊನಾ ಸೋಂಕು

ಇಸ್ಲಮಾಬಾದ್: ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮಿರ್‌ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಕ್ವಾಯ್ದ್-ಎ-ಅಝಾಮ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ವೇಳೆ ಕಾಮೆಂಟರಿ ನೀಡುತ್ತಿದ್ದ ಸನಾಗೆ ಕೋವಿಡ್-19 ಪಾಸಿಟಿವ್ ಬಂದಿದೆ.
ಕಳೆದ ವರ್ಷ ಸನಾ ಮಿರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಕ್ವಾಯ್ದ್-ಎ-ಅಝಾಮ್ ಟ್ರೋಫಿ ಫೈನಲ್ ವೇಳೆ ಸನಾ ಅವರಿಗೆ ಕೊರೊನಾ ಇರುವುದು ಪತ್ತೆಯಾದ ಬಳಿಕ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದ ತೆಗೆದು, ಐಸೊಲೇಶನ್‌ಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಸನಾ ಮಿರ್ ಜೊತೆ ಸಂಪರ್ಕದಲ್ಲಿದ್ದ ಇತರ ಕಾಮೆಂಟೇಟರ್‌ಗಳು ಕೂಡ ಕರಾಚಿಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ಶುಕ್ರವಾರ ಕರಾಚಿಯ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಸೆಂಟ್ರಲ್ ಪಂಜಾಬ್ ಮತ್ತು ಖೈಬರ್ ಫಖ್ತುಂಕ್ವಾ ಫೈನಲ್ ಪಂದ್ಯದ ವೇಳೆ ಮಿರ್‌ಗೆ ಕೊರೊನಾ ಪಾಸಿಟಿವ್ ಇದ್ದಿದ್ದು ಕಂಡುಬಂದಿತ್ತು.
34ರ ಹರೆಯದ ಸನಾ, ಒಟ್ಟು 226 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 2009ರಿಂದ 2017ರ ವರೆಗೆ ಒಟ್ಟು 137 ಪಂದ್ಯಗಳಿಗೆ ಸನಾ ನಾಯಕತ್ವ ವಹಿಸಿದ್ದರು. ಕ್ರಿಕೆಟ್‌ನಲ್ಲಿ ಒಟ್ಟು 15 ವರ್ಷಗಳ ವೃತ್ತಿ ಬದುಕನ್ನು ಮಿರ್ ಕಂಡಿದ್ದಾರೆ. ಏಷ್ಯಾನ್ ಗೇಮ್ಸ್ 2010 ಮತ್ತು 2014ರಲ್ಲಿ ಸನಾ ಪಾಕ್ ಪರ ಚಿನ್ನದ ಪದಕ ಗೆದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications