Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನಿಸ್ತಾನ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿದ RCB ಮಾಜಿ ಆಟಗಾರ

ಶನಿವಾರದಿಂದ ನ್ಯೂ ಚಂಡೀಗಢದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಏಕೈಕ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಗೂ ಮುನ್ನ ಟೀಮ್ ಇಂಡಿಯಾ ಪರ 2023ರಲ್ಲಿ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದ, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಕೆ.ಎಸ್. ಭರತ್ ಗುರುವಾರ (ಜೂನ್‌ 4) ಸಂಜೆ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಕೆ.ಎಸ್. ಭರತ್ ಅವರನ್ನು ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಟೀಮ್ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟರ್ ರಿಷಭ್‌ ಪಂತ್ ಕಾರು ಅಪಘಾತದಲ್ಲಿ ಗಾಯಕ್ಕೆ ತುತ್ತಾದಾಗ ತಂಡಕ್ಕೆ ಆಧಾರವಾದ ಆಟಗಾರ ಕೆಎಸ್‌ ಭರತ್. ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡ ನಂತರ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಕೆ.ಎಸ್. ಭರತ್‌ಗೆ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಅವಕಾಶ ನೀಡಲಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶ ಪಡೆದ ನಂತರ ಕೆ.ಎಸ್. ಭರತ್ ತಮ್ಮ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಪ್ರಭಾವ ಬೀರುವಲ್ಲಿ ವಿಫಲರಾದರು.

Former RCB Player

ಭರತ್ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಚೊಚ್ಚಲ ಪಂದ್ಯವನ್ನು ಆಡಿದರು. 2024ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಭರತ್ ಕೊನೆಯ ಬಾರಿಗೆ ಕಣಕ್ಕೆ ಇಳಿದಿದ್ದರು. ಆದರೆ ಅಲ್ಲಿಂದ ಅವರಿಗೆ ಅವಕಾಶಗಳು ಸಿಗುವುದು ಕಡಿಮೆ ಆದವು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುವುದು ಸೇರಿದಂತೆ, ಆದರೆ ಅವರು ಅದನ್ನು ಬಳಸಿಕೊಳ್ಳುವಲ್ಲಿ ಎಡವಿದರು.

ಭರತ್ ಸಾಧನೆ

32 ವರ್ಷದ ಶ್ರೀಕರ್ ಭರತ್ ಭಾರತ ತಂಡದ ಪರ ಏಳು ಟೆಸ್ಟ್‌ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಆಟಗಾರ. ಇವರು ಈ ವೇಳೆ 221 ರನ್‌ ಬಾರಿಸಿದ್ದಾರೆ. ಅಲ್ಲದೆ 18 ಕ್ಯಾಚ್‌, 1 ಸ್ಟಂಪ್‌ ಮಾಡಿದ್ದಾರೆ. ಇನ್ನು 113 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 36ರ ಸರಾಸರಿಯಲ್ಲಿ 6102 ರನ್‌ ಕಲೆ ಹಾಕಿದ್ದು, 11 ಶತಕ, 34 ಅರ್ಧಶತಕ ಬಾರಿಸಿದ್ದಾರೆ. ಇನ್ನು 83 ಲಿಸ್ಟ್‌ ಎ ಪಂದ್ಯದಲ್ಲಿ 2692 ರನ್‌ ಕಲೆ ಹಾಕಿದ್ದಾರೆ. 8 ಶತಕ, 10 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಕೆಎಸ್‌ ಭರತ್ ಐಪಿಎಲ್‌ನಲ್ಲಿ ಆಡಿ ಸೈ ಎನಿಸಿಕೊಂಡಿರುವ ಆಟಗಾರ. ಭರತ್ ಐಪಿಎಲ್‌ 2 ತಂಡಗಳ ಪರ 10 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 2021ರಲ್ಲಿ ಆರ್‌ಸಿಬಿ ತಂಡದ ಪರವೂ ಆಡಿದ್ದಾರೆ. ಇವರು ಆರ್‌ಸಿಬಿ ಪರ ಅಜೇಯ 78 ರನ್‌ ಬಾರಿಸಿದ್ದು ಅಭಿಮಾನಿಗಳ ಮನಸ್ಸಿನಲ್ಲಿ ಈಗಲೂ ಹಸಿರಾಗಿದೆ.

Story first published: Thursday, June 4, 2026, 22:01 [IST]
Other articles published on Jun 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+